ಪುತ್ತೂರು: ಜನಪ್ರತಿನಿಧಿಯೊಬ್ಬರು ತನ್ನ ಕಾರ್ಯಕರ್ತರ ಸುಖ-ದುಃಖಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಅವರು ಮತ್ತೊಮ್ಮೆ ಮಾದರಿಯಾಗಿದ್ದಾರೆ. ಪಾಣಾಜೆ ಗ್ರಾಮದ ಯುವ ಕಾಂಗ್ರೆಸ್ ಮುಖಂಡ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಶ್ರೀಪ್ರಸಾದ್ ಅವರ ಮನೆಗೆ ತಡರಾತ್ರಿ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಮೂಲಕ ಶಾಸಕರು ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.

ಮಾ.19 ರಂದು ಪಾಣಾಜೆ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ದಲ್ಲಿ ಶಾಸಕ ಅಶೋಕ್ ರೈ ಅವರು ಪಾಲ್ಗೊಂಡಿದ್ದರು. ಸಂಜೆ 4 ಗಂಟೆಗೆ ಆರಂಭವಾದ ಕಾರ್ಯಕ್ರಮಗಳು ರಾತ್ರಿ 11 ಗಂಟೆಯವರೆಗೂ ಮುಂದುವರಿದಿದ್ದವು. ಈ ಸಂದರ್ಭದಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಕಾರ್ಯಕರ್ತ ಶ್ರೀಪ್ರಸಾದ್ ಪಾಣಾಜೆ ಅವರು ಗೈರಾಗಿರುವುದನ್ನು ಗಮನಿಸಿದ ಶಾಸಕರು, ಕಾರ್ಯಕ್ರಮ ಮುಗಿದ ತಕ್ಷಣ ಸ್ಥಳೀಯರಲ್ಲಿ ವಿಚಾರಿಸಿದರು.
ಶ್ರೀಪ್ರಸಾದ್ ಅವರಿಗೆ ಕಾಲಿನ ಶಸ್ತ್ರಚಿಕಿತ್ಸೆಯಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ, ಶಾಸಕರು ಸಮಯದ ಮಿತಿಯನ್ನು ಲೆಕ್ಕಿಸದೆ ನೇರವಾಗಿ ಅವರ ಮನೆಗೆ ತೆರಳಿದರು. ತಡರಾತ್ರಿಯಾದರೂ ಕಾರ್ಯಕರ್ತನ ನೋವಿಗೆ ಸ್ಪಂದಿಸಿ, ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಕಾರ್ಯಕರ್ತನ ಕೃತಜ್ಞತೆ:
ಶಾಸಕರ ಈ ಅನಿರೀಕ್ಷಿತ ಭೇಟಿಯಿಂದ ಭಾವುಕರಾದ ಶ್ರೀಪ್ರಸಾದ್ ಅವರು, “ರಾತ್ರಿ ಹೊತ್ತಿನಲ್ಲೂ ಬಂದು ನನ್ನ ಆರೋಗ್ಯ ವಿಚಾರಿಸಿದ ಶಾಸಕರ ಮಾನವೀಯತೆ ನನ್ನ ಮನಸ್ಸನ್ನು ಸ್ಪರ್ಶಿಸಿದೆ. ಇಂತಹ ಕಳಕಳಿಯ ನಾಯಕತ್ವವನ್ನು ಪಡೆಯುವುದು ನಮ್ಮ ಭಾಗ್ಯ. ಅವರ ಈ ಕಾಳಜಿ ನನಗೆ ಹೆಚ್ಚಿನ ಧೈರ್ಯ ನೀಡಿದೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.. ಶಾಸಕ ಅಶೋಕ್ ರೈ ಅವರ ಈ ನಡೆಯು ಕಾಂಗ್ರೆಸ್ ಕಾರ್ಯಕರ್ತ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ