• Home  
  • ಮಾಣಿಲ ಕಾಮಜಲು ಫ್ರೆಂಡ್ಸ್ ಕ್ಲಬ್ (KFC) ದಶಮಾನೋತ್ಸವ: ಜೂನ್ 28ಕ್ಕೆ ಉಚಿತ ಆಂಬುಲೆನ್ಸ್ ಲೋಕಾರ್ಪಣೆ
- LATEST NEWS

ಮಾಣಿಲ ಕಾಮಜಲು ಫ್ರೆಂಡ್ಸ್ ಕ್ಲಬ್ (KFC) ದಶಮಾನೋತ್ಸವ: ಜೂನ್ 28ಕ್ಕೆ ಉಚಿತ ಆಂಬುಲೆನ್ಸ್ ಲೋಕಾರ್ಪಣೆ

ವಿಟ್ಲ: ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಿಂತನೆಗಳೊಂದಿಗೆ ಮುನ್ನಡೆಯುತ್ತಿರುವ ಮಾಣಿಲದ ಪ್ರತಿಷ್ಠಿತ ಸಂಘಟನೆ ಕಾಮಜಲು ಫ್ರೆಂಡ್ಸ್ ಕ್ಲಬ್ (KFC) (ರಿ.) ಇದರ ಹತ್ತನೇ ವರ್ಷದ ದಶಮಾನೋತ್ಸವದ ಸವಿನೆನಪಿಗಾಗಿ, ಸಂಸ್ಥೆಯ ಕನಸಿನ ಯೋಜನೆಯಾದ ಉಚಿತ/ತುರ್ತು “ಆಂಬುಲೆನ್ಸ್ ಲೋಕಾರ್ಪಣೆ” ಹಾಗೂ ಬೃಹತ್ ಸಭಾ ಸಮಾರಂಭವು ಜೂನ್ 28ರ ಭಾನುವಾರದಂದು ಶ್ರೀ ಕ್ಷೇತ್ರ ಕುಕ್ಕಾಜೆಯಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ. ಕಳೆದ ಹತ್ತು ವರ್ಷಗಳಿಂದ ಮಾಣಿಲ ಪರಿಸರದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಕಾಮಜಲು ಫ್ರೆಂಡ್ಸ್ ಕ್ಲಬ್, ಇದೀಗ ಸ್ಥಳೀಯ ಸಾರ್ವಜನಿಕರ […]

Share News

ವಿಟ್ಲ: ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಿಂತನೆಗಳೊಂದಿಗೆ ಮುನ್ನಡೆಯುತ್ತಿರುವ ಮಾಣಿಲದ ಪ್ರತಿಷ್ಠಿತ ಸಂಘಟನೆ ಕಾಮಜಲು ಫ್ರೆಂಡ್ಸ್ ಕ್ಲಬ್ (KFC) (ರಿ.) ಇದರ ಹತ್ತನೇ ವರ್ಷದ ದಶಮಾನೋತ್ಸವದ ಸವಿನೆನಪಿಗಾಗಿ, ಸಂಸ್ಥೆಯ ಕನಸಿನ ಯೋಜನೆಯಾದ ಉಚಿತ/ತುರ್ತು “ಆಂಬುಲೆನ್ಸ್ ಲೋಕಾರ್ಪಣೆ” ಹಾಗೂ ಬೃಹತ್ ಸಭಾ ಸಮಾರಂಭವು ಜೂನ್ 28ರ ಭಾನುವಾರದಂದು ಶ್ರೀ ಕ್ಷೇತ್ರ ಕುಕ್ಕಾಜೆಯಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ.

ಕಳೆದ ಹತ್ತು ವರ್ಷಗಳಿಂದ ಮಾಣಿಲ ಪರಿಸರದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಕಾಮಜಲು ಫ್ರೆಂಡ್ಸ್ ಕ್ಲಬ್, ಇದೀಗ ಸ್ಥಳೀಯ ಸಾರ್ವಜನಿಕರ ತುರ್ತು ಆರೋಗ್ಯ ಸೇವೆಗಾಗಿ ಉಚಿತ ಆಂಬುಲೆನ್ಸ್ ಲೋಕಾರ್ಪಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.

ಜೂನ್ 28ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಶ್ರೀ ಕ್ಷೇತ್ರ ಕುಕ್ಕಾಜೆಯಲ್ಲಿ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಭಾರತದ ಪ್ರಸಿದ್ಧ ಸಂಸ್ಥೆಯಾದ ‘SLV BOOKS PVT LTD INDIA’ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿವಾಕರ ದಾಸ ಅವರು ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿ, ಉದ್ಘಾಟಿಸಲಿದ್ದಾರೆ ಧಾರ್ಮಿಕ ಮತ್ತು ಸಮಾಜದ ಮುಖಂಡರ ಸಮ್ಮುಖದಲ್ಲಿ ಬೃಹತ್ ಸಭಾ ಸಮಾರಂಭ ಆಯೋಜಿಸಲಾಗಿದೆ. ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿಗಳು ಹಾಗೂ ಸಂಘದ ಸಂಘಟನಾ ಮಾರ್ಗದರ್ಶಿಗಳಾದ ಶ್ರೀ ಶ್ರೀ ಕೃಷ್ಣ ಗುರೂಜಿ ಅವರು ದಿವ್ಯ ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿ’ಸೋಜ, ದ.ಕ ಜಿಲ್ಲಾ ನಿವೃತ್ತ ಕ್ಷಯ ನಿಯಂತ್ರಣ ಅಧಿಕಾರಿ ಡಾ. ಬದರುದೀನ್ ಎಮ್. ಎನ್., ಉಪ್ಪಿನಂಗಡಿಯ ದಂತ ವೈದ್ಯರಾದ ಡಾ. ರಾಜಾರಾಮ್ K.B., ಬೆಂಗಳೂರು ಓರಿಯೆಂಟಲ್ ಇನ್ಸೂರೆನ್ಸ್ ಕಂಪೆನಿಯ ಡಿವಿಜನಲ್ ಮ್ಯಾನೇಜರ್ ಶ್ರೀ ಗೋಪಾಲ ನಾಯ್ಕ, ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ V.K., ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್‌ನ ಡಾ. ಗೀತಾ ಪ್ರಕಾಶ್ ಉಪಸ್ಥಿತರಿರಲಿದ್ದಾರೆ.

ಉದ್ಯಮಿ ಶ್ರೀ ಪುರುಷೋತ್ತಮ ಕಾರಜೆ, ಮಾಣಿಲ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶ್ರೀ ಶ್ರೀಧರ್ ಬಾಳೆಕಲ್ಲು, ಕನ್ನಡಗುಳಿಯ ಶ್ರೀ ವಿಷ್ಣು ಭಟ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮಾಣಿಲ ಘಟಕದ ಅಧ್ಯಕ್ಷ ಶ್ರೀ ಅಶೋಕ್ ಶೆಟ್ಟಿ ಐರ್ಕಾಪ್ರ ಹಾಗೂ ಸಾಮಾಜಿಕ ಮುಂದಾಳು ಶ್ರೀ ಯತೀಶ್ ಪೆರುವಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸೇವಾ ಧೈಯದ ಮುನ್ನಡೆ:”ಸೇವೆ, ಐಕ್ಯತೆ ಮತ್ತು ಮಾನವೀಯತೆ” ಎಂಬ ಧೈಯವಾಕ್ಯದೊಂದಿಗೆ ಕಳೆದ ಹತ್ತು ವರ್ಷಗಳಿಂದ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಕಾಮಜಲು ಫ್ರೆಂಡ್ಸ್ ಕ್ಲಬ್, ಊರ-ಪರವೂರ ಮಹನೀಯರ ಸಹಕಾರದಿಂದ ಇಂದು ಆಂಬುಲೆನ್ಸ್ ಲೋಕಾರ್ಪಣೆಯಂತಹ ಮಹತ್ಕಾರ್ಯವನ್ನು ಯಶಸ್ವಿಗೊಳಿಸಿದೆ. ಮುಂದಿನ ದಿನಗಳಲ್ಲೂ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಎಲ್ಲರ ಬೆಂಬಲ ಅಗತ್ಯ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಕ್ರಮಕ್ಕೆ ಸಾರ್ವಜನಿಕರು, ಹಿತೈಷಿಗಳು ಹಾಗೂ ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ KFC ಮಾಣಿಲದ ಸ್ಥಾಪಕಾಧ್ಯಕ್ಷರಾದ ಶ್ರೀಧರ್ ಪಿ. ಕೆ. ಕುಕ್ಕಾಜೆ, ಅಧ್ಯಕ್ಷರಾದ ಗಿರೀಶ್ ಕುಕ್ಕಾಜೆ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share News