• Home  
  • *ಗ್ರಾಮೀಣ ಭಾಗದ ಮನೆಗಳಿಗೆ ‘ಸ್ವಾಧೀನ ಪ್ರಮಾಣ ಪತ್ರ’ (OC) ವಿನಾಯಿತಿಗೆ ಸರ್ಕಾರವನ್ನು ಆಗ್ರಹಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು*
- DAKSHINA KANNADA - HOME

*ಗ್ರಾಮೀಣ ಭಾಗದ ಮನೆಗಳಿಗೆ ‘ಸ್ವಾಧೀನ ಪ್ರಮಾಣ ಪತ್ರ’ (OC) ವಿನಾಯಿತಿಗೆ ಸರ್ಕಾರವನ್ನು ಆಗ್ರಹಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು*

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳು ಹಾಗೂ 94ಸಿ ಹಕ್ಕುಪತ್ರದಡಿ ನಿರ್ಮಿಸಲಾದ ಮನೆಗಳಿಗೆ ಸ್ವಾಧೀನ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಸದನದ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು. ‘ವಿದ್ಯುತ್ ಸಂಪರ್ಕ ಪಡೆಯಲು ಒಸಿ ವಿನಾಯ್ತಿಗಾಗಿ ಪ್ರತಿಭಟನೆ’ ಎಂಬ ವರದಿಯನ್ನು ಆಧರಿಸಿ ವಿಷಯ ಪ್ರಸ್ತಾಪಿಸಿದ ಶಾಸಕರು, ಸರ್ಕಾರದ ಪ್ರಸ್ತುತ ಆದೇಶದಲ್ಲಿರುವ ಅಸ್ಪಷ್ಟತೆಯಿಂದ ಗ್ರಾಮೀಣ ಭಾಗದ ಜನರಿಗೆ […]

Share News

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳು ಹಾಗೂ 94ಸಿ ಹಕ್ಕುಪತ್ರದಡಿ ನಿರ್ಮಿಸಲಾದ ಮನೆಗಳಿಗೆ ಸ್ವಾಧೀನ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಸದನದ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.

‘ವಿದ್ಯುತ್ ಸಂಪರ್ಕ ಪಡೆಯಲು ಒಸಿ ವಿನಾಯ್ತಿಗಾಗಿ ಪ್ರತಿಭಟನೆ’ ಎಂಬ ವರದಿಯನ್ನು ಆಧರಿಸಿ ವಿಷಯ ಪ್ರಸ್ತಾಪಿಸಿದ ಶಾಸಕರು, ಸರ್ಕಾರದ ಪ್ರಸ್ತುತ ಆದೇಶದಲ್ಲಿರುವ ಅಸ್ಪಷ್ಟತೆಯಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆ ಯಾಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತಂದರು.. ಶಾಸಕರ ಪ್ರಮುಖ ಆಗ್ರಹಗಳು:. ಆದೇಶದ ಅಸ್ಪಷ್ಟತೆ: ಸರ್ಕಾರದ ಆದೇಶ ಸಂಖ್ಯೆ (ಆರ್.ಡಿ.ಪಿ.ಆರ್. 856/ಜಿಪಿಎ/2025) ಅನ್ವಯ 1200 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಲಾಗಿದೆಯಾದರೂ, ಗ್ರಾಮೀಣ ಪ್ರದೇಶದಲ್ಲಿ ಈ ಆದೇಶದಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ.
  • ವಿನಾಯಿತಿಯ ವ್ಯಾಪ್ತಿ ಹೆಚ್ಚಳ: ಸ್ವಂತ ಖರ್ಚಿನಲ್ಲಿ ಹಾಗೂ ವಿವಿಧ ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳು, ಭೂ ಪರಿವರ್ತಿತ ಮತ್ತು ಭೂ ಪರಿವರ್ನೆಯಾಗದ ಜಮೀನಿನಲ್ಲಿ ನಿರ್ಮಿಸಲಾದ ಮನೆಗಳು ಹಾಗೂ 94ಸಿ ಹಕ್ಕುಪತ್ರದ ನಿವೇಶನಗಳಲ್ಲಿನ ಕಟ್ಟಡಗಳಿಗೆ ಒಸಿ ಕಡ್ಡಾಯದಿಂದ ಮುಕ್ತಿ ನೀಡಬೇಕು.
  • ವ್ಯಾಖ್ಯಾನ ಬದಲಾವಣೆ: ಸರ್ಕಾರದ ಆದೇಶದಲ್ಲಿರುವ ‘ನಿವೇಶನ’ ಎಂಬ ವ್ಯಾಖ್ಯಾನವನ್ನು ತೆಗೆದು ಹಾಕಿ, ಗ್ರಾಮೀಣ ಭಾಗದಲ್ಲಿರುವ ‘ಕಟ್ಟಡ’ಗಳನ್ನು ಮಾತ್ರ ಪರಿಗಣಿಸಿ ಪರಿಷ್ಕೃತ ಆದೇಶ ಹೊರಡಿಸಬೇಕು.
  • ವಿದ್ಯುತ್ ಸಂಪರ್ಕ: ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಮನೆಗಳಿಗೆ ಕಾಯಂ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಪಡೆಯುವ ನಿಯಮದಿಂದ ವಿನಾಯಿತಿ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಶಾಸಕರು ಈ ಸಂದರ್ಭದಲ್ಲಿ ಆಗ್ರಹಿಸಿದರು.
Share News