ಪುತ್ತೂರು: ಜನಪ್ರತಿನಿಧಿಯೊಬ್ಬರು ತನ್ನ ಕಾರ್ಯಕರ್ತರ ಸುಖ-ದುಃಖಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಅವರು ಮತ್ತೊಮ್ಮೆ ಮಾದರಿಯಾಗಿದ್ದಾರೆ. ಪಾಣಾಜೆ ಗ್ರಾಮದ ಯುವ ಕಾಂಗ್ರೆಸ್ ಮುಖಂಡ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಶ್ರೀಪ್ರಸಾದ್ ಅವರ ಮನೆಗೆ ತಡರಾತ್ರಿ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಮೂಲಕ ಶಾಸಕರು ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.

ಶಾಸಕರ ಈ ಅನಿರೀಕ್ಷಿತ ಭೇಟಿಯಿಂದ ಭಾವುಕರಾದ ಶ್ರೀಪ್ರಸಾದ್ ಅವರು, “ರಾತ್ರಿ ಹೊತ್ತಿನಲ್ಲೂ ಬಂದು ನನ್ನ ಆರೋಗ್ಯ ವಿಚಾರಿಸಿದ ಶಾಸಕರ ಮಾನವೀಯತೆ ನನ್ನ ಮನಸ್ಸನ್ನು ಸ್ಪರ್ಶಿಸಿದೆ. ಇಂತಹ ಕಳಕಳಿಯ ನಾಯಕತ್ವವನ್ನು ಪಡೆಯುವುದು ನಮ್ಮ ಭಾಗ್ಯ. ಅವರ ಈ ಕಾಳಜಿ ನನಗೆ ಹೆಚ್ಚಿನ ಧೈರ್ಯ ನೀಡಿದೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.. ಶಾಸಕ ಅಶೋಕ್ ರೈ ಅವರ ಈ ನಡೆಯು ಕಾಂಗ್ರೆಸ್ ಕಾರ್ಯಕರ್ತ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ

