ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿಕುಮ್ಕಿ ವಿಚಾರವೇದೊಡ್ಡ ಕಿರಿಕಿರಿಯಾಗಿದೆ, ಬಹುತೇಕ ಬಡವರ ಜಾಗವನ್ನು ಅಧಿಕಾರಿಗಳು ಕುಮ್ಕಿ ಎಂದು ಬರೆದಿದ್ದಾರೆ,ಕುಮ್ಕಿ ಎಂಬುದೇ ಇಲ್ಲ, ಉಭಯ ಜಿಲ್ಲೆಯಶಾಸಕರುಗಳು, ಇಬ್ಬರುಸಂಸದರೆಲ್ಲಾ ಒಟ್ಟು ಸೇರಿ ಹೋರಾಟ ಮಾಡಿದರೆ ಕುಮ್ಕಿಯನ್ನೇ ತೆಗೆದು ಹಾಕಬಹುದು ಎಂದು ಶಾಸಕ ಅಶೋಕ್ ರೈ ಹೇಳಿದರು.

ಪುತ್ತೂರು ತಾಲೂಕಿನ ಬನ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ತಾಲೂಕಿನಲ್ಲಿನಡೆಯುತ್ತಿರುವ 18 ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿಮಾತನಾಡಿದರು. ಜನ ನಮ್ಮನ್ನು ವೋಟು ಹಾಕಿ ಗೆಲ್ಲಿಸಿದ್ದು ಅವರ ಸೇವೆ ಮಾಡಲು, ಸೇವೆ ಮಾಡಲು ನಾವು ಸಿದ್ದರಾಗಿರಬೇಕು. ಕುಮ್ಕಿ ಹೆಸರು ಹೇಳಿ ಅನೇಕ ಕೃಷಿಕರ ಜಾಗವನ್ನು ಅವರ ಹೆಸರಿಗೆ ಮಂಜೂರಾತಿ ಮಾಡಲು ಸಾಧ್ಯವಾಗುತ್ತಿಲ್ಲ.ಕುಮ್ಕಿ ಎಂಬುದು ಅಧಿಕಾರಿಗಳೇ ಮಾಡಿದ ಒಂದು ರಗಳೆ. ಇದನ್ನು ಕಿತ್ತು ಹಾಕಲು ರಾಜಕೀಯ ಬಿಟ್ಟು ಎಲ್ಲಾ ಶಾಸಕ ಸಂಸದರು ಒಂದಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.ಉಭಯ ಜಿಲ್ಲೆಯ 11 ಶಾಸಕರು,ಇಬ್ಬರು ಸಂಸದರು ಒಟ್ಟಾಗಿ ಸರಕಾರದಮುಂದೆ ಪ್ರಸ್ತಾವನೆ ಸಲ್ಲಿಸಿ ಆ ಬಗ್ಗೆ ಸರಕಾರದ ಜೊತೆ ಚರ್ಚೆ ನಡೆಸಬೇಕು ಆ ಮೂಲಕ ಕುಮ್ಕಿ ಸಮಸ್ಯೆ ಬಗೆಹರಿಸಬಹುದಾಗಿದೆ. ಇಂಥಹ ಕೆಲಸ ಮಾಡಲೆಂದೇ ಜನ ನಮ್ಮನ್ನು ಆರಿಸಿ ಕಳಿಸಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಶಾಸಕ ರೈ ಹೇಳಿದರು.
ಒಂದೇ ಬಸ್ಸಲ್ಲಿ ಹೋದರೂ ಅರ್ಧಕ್ಕೆ ತಲುಪುವಾಗ ರಾಜಕೀಯ ಆಗಬಹುದು:
ಒಂದು ವೇಳೆ ಹೋರಾಟ ಮಾಡೀಣ ಎಂದು ಒಟ್ಟಿಗೇ ಒಂದೇ ಬಸ್ಸಲ್ಲಿ ಹೋದರೂ ಅರ್ಧ ತಲುಪುವಾಗಲೇ ಕಾಂಗ್ರೆಸ್ ಬಿಜೆಪಿ ಜಗಳ ಆಗಿ ಅವರು ಅವರ ದಾರಿ ಇವರು ಇವರ ದಾರಿ ಹಿಡಿಯಬಹುದು ಎಂದು ಹೇಳಿದ ಶಾಸಕರು ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಾವು ಜನರ ಸೇವೆ ಮಾಡಲು ಹಿಂದೇಟು ಹಾಕಬಾರದು.ಚುನಾವಣೆಯ ಸಮಯದಲ್ಲಿಮಾತ್ರ ರಾಜಕೀಯಮಾಡಿದರೆ ಸಾಕು ಉಳಿದ ದಿನ ಅಭಿವೃದ್ದಿ ಕೆಲಸ ಮಾಡೋಣ,ಜನಸೇವೆ ಮಾಡೋಣ ಎಂದು ಶಾಸಕರು ಮನವಿಮಾಡಿದರು.
ವೇದಿಕೆಯಲ್ಲಿ ತಹಶಿಲ್ದಾರ್ ಕೂಡ್ಲಿಗಿ, ಅಕ್ರಮ ಸಕ್ರಮ ಸಮಿತಿಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ,ರೂಪರೇಖಾ ಆಳ್ವ ,ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಇದ್ದರು.


