canaratvnews

ದುಬೈನಲ್ಲಿ ಎಂಸಿಸಿ ಬ್ಯಾಂಕ್ ಎನ್ಆರ್‌ಐ ‘ಅಂತರ್ದೃಷ್ಟಿ ಮತ್ತು ಸಂವಾದ’ ಸಭೆ

ದುಬೈ: ಎಂಸಿಸಿ ಬ್ಯಾಂಕ್ ಜೂನ್ 15ರಂದು ದುಬೈಯ ಕರಾಮಾದ ವಿಜಿ ರೆಸ್ಟೋರೆಂಟ್‌ನಲ್ಲಿ ‘ಅಂತರ್ದೃಷ್ಟಿ ಮತ್ತು ಸಂವಾದ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವನ್ನು ದುಬೈನಲ್ಲಿ ನೆಲೆಸಿರುವ ಪ್ರಸಿದ್ಧ ಮಂಗಳೂರು ಮೂಲದ ವ್ಯಕ್ತಿ ಶ್ರೀ ಡಯಾನ್ ಡಿಸೋಜಾ ಇವರು ನಡೆಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಡಯಾನ್’ರವರು, ಪ್ರಸ್ತುತ ಬ್ಯಾಂಕಿಂಗ್ ಪರಿಸ್ಥಿತಿ ಮತ್ತು ಎಂಸಿಸಿ ಬ್ಯಾಂಕ್‌ನ ಸ್ಥಿತಿಗತಿಯ ಬಗ್ಗೆ ಪ್ರಸ್ತಾಪಿಸಿದರು.

ಮಂಗಳೂರು ಮೂಲದ ಮತ್ತೊಬ್ಬ ಪ್ರಖ್ಯಾತ ಸಮುದಾಯ ನಾಯಕ ಹಾಗೂ ದಾಯ್ಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಸಮುದಾಯವನ್ನು ಒಂದು ಗುರಿಯತ್ತ ಏಕಮತದಿಂದ ಒಗ್ಗೂಡಿಸುವ ಮಹತ್ವದ ಕುರಿತು ಮಾತನಾಡಿದರು.ನಂತರ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಅನಿಲ್ ಲೋಬೊ ಅವರೊಂದಿಗೆ ವಿಚಾರ ವಿನಿಮಯ ನಡೆಯಿತು.

ಅವರು ಬ್ಯಾಂಕ್‌ನ ಪ್ರಗತಿ, ಅಧ್ಯಕ್ಷ ಸ್ಥಾನ ಸ್ವೀಕರಿಸುವ ಮೊದಲು ಹಾಗೂ ನಂತರದ ಸ್ಥಿತಿ ಮತ್ತು ಆ ವರ್ಷಗಳಲ್ಲಿ ಕಂಡ ಅಭಿವೃದ್ಧಿಯ ಕುರಿತು ವಿವರಿಸಿದರು. ಅವರು ಎಂಸಿಸಿ ಬ್ಯಾಂಕ್‌ನ ಇತಿಹಾಸವನ್ನು ಸವಿವರವಾಗಿ ವಿವರಿಸಿದರು. ಜೊತೆಗೆ ಹೊಸ ಶಾಖೆಗಳ ಸ್ಥಾಪನೆ ಮತ್ತು ಆನ್‌ಲೈನ್ ಹಾಜರಾತಿ ಮೂಲಕ ಬ್ಯಾಂಕ್ ವಿಸ್ತರಣೆಯ ಭವಿಷ್ಯ ಯೋಜನೆಗಳನ್ನೂ ಹಂಚಿಕೊಂಡರು.


ಈ ಕಾರ್ಯಕ್ರಮವು ದುಬೈಯ ವಿವಿಧ ಉದ್ಯಮಿಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಸ್ವಯಂಸೇವಕರನ್ನು ಒಂದೆಡೆ ಸೇರಿಸಿ ಸಾರ್ಥಕವಾದ ಸಂವಾದ ಮತ್ತು ನೆಟ್’ವರ್ಕಿಂಗ್‌ಗೆ ವೇದಿಕೆಯಾಯಿತು.


ಜೋಸೆಫ್ ಮಾಥಿಯಾಸ್, ಸ್ಟೀಫನ್ ಮಿನೇಜಸ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರೋಶನ್ ಡಿಸಿಲ್ವಾ ನಿರ್ವಹಿಸಿದರೆ, ಆಲ್ವಿನ್ ಪಿಂಟೊ ಧನ್ಯವಾದ ನೀಡಿದರು.

Share News
Exit mobile version