DAKSHINA KANNADAHOME

*ನಂತೂರ್ ಜಂಕ್ಷನ್‌ನಲ್ಲಿನ ಸಂಚಾರ ಸಮಸ್ಯೆ ಮತ್ತು ಅಪಘಾತ ತಡೆಗೆ ಶಾಸಕ ಶ್ರೀ ಐವನ್ ಡಿಸೋಜಾ ಅವರಿಂದ ಸ್ಥಳ ಪರಿಶೀಲನೆ*

ಮಂಗಳೂರು: ನಗರದ ಅತ್ಯಂತ ಜನನಿಬಿಡ ಹಾಗೂ ಅಪಘಾತ ವಲಯವಾಗಿ ಮಾರ್ಪಟ್ಟಿರುವ ನಂತೂರ್ ಜಂಕ್ಷನ್‌ಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ಅವರು ಭೇಟಿ ನೀಡಿ, ಸಂಚಾರಿ ಪೊಲೀಸ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗ ಳೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿದರು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು ಶಾಸಕರಿಗೆ ಇಲ್ಲಿನ ನ್ಯೂನತೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು:

ಸುರಕ್ಷತಾ ಕ್ರಮಗಳ ಕೊರತೆ: ಜಂಕ್ಷನ್‌ನಲ್ಲಿ ಸಮರ್ಪಕ ಬೀದಿ ದೀಪಗಳು, ಜೀಬ್ರಾ ಕ್ರಾಸಿಂಗ್‌ಗಳು ಮತ್ತು ರಸ್ತೆ ಸುರಕ್ಷತಾ ಸೂಚನಾ ಫಲಕಗಳಿಲ್ಲದಿರುವುದು ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ ಅರ್ಧಕ್ಕೆ ನಿಂತ ಕಾಮಗಾರಿ ರಸ್ತೆ ಅಗಲೀಕರ ಣಕ್ಕಾಗಿ ಆರಂಭಿಸಲಾದ ತಡೆಗೋಡೆ ನಿರ್ಮಾಣ ಕಾರ್ಯ ಅರ್ಧದಲ್ಲೇ ಸ್ಥಗಿತಗೊಂಡಿರುವುದು ಸಂಚಾರಕ್ಕೆ ಅಡ್ಡಿಯಾಗಿದೆ

ಬಸ್ ನಿಲ್ದಾಣದ ಗೊಂದಲ: ಬಸ್ಸುಗಳು ನಿಗದಿತ ತಂಗುದಾಣಗಳಲ್ಲಿ ನಿಲ್ಲದೆ ರಸ್ತೆಯಲ್ಲೇ ನಿಲ್ಲುತ್ತಿರುವುದು ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದೆ.

ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿ: ನಂತೂರ್ ವೃತ್ತವು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವುದರಿಂದ, ಹೆದ್ದಾರಿ ಪ್ರಾಧಿಕಾರವು ತಕ್ಷಣವೇ ಸುರಕ್ಷತಾ ಫಲಕಗಳನ್ನು ಅಳವಡಿಸಿದರೆ ಸಂಚಾರ ನಿರ್ವಹಣೆ ಸುಲಭವಾಗಲಿದೆ ಎಂದು ಪೊಲೀಸರು ತಿಳಿಸಿದರು

ಶಾಸಕರ ಭರವಸೆ:
ಅಧಿಕಾರಿಗಳ ಅಹವಾಲು ಆಲಿಸಿದ ಶಾಸಕ ಶ್ರೀ ಐವನ್ ಡಿಸೋಜಾ ಅವರು, “ಈ ಕೂಡಲೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ಕರೆದು, ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು” ಎಂದು ತಿಳಿಸಿದರು.

ಈ ವೇಳೆ ಪೊಲೀಸ್ ಅಧಿಕಾರಿಗಳಾದ ನಜ್ಮಶರೀಪ್, ಜಿ. ಕೆ. ಭಟ್, ಮಾಜಿ ಮೇಯರ್ ಗಳಾದ ಶಶಿದರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ಸ್ಥಳೀಯರಾದ ಸ್ಟ್ಯಾನ್ಲಿ ಬಂಟ್ವಾಳ್, ಜೇಮ್ಸ್ ಪ್ರವೀಣ್, ಕೇಶವ್ ಮರೋಲಿ,ಅಶೋಕ್ ಡಿ ಕೆ,ನೌಸ್ಯಾದ್, ಮತ್ತು ಇನ್ನಿತರರು ಉಪಸ್ಥಿತರಿದ್ದರು

Share News