• Home  
  • *ಕುಲಶೇಖರ. ಅತಿ ಮಳೆ ಗುಡುಗು ಸಿಡಿಲು ಬಡಿದು,10 ಮನೆಗಳಿಗೆ ಹಾನಿ ಸುಮಾರು 10 ಲಕ್ಷ ನಷ್ಟ ಸ್ಥಳಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಭೇಟಿ ಮತ್ತು ಅಧಿಕಾರಿ ಗಳೊಂದಿಗೆ ಚರ್ಚೆ*
- DAKSHINA KANNADA - HOME

*ಕುಲಶೇಖರ. ಅತಿ ಮಳೆ ಗುಡುಗು ಸಿಡಿಲು ಬಡಿದು,10 ಮನೆಗಳಿಗೆ ಹಾನಿ ಸುಮಾರು 10 ಲಕ್ಷ ನಷ್ಟ ಸ್ಥಳಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಭೇಟಿ ಮತ್ತು ಅಧಿಕಾರಿ ಗಳೊಂದಿಗೆ ಚರ್ಚೆ*

ಮಂಗಳೂರು 19.:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಳಪೆ ವಾರ್ಡ್ ನಂಬರ್ 51 ಸಿರ್ಲಾಪಡ್ಪು ನಲ್ಲಿ ನಿನ್ನೆ ಸಂಜೆ ಬಿದ್ದ ಅತಿಯಾದ ಮಳೆ, ಗುಡುಗು ಮತ್ತು ಸಿಡಿಲಿನಿಂದ ಸಿರ್ಲಾಪಡ್ಪು ನಲ್ಲಿ ಹೈಟೆನ್ಷನ್ ಲೈನ್ ಪ್ರಭಾವದಿಂದ ಸಿಡಿಲು ಬಡಿದು ಒಂದು ತೆಂಗಿನ ಮರ ಮತ್ತು ಮನೆಗಳಿಗೆ ಹಾನಿಯಾಗಿದ್ದು ಅನೇಕ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡು ಎಲ್ಲಾ ಮನೆಯ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗಿ ಮನೆ ಒಳಗೆ ಹಾನಿಯಾಗಿ ತುಂಬಲಾರದ ನಷ್ಟವಾಗಿದೆ, ಈ ಬಗ್ಗೆ ಈಗಾಗಲೇ ಸ್ಥಳಯ ಗ್ರಾಮ ಲೆಕ್ಕಾಧಿಕಾರಿಗಳಿಗೆ, ಮೆಸ್ಕಾಂ ಅಧಿಕಾರಿಗಳಿಗೆ ಮತ್ತು ನಗರ ಪಾಲಿಕೆಯ ಇಂಜಿನಿಯರ್ಗಳೊಂದಿಗೆ ಚರ್ಚಿಸಿ ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ರವರು ಸೂಚಿಸಿದ್ದಾರೆ.


ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ವರ್ಷ0ಪ್ರತಿ ಇದೇ ರೀತಿ ತೊಂದರೆ ಉಂಟಾಗುತ್ತಿದ್ದು ಹೈ ಟೆನ್ಶನ್ ವಯರ್ ನ ಪರಿಣಾಮ ಈ ರೀತಿ ತೊಂದರೆ ಉಂಟಾಗುತ್ತಿದ್ದು ಹೈ ಟೆನ್ಶನ್ ವಯರ್ ಮನುಷ್ಯನಿಗೆ ಕೈಗೆಟಕುವ ಎತ್ತರದಲ್ಲಿ ಇರುವುದರಿಂದ ಮತ್ತು ಎಲೆಕ್ಟ್ರಿಕ್ ವೈರ್ ಗಳು ತಾಗಿ ಅದಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿರುವುದು ದಿನನಿತ್ಯದ ಸಮಸ್ಯೆಯಾಗಿದೆ. ಈ ಬಗ್ಗೆ ಮೆಸ್ಕಾಂ ಎಂ.ಡಿ ಜಯಕುಮಾರ್ ಅವರ ಜೊತೆ ಮಾತನಾಡಿ ಕೂಡಲೇ ಈ ಪ್ರದೇಶಕ್ಕೆ ಭೇಟಿ ನೀಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳದೆ ಇದ್ದಲ್ಲಿ ಇದೊಂದು ಗಂಭೀರ ಶಾಶ್ವತ ಸಮಸ್ಯೆಯಾಗುವುದು ಎಲ್ಲರಿಗೆ ಭಯಭೀತಿ ಉಂಟಾಗುತ್ತಿದೆ ಮುಂದಕ್ಕೆ ಆಗುವ ತೊಂದರೆಯನ್ನು ಆಗದ ಹಾಗೆ ಮುನ್ನೆಚ್ಚರಿಕೆಯನ್ನು ವಹಿಸಬೇಕೆಂದು ಅಧಿಕಾರಿಗಳಿಗೆ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಹೆನ್ರಿ, ಬಾಸಿಲ್ ರೋಡ್ರಿಗೆಸ್, ಯುವ ಕಾಂಗ್ರೆಸ್ ನಾಯಕರಾದ ಬ್ರಿಸ್ಟನ್ ರೋಡ್ರಿಗೆಸ್, ಸ್ಥಳೀಯರಾದ ಶಾಂತಿ, ಸಾಂಡ್ರಾ, ಇಗ್ನೇಶಿಯಸ್, ಬಬಿತಾ ಸಿಕ್ವೇರಾ, ಸ್ಟ್ಯಾನಿ ಫರ್ನಾಂಡೆಸ್, ವಲೇರಿಯನ್, ಲಾರೆನ್ಸ್ ಉಪಸ್ಥಿತಿ ಇದ್ದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678