ಪುತ್ತೂರು; ಚುನಾವಣಾ ಸಮಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ, ಮನೆ ಬಾಗಿಲಿಗೆ ಬಂದು ನಿಮ್ಮ ಜಾಗದ ಹಕ್ಕು ಪತ್ರವನ್ನು ಕೊಡುವುದಾಗಿ ಹೇಳಿದ್ದೇವು ಆ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಹೆಚ್ಚಾಗಿ ಬಡವರ ಕಡತಗಳೇ ಕಂದಾಯ ಕಚಢರಿಯಲ್ಲಿತ್ತು. ಉಳ್ಳವರು ಕೊಡು ಕೊಳ್ಳುವಿಕೆಯಲ್ಲಿ ಈ ಹಿಂದೆ ಮಾಡಿಸಿಕೊಂಡಿದ್ದಾರೆ. ಶಕ್ತಿ ಇಲ್ಲದ ಬಡವನ ಕಡತ ಕಚೇರಿಯಲ್ಲೇ ಗಂಟು ಹಾಕಿ ಇಟ್ಟಿದ್ರು ಆದರ ಗಂಟು ಬಿಚ್ಚಿ ವಿಲೇವಾರಿ ಮಾಡುತ್ತಿದ್ದೇನೆ ಎಂದು ಶಾಸಕರು ಹೇಳಿದರು. ಅವರು ನಿಡ್ಪಳ್ಳಿ ಗ್ರಾಪಂ ಸಭಾಂಗದಲ್ಲಿ ನಡೆದ 24 ನೇ ಅಕ್ರಮ ಸಕ್ರಮ ಬೈಠಕ್ ಮತ್ತು 94 ಸಿ ಹಕ್ಕು ಪತ್ರ ವಿತರಿಸಿ ಮಾತನಾಡಿದರು

ದುಡ್ಡು ಕೊಡಬೇಡಿ
ಅಕ್ರಮ ಸಕ್ರಮ ಮಾಡಲು ಯಾರೂ ದುಡ್ಡು ಕೊಡಬೇಕಾದ ಅಗತ್ಯವಿಲ್ಲ. ಈ ಹಿಂದೆ ದುಡ್ಡು ಕೊಟ್ಟು ಅಬ್ಯಾಸವಾಗಿ ಬಿಟ್ಟಿದೆ ಅದನ್ನು ಮುಂದುವರೆಸಬೇಡಿ. ನಿಮ್ಮ ಕೆಲಸ ಆಗಲು ಲಂಚ ಕೊಡಬಾರದು,ಭೂಮಿ ನಿಮ್ಮದು ಅದರ ಹಕ್ಕುದಾರರು ನೀವೇ ಆಗಿದ್ದೀರಿ. ಲಂಚಕ್ಕೆ ಬೇಡಿಕೆ ಇಟ್ಟರೆ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ಸಭೆಯಲ್ಲಿ ಮನವಿ ಮಾಡಿದರು.
ಘಠಾನುಘಟಿಗಳು ಇದ್ರು ಮೆಡಿಕಲ್ ಕಾಲೇಜು ಆಗಿಲ್ಲ ಯಾಕೆ?
ಪುತ್ತೂರಿನಲ್ಲಿ ಘಟಾನುಘಟಿ ರಾಜಕಾರಣಿಗಳು, ಶಾಸಕರು, ಮಂತ್ರಿಗಳಾದವರು,ಉನ್ನತ ಹುದ್ದೆಯಲ್ಲಿದ್ದವರಿದ್ರೂ ಯಾಕೆ ಮೆಡಿಕಲ್ ಕಾಲೇಜು ತರಲು ಸಾಧ್ಯವಾಗಿಲ್ಲ. ನಾನು ಮೆಡಿಕಲ್ ಕಾಲೇಜಿಗೆ ಹೋರಾಟ ಮಾಡುವಾಗ ಅದಕ್ಕೆ ಕೆಲವರು ವ್ಯಂಗ್ಯವಾಡಿದ್ರು ಈಗ ಕಾಲೇಜು ಬಂದಿಲ್ವ ಎಂದು ಶಾಸಕರು ಪ್ರಶ್ನಿಸಿದರು.
ಧರ್ಮದ ಹೆಸರಲ್ಲಿ ವೋಟು ಕೇಳಬೇಡಿ:
ಚುನಾವಾಣೆ ಬಂದಾಗ ಧರ್ಮದ ಹೆಸರಲ್ಲಿ ವೋಟು ಕೇಳುವ ಅಬ್ಯಾಸ ಬಿಟ್ಟುಬಿಡಿ. ಅಭಿವೃದ್ದಿ ಮಾಡಿ ವೋಟು ಕೇಳಿ. ಜನರ ಭಾವನೆ ಕೆರಳಿಸಿ ವೋಟು ಪಡೆದರೆ ಅಥವಾ ಮತದಾರ ವೋಟು ಹಾಕಿದ್ರೆ ನಿಮ್ಮೂರು ಅಭಿವೃದ್ದಿಯಾಗುತ್ತದಾ ಎಂದು ಶಾಸಕರು ಪ್ರಶ್ನಿಸಿದರ
ಅಭಿವೃದ್ದಿ ಮತ್ತು ಬಡವರ ಫೈಲುಗಳು ನಿರಂತರ ಚಲಿಸುತ್ತಿದೆ: ಬಡಗನ್ನೂರು
ಅಶೋಕ್ ರೈ ಶಾಸಕರಾದ ಬಳಿಕ ಪುತ್ತೂರಿನಲ್ಲಿ ಧೂಳು ತಿನ್ನುತ್ತಿದ್ದ ಬಡವರ ಫೈಲುಗಳು ವಿಲೇವಾರಿಯಾಗುತ್ತಿದೆ ಜೊತೆಗೆ ಅಭಿವೃದ್ದಿಯ ಕಡತಗಳು ಪುತ್ತೂರಿನಿಂದ ಬೆಂಗಳೂರಿಗೆ ತಲುಪುತ್ತಿದೆ ಇದು ಅಭಿವೃದ್ದಿಯ ಇಚ್ಚಾಶಕ್ತಿಗೆ ಸಾಕ್ಷಿಯಾಗಿದೆ ಎಂದು ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಹೇಳಿದರು.
ಚುನಾವಣಾ ಸಮಯದಲ್ಲಿ ಏನು ಮಾತು ಕೊಟ್ಟಿದ್ದೇವೆಯೋ ಅದನ್ನು ಶಾಸಕರು ಈಡೇರಿಸಿದ್ದಾರೆ. ಬಾಕಿ ಇದ್ದ 20 ಸಾವಿರ ಕಡತಗಳು ಇಂದು ಬಡವರ ಮನೆಯಲ್ಲಿ ದಾಖಲೆಯಾಗಿ ಸೇರಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕೆಲಸಗಳು ನಡೆಯಲಿದೆ ಎಂದು ಹೇಳಿದರು.
ಮೆಡಿಕಲ್ ಕಾಲೇಜು, ಕುಡಿಯುವ ನೀರು, ಮನೆ ನಿವೇಶನ, ವಾಸ್ತವ್ಯಕ್ಕೆ ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಬಡವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಶಾಸಕರ ಮುತುವರ್ಜಿ ಶ್ಲಾಘನೀಯ ಎಂದು ಹೇಳಿದರು.
ರಸ್ತೆಗಳ ಅಭಿವೃದ್ದಿಯಾಗುತ್ತಿದೆ. ಇದುವರೆಗೂ ಡಾಮರು ಕಾಣದ ರಸ್ತೆಗಳು, ಗ್ರಾಮೀಣ ರಸ್ತೆಗಳು ಇಂದು ಕಾಂಕ್ರೀಟ್ ಮಯವಾಗಿದೆ. ಪುತ್ತೂರಿನಲ್ಲಿ ಅಭಿವೃದ್ದಿಯಾಗುತ್ತಿದೆ ಎಂಬುದು ಜನರಿಗೆ ಮನದಟ್ಟಾಗಿದೆ. ಮುಂದಿನ ಚುನಾವಣೆಯಲ್ಲಿ ಶಾಸಕರಿಗೆ ಜನಾಶೀರ್ವಾದ ದೊರೆಯಲಿದೆ ಎಂದು ಬಡಗನ್ನೂರು ಹೇಳಿದರು.
ಶಾಸಕರಿಂದ ಅದ್ಬುತ ಕೆಲಸ: ಕೂಡ್ಲಿಗಿ
ಬಡವರ ಕೆಲಸ ಮಾಡಿಸುವ ಮೂಲಕ ಕ್ಷೇತ್ರದಲ್ಲಿ ಅದ್ಬುತ ಕೆಲಸಗಳು ನಡೆಯುತ್ತಿದೆ ಎಂದು ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಶಿಲ್ದಾರ್ ಕೂಡ್ಲಿಗಿ ಹೇಳಿದರು.
ಎಷ್ಟೋ ವರ್ಷದಿಂದ ಬಾಕಿ ಇದ್ದ ಕಡತಗಳು ಕಳೆದ ಎರಡು ವರ್ಷಗಳಿಂದ ವಿಲೇವಾರಿಯಾಗುತ್ತಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅಕ್ರಮ ಸಕ್ರಮ ಬೈಠಕ್ ನಡೆಯುತ್ತಿದೆ, ಇದು ಶಾಸಕರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಇದ್ದರು. ಕಂದಾಯ ನಿರೀಕ್ಷ ಚಂದ್ರ ನಾಯ್ಕ್ ಸ್ವಾಗತಿಸಿ ವಂದಿಸಿದರು.