canaratvnews

ಸಂತ ಪೌಲರನ್ನು ಜೀವನವನ್ನು ಅರಿತು ಅವರಂತೆ ನಾವೆಲ್ಲರೂ ಯೇಸುವಿನ ಸಾಕ್ಷಿಗಳುಗಬೇಕೆಂದು ವಂದನಿಯ ಸ್ವಾಮಿ ರಿಚರ್ಡ್ ಡಿ ಸೋಜಾ

ಮಂಗಳೂರು ಜೂನ್ 29  ವಿಟ್ಲ  ಸಂತ ಪೌಲರ ದೇವಾಲಯ, ದೇಲಂತಬೆಟ್ಟು ಇದರ ಪಾಲಕ ರಾದ, ಸಂತ ಪೌಲಾರ ಹಬ್ಬವನ್ನು ಜೂನ್ 29 ರಂದು ಭಾನುವಾರ ವಿಜ್ರರಂಭನೆಯಿಂದ ಆಚರಿಸಲಾಯಿತು.

ಧರ್ಮಕೇಂದ್ರದ ಧರ್ಮ ಗುರುಗಳಾದ ವಂದನಿಯ ಸ್ವಾಮಿ ರಿಚರ್ಡ್ ಡಿ ಸೋಜಾ ರವರು ಕೃತಜ್ಞತಾ ಬಲಿ ಪೂಜೆಯನ್ನು ಅರ್ಪಿಸಿದರು.

ತಮ್ಮ ಪ್ರಬೋಧನೆಯಲ್ಲಿ, ” ಸಂತ ಪೌಲರನ್ನು ಜೀವನವನ್ನು ಅರಿತು ಅವರಂತೆ ನಾವೆಲ್ಲರೂ ಯೇಸುವಿನ ಸಾಕ್ಷಿಗಳುಗಬೇಕೆಂದು ಕರೆಕೊಟ್ಟರು.”

ಸ್ಥಾಪಕ ಧರ್ಮ ಗುರುಗಳಾದ ವಂದನಿಯ ಪೀಟರ್ ಸೇರಾವೊ ರವರು, ಬಲಿಪೂಜೆಯಲ್ಲಿ ಭಾಗವಹಿಸಿ, ದಾನಿಗಳಿಗೆ ಮತ್ತು ಪೋಷಕರಿಗೆ ಮೋಂಬತ್ತಿಯನ್ನು ನೀಡಿ ಗೌರವಿಸಿದರು.

ಪೂಜೆಯ ನಂತರ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಂದ ಎಲ್ಲ ಭಕ್ತರಿಗೆ ಊಟದ ವ್ಯವಸ್ಥೆ ಮಾಡ ಲಾಗಿತ್ತು.
ಬ್ಯಾಂಡ್ ವಾದ್ಯದ ಸಂಗೀತಕ್ಕೆ ನಲಿದು ಕುಪ್ಪಳಿಸಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರು ಶ್ರೀಮತಿ ಸೆಲಿನ್ ಡಿ ಸೋಜಾ, ಕಾರ್ಯದರ್ಶಿ ಶ್ರೀ ರಾಬರ್ಟ್ ಡಿ ಸೋಜಾ ಪಾಲನಾ ಆಯೋಗಗಳ ಸಂಚಾಲಕರಾದ ಶ್ರೀ ಆಲ್ಬರ್ಟ್ ಫೆಲಿಕ್ಸ್ ಡಿ ಸೋಜಾ ರವರು ಉಪಸ್ಥಿತರಿದ್ದರು.

Share News
Exit mobile version