canaratvnews

ಗೋ ಗ್ಯಾಸ್ ನಿಂದ ಆಟೋಗಳಿಗೆ 100 ರೂ ದರ ನಿಗಧಿ ಶಾಸಕ ಅಶೋಕ್ ರೈ ಮಾತುಕತೆ ಎಫೆಕ್ಟ್

ಪುತ್ತೂರು: ಪುತ್ತೂರಿನಲ್ಲಿರುವ ಗೋ ಗ್ಯಾಸ್ ಸಂಸ್ಥೆಯವರು ಆಟೋ ಗ್ಯಾಸ್ ಅಧಿಕ ಧರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಪುತ್ತೂರಿನಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿ ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಶಾಸಕ ಅಶೋಕ್ ರೈ ಗೆ ಮನವಿ ಮಾಡಿದ್ದರು. ಮಧ್ಯಾಹ್ನ ಎ ಸಿ ಕಚೇರಿಯಲ್ಲಿ ಗ್ಯಾಸ್ ವಿತರಕರ ಸಭೆ ನಡೆಸಿದ ಶಾಸಕರು ಹೆಚ್ಚು ದರ ವಸೂಲಿ ಮಾಡದಂತೆ ಸೂಚನೆ ನೀಡಿದ್ದು ಇದರ ಫಲವಾಗಿ ಇಂದು ಗೋ ಗ್ಯಾಸ್ ಸಂಸ್ಥೆಯವರು 120 ರ ಬದಲಾಗಿ 100 ರೂಗೆ ಗ್ಯಾಸ್ ನೀಡಲು ಮುಂದಾಗಿದ್ದಾರೆ.
ಪುತ್ತೂರಿನಲ್ಲಿರುವ ಬೇರೆ ಗ್ಯಾಸ್ ಪಂಪ್ ಗಳಲ್ಲಿ 92 ರೂಗೆ ಗ್ಯಾಸ್ ನೀಡಿದರೆ ಗೋಗ್ಯಾಸ್ ಮಾತ್ರ 120 ರೂ ದರ ನಿಗಧಿ ಮಾಡಿತ್ತು ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಗೋ ಗ್ಯಾಸ್ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನಾ ನಿರತ ಆಟೋ ಚಾಲಕರು ಗೋಗ್ಯಾಸ್ ನಿಂದ ಅನ್ಯಾಯವಾಗುತ್ತಿದೆ ಎಂದು ಶಾಸಕ ಅಶೋಕ್ ರೈ ಕಚೇರಿ ಮುಂದೆ ಜಮಾಯಿಸಿ ಶಾಸಕರಲ್ಲಿ ಮನವಿ ಮಾಡಿ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಮಧ್ಯಾಹ್ನ ಸಹಾಯಕ ಕಮಿಷನರ್ ಕಚೇರಿಯಲ್ಲಿ

ಗ್ಯಾಸ್ ವಿತರಕರ ಸಭೆ ನಡೆಸಿದ ಶಾಸಕರು ಗ್ಯಾಸ್ ಕೊರತೆಯ ಕಾರಣ‌ಮುಂದಿಟ್ಟು ಆಟೋ ಗ್ಯಾಸ್ ದರ ಹೆಚ್ಚು ಮಾಡದಂತೆ ಸೂಚನೆ ನೀಡಿದ್ದು ಮಾತ್ರವಲ್ಲದೆ ನಿಯಮ ಮೀರಿ ದರ ಹೆಚ್ಚು ಮಾಡಿದಲ್ಲಿ ಪಂಪ್ ಗೆ ಬೀಗ ಜಡಿದು ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದುರು. ಇದೀಗ ಶಾಸಕ ರ ಸೂಚನೆ ಮೇರೆಗೆ ಆಟೋ ಗ್ಯಾಸ್ ದರವನ್ನು ಕಡಿಮೆ ಮಾಡಿದ್ದಾರೆ.

ಶಾಸಕ ಅಶೋಕ್ ಕುಮಾರ್ ಅವರು ಮಾತನಾಡಿ ಮಾತನಾಡಿ ಗೋಗ್ಯಾಸ್ ಮಾಲಕರು ನಿಗಧಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ನನ್ನ ಬಳಿ ಆಟೋ ಚಾಲಕರು ದೂರು ನೀಡಿದ್ದರು. ಈ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ಕರೆದು ಗ್ಯಾಸ್ ವಿತರಕರಿಗೆ ಸೂಚನೆಯನ್ನು ನೀಡಿದ್ದೆ. ಇಂದು ಗೋಗ್ಯಾಸ್ ಮಾಲಕರು ಕರೆ ಮಾಡಿ ನಾಳೆಯಿಂದ 100₹ ಗೆ ಆಟೋ ಚಾಲಕರಿಗೆ ಗ್ಯಾಸ್ ಪೂರೈಸುವುದಾಗಿ ತಿಳಿಸಿದ್ದಾರೆ.

Share News
Exit mobile version