ಪುತ್ತೂರು: ವಿಟ್ಲ ಮುಡೂರು ಗ್ರಾಮದ ಮಾಣಾಜೆ ಮೂಲೆಯಲ್ಲಿ ಕಳೆದ 25 ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ರಸ್ತೆ ವಿವಾದವನ್ನು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬಗೆಹರಿಸಲಾಗಿದ್ದು, ವಿವಾದ ಇತ್ಯರ್ಥಪಡಿಸಿದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದ್ದಾರೆ.

ಮಾಣಾಜೆ ಮೂಲೆಯಲ್ಲಿ ಸುಮಾರು 15 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ರಸ್ತೆಗಾಗಿ ಹೋರಾಟ ಮಾಡಿದ್ದರೂ ಅದು ವ್ಯರ್ಥವಾಗಿತ್ತು. ಅನೇಕ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡಿದ್ದರೂ ವಿವಾದ ಇತ್ಯರ್ಥಪಡಿಸುವಲ್ಲಿ ಸಫಲರಾಗಿರಲಿಲ್ಲ. ಈ ವಿಚಾರವನ್ನು ಗ್ರಾಮದ ಹಿರಿಯರಾದ ಪೂವಪ್ಪ ಮೂಲ್ಯ ಎಂಬವರು ಶಾಸಕ ಅಶೋಕ್ ರಐ ಗಮನಕ್ಕೆ ತಂದಿದ್ದಾರೆ. ಶಾಸಕರು ಮತ್ತು ವಿಟ್ಲ ಮುಡೂರು ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರ ಮೂಲಕ ಜಾಗದ ಮಾಲಿಕರ ಜೊತೆ ಸೌಹಾರ್ಧ ಮತುಕತೆ ನಡೆಸಿ ವಿವಾದವನ್ನು ಇತ್ಯರ್ಥಪಡಿಸಿದ್ದಾರೆ. ವಿವಾದ ಇತ್ಯರ್ಥವಾದ ಬಳಿಕ ಮಾಣಾಜೆ ಮೂಲೆಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.
ನಮ್ಮ ಏರಿಯಾಗೆ ರಸ್ತೆ ಆಗುತ್ತದೆ ಎಂದು ನಾವು ಕನಸಲ್ಲೂ ಗ್ರಹಿಸಿರಲಿಲ್ಲ. ಶಾಸಕ ಅಶೋಕ್ ರೈ ಅವರ ಸೌಹಾರ್ಧ ಮಾತುಕತೆಯ ಫಲಪ್ರದದಿಂದ ನಮಗೆ ರಸ್ತೆ ನಿರ್ಮಾಣವಾಗಿದೆ. ಇದು ಅತ್ಯಂತ ಸಂತೋಷದ ಕ್ಷಣವಾಗಿದೆ. ನಮ್ಮ ಮನೆಗಳಿಗೆ ತೆರಳಲು ರಸ್ತೆ ನಿರ್ಮಾಣ ಮಡಿಕೊಟ್ಟ ಶಾಸಕರನ್ನು ಅಭಿನಂದಿಸುತ್ತೇವೆ ಎಂದು ರಸ್ತೆ ಫಲಾನುಭವಿ
ಪೂವಪ್ಪ ಮೂಲ್ಯ, ತಿಳಿಸಿದರು


