ಮ.ನ.ಪಾ ವ್ಯಾಪ್ತಿಯ 48ನೇ ಕಂಕನಾಡಿ ವೆಲೆನ್ಸಿಯಾ ವಾರ್ಡಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದ ನಾಗುರಿ-ಮಜಾಲು ರಸ್ತೆಯ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಈ ಹಿಂದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-1ರಲ್ಲಿ ಈ ಕಾಮಗಾರಿಗೆ ಶಿಲನ್ಯಾಸವನ್ನು ನೆರವೇರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ಕೂಡಲೇ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರಕ್ಕೆ ನೀಡಲಾಗಿದ್ದ ಸುಮಾರು 65 ಕೋಟಿ ರೂ. ಅನುದಾನವನ್ನು ತಡೆಹಿಡಿಯಲಾಗಿತ್ತು. ಅದರಿಂದಾಗಿ ಈ ಕಾಮಗಾರಿ ಸಹಿತ ಎಲ್ಲವೂ ಸ್ಥಗಿತಗೊಂಡಿತ್ತು. ಅಲ್ಲದೇ ಈಗಿನ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಅನುದಾನ ಸಿಗುತ್ತಿಲ್ಲವಾಗಿದ್ದು ಕಾಮಗಾರಿ ನಡೆಸುವುದೇ ಕಷ್ಟವಾಗಿದೆ. ಹಾಗಾಗಿ ಈ ಬಗ್ಗೆ ಲೋಕೋಪಯೋಗಿ ಸಚಿವರಲ್ಲಿ ನಿರಂತರವಾಗಿ ಮನವಿ ಮಾಡಿದ ನಂತರ ತಡೆ ಹಿಡಿಯಲಾಗಿದ್ದ ಅನುದಾನ ಬಿಡುಗಡೆಯಾಗಿದ್ದು ಉಳಿಕೆ ಕಾಮಗಾರಿಯ ಅನುದಾನಗಳನ್ನು ಹೊಂದಿಸಿಕೊಂಡು ಶೀಘ್ರವಾಗಿ ಈ ಕಾಮಗಾರಿ ಮುಗಿಸುವ ಭರವಸೆಯಿದೆ. ಆ ನಿಟ್ಟಿನಲ್ಲಿ ಕೆಲಕಾಲ ಇಲ್ಲಿ ಉಂಟಾಗುವ ಅಡಚಣೆಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಮ.ನ.ಪಾ ಸದಸ್ಯರಾದ ಸಂದೀಪ್ ಗರೋಡಿ, ಹರಿಣಾಕ್ಷ ಮರೋಳಿ, ತೇಜಾಕ್ಷ ಸುವರ್ಣ, ಸುರೇಶ್ ಉಜ್ಜೋಡಿ, ವಿಜಯ ಮಜಲ್ , ದಯಾನಂದ್ ಗುರಿಕಾರ, ಕೃತಿಕ್ ಉಜ್ಜೋಡಿ, ಪ್ರಕಾಶ್ ಗರೋಡಿ, ಕಿರಣ್ ರೈ, ಸಂಧ್ಯಾ ಮಜಲ್, ಶ್ರೇಯಸ್ ಮಜಲ್, ರಾಹುಲ್ ಮಜಲ್, ಗಣೇಶ್ ನಾಗುರಿ, ಮನ್ವಿತ್, ರವಿ ಸುನಿಲ್, ತಿಲಕ್ ರಾಜ್, ಪ್ರವೀಣ್ ನಿಡ್ಡೇಲ್, ರಾಮ್ ಪ್ರಸಾದ್, ನೈನಾ, ತೇಜ ಸುವರ್ಣ, ಸೇರಿದಂತೆ ವಾರ್ಡಿನ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

