DAKSHINA KANNADAHOMELATEST NEWS

ಮಂಗಳೂರು ಜೈಲಿನಲ್ಲಿ ಆರೋಪಿ ಚಡ್ಡಿಯೊಳಗೆ ಮೊಬೈಲ್‌ – ಸಿಬ್ಬಂದಿ ದಾಳಿ ವೇಳೆ ಪತ್ತೆ

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಪೊಲೀಸ್‌ ದಾಳಿ ವೇಳೆ ಬಂಧಿತ ಆರೋಪಿಯೊಬ್ಬನ ಒಳುಡುಪಿನಲ್ಲಿ ಮೊಬೈಲ್‌ ಪೋನ್‌ ಹಾಗೂ ಚಾರ್ಜರ್‌ ದೊರೆತ ಬಗ್ಗೆ ನಗರದ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ

ಜ.30ರಂದು ಮಧ್ಯಾಹ್ನದ ವೇಳೆ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಜೈಲು ಅಧೀಕ್ಷಕರು ಕಾರಾಗೃಹದ ಒಳಗಡೆಯ “ಎ” ವಿಭಾಗದ ಕೊಠಡಿ ಸಂಖ್ಯೆ 3 ರಲ್ಲಿ ಅನಿರೀಕ್ಷಿತ ತಪಾಸಣೆ ಮಾಡುತ್ತಿದ್ದರು.

ಈ ವೇಳೆ ಆರೋಪಿ ಮೊಹ್ಮದ್ ಎಂಬ ಬಂಧಿತನ ದೇಹ ಶೋಧನೆ ಮಾಡಿದ್ದಾರೆ. ಈ ವೇಳೆ  ಆತನ ಒಳುಡುಪಿನಲ್ಲಿ ಏರ್ ಟೆಲ್ ಸಿಮ್ ಕಾರ್ಡ್‌ ಮತ್ತು ಬ್ಯಾಟರಿ ಸಮೇತ 01 ಸಂಖ್ಯೆ ಕಪ್ಪು ಬಣ್ಣದ ಹೆಚ್.ಎಂ.ಡಿ.ಕೀ ಪ್ಯಾಡ್ ಮೊಬೈಲ್,  ಬಿಳಿ ಬಣ್ಣದ ಚಾರ್ಜರ್ ಕೇಬಲ್ ದೊರೆತಿದೆ.

ಈ ಬಗ್ಗೆ ವಿಚಾರಿಸಿದಾಗ ಅದು ತನ್ನದಲ್ಲ ಬದಲಾಗಿ ಮತ್ತೊಬ್ಬ ಆರೋಪಿ ಮೊಹಮ್ಮದ್ ಇಕ್ಬಾಲ್ ಎಂಬುವವನಾಗಿದ್ದು ಎಂದು ಮಾಹಿತಿ ನೀಡಿದ್ದಾನೆ. ಜೈಲಿನ ಒಳಗಡೆ ಈ ನಿಷೇಧಿತ ವಸ್ತು ಒಳಗಡೆ ಹೇಗೆ ಬಂದಿದ್ದು, ಹಾಗೂ ಯಾರ ಸಹಕಾರದಿಂದ ಬಂದಿದೆ ಎಂಬ ಬಗ್ಗೆ ಆಂತರಿಕೆ ನಡೆಯುತ್ತಿದೆ. ಜೊತೆಗೆ  ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News