ಪುತ್ತೂರು,ವಿಟ್ಲ : ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಸರ್ವತೋಮುಖ ಪ್ರಗತಿಗೆ ಹೊಸ ಆಯಾಮ ದೊರೆತಿದ್ದು, ಕೇವಲ ಆರು ತಿಂಗಳ ಅವಧಿಯಲ್ಲಿ ಒಟ್ಟು 30 ಕೋಟಿ ರೂಪಾಯಿ ಅಭಿವೃದ್ಧಿ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಮಾಣಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ತಡೆಗೋಡೆ ಹಾಗೂ ದೇವಸ್ಥಾನಗಳ ಮೂಲಸೌಕರ್ಯ ಒಳಗೊಂಡಂತೆ ಒಟ್ಟು ₹2 ಕೋಟಿ 39 ಲಕ್ಷ ವೆಚ್ಚದ ವಿವಿಧ ಪ್ರಮುಖ ಕಾಮಗಾರಿಗಳಿಗೆ ಶಾಸಕರು ಅಧಿಕೃತವಾಗಿ ಚಾಲನೆ ನೀಡಿದರು.
ಶಾಸಕರ ವಿಶೇಷ ಮುತುವರ್ಜಿಯಿಂದಾಗಿ ಈ ಬೃಹತ್ ಅನುದಾನ ಮಂಜೂರಾಗಿದ್ದು, ಇದರಲ್ಲಿ ಮುಖ್ಯವಾಗಿ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿದ್ದ ಕಾಮಜಾಲು-ಪುವನಡ್ಕ ಅಂತರ್ ರಾಜ್ಯ ರಸ್ತೆಯ ಸೇತುವೆ ನಿರ್ಮಾಣ ಕಾಮಗಾರಿಗೆ ಬರೋಬ್ಬರಿ ₹27 ಕೋಟಿ ಅನುದಾನ ಬಿಡುಗಡೆಯಾಗಿದೆ. ಮಾಣಿಲ ಗ್ರಾಮದಲ್ಲಿ ಈ ಯೋಜನೆಯಡಿ ಒಟ್ಟು 21ಕ್ಕೂ ಹೆಚ್ಚು ಪ್ರಮುಖ ಪ್ರಗತಿ ಕೆಲಸಗಳು ನಡೆಯಲಿವೆ.
* ಆರು ತಿಂಗಳಲ್ಲೇ ಒಟ್ಟು ₹30 ಕೋಟಿ ಅಭಿವೃದ್ಧಿ ಅನುದಾನ ಬಿಡುಗಡೆ
* ಕಾಮಜಾಲು-ಪುವನಡ್ಕ ಅಂತರ್ ರಾಜ್ಯ ರಸ್ತೆ ಸೇತುವೆಗೆ ₹27 ಕೋಟಿ ಮಂಜೂರಾತಿ
* ಧಾರ್ಮಿಕ ಕ್ಷೇತ್ರಗಳು ಹಾಗೂ ರಸ್ತೆಗಳ ಸುಧಾರಣೆಗೆ ಸಿಕ್ಕಿದ ಆದ್ಯತೆ
ವಿವಿಧ ಕಾಮಗಾರಿಗಳ ವಿವರ ಹಾಗೂ ಶಿಲಾನ್ಯಾಸ:
ಮಾಣಿಲ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಅಭಿವೃದ್ದಿ ಕಾಮಗಾರಿಗೆ 30 ಲಕ್ಷದ ತಡೆಗೋಡೆ ಉದ್ಘಾಟನೆ ಹಾಗೂ 5 ಲಕ್ಷದ ಕಾಮಗಾರಿ
ಶಾಸಕ ಅಶೋಕ್ ರೈ ಚಾಲನೆ ನೀಡಿದರು.
10 ಲಕ್ಷ ಅನುದಾನದಲ್ಲಿ ಮಾಣಿಲ ಗ್ರಾಮದ ಮುರುವ ನೆಕ್ಕರೆ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು.
ಇತ್ತೀಚೆಗೆ ಉದ್ಘಾಟನೆಗೊಂಡ ಕೆಳಗಿನ ಮಾಣಿಕ ಹೈದ್ರೋಸ್ ಜುಮಾ ಮಸೀದಿಗೆ ಶಾಸಕ ಅಶೋಕ್ ರೈ ಭೇಟಿ ನೀಡಿದರು.
10 ಲಕ್ಷ ಅನುದಾನದಲ್ಲಿ ಮಾಣಿಲ ಗ್ರಾಮದ ಕೇರಳ ಗಡಿ ಪ್ರದೇಶ ಓಟೆಪಡ್ಪು- ಪಡ್ಡಾಯಿಮೂಲೆ-ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.
ಮಾಣಿಲ ಗ್ರಾಮದ ಮುರುವ ಅಂಗನವಾಡಿಗೆ ಶಾಸಕ ಅಶೋಕ್ ರೈ ಭೇಟಿ ನೀಡಿದರು. ಈ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕರು 4 ಲಕ್ಷ ಅನುದಾನ ನೀಡಿ ಕಟ್ಟಡ ಕಾಮಗಾರಿ ನಡೆದಿತ್ತು.
15 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಮಾಣಿಲ ವಿಷ್ಣುಮೂರ್ತಿ ದೇವಸ್ಥಾನದ ತಡೆಗೋಡೆಯ ಉದ್ಘಾಟನೆ ನಡೆಯಿತು.
05 ಲಕ್ಷ ಅನುದಾನದಲ್ಲಿ ಮಾಣಿಲ ವಿಷ್ಣುಮೂರ್ತಿ ದೇವಸ್ಥಾನದ ಅಭಿವೃದ್ದಿ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.
ಕುದ್ದುಪದವು-ಪಕಳಕುಂಜ ಲೋಕೋಪಯೋಗಿ ರಸ್ತೆ ತಡೆಗೋಡೆ ನಿರ್ಮಾಣಕ್ಕೆ 30ಲಕ್ಣ ಅನುದಾನದಲ್ಲಿ ಕಾಮಗಾರಿಗೆ ಶಾಸಕ ಅಶೋಕ್ ರೈ ಅವರು ಶಿಲಾನ್ಯಾಸ ನಡೆಸಿದರು.
ಮಾಣಿಲ ಗ್ರಾಮದ ಕುಕ್ಕಾಜೆ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ 29 ಲಕ್ಷ ಅನುದಾನದಲ್ಲಿ ರಸ್ತೆ ಹಾಗೂ ದೇವಸ್ಥಾನದ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಶ್ರೀ ಕೃಷ್ಣ ಗುರೂಜಿಯವರು ಶಾಸಕ ಅಶೋಕ್ ರೈ ಅವರಿಗೆ ಆಶೀರ್ವಾದ ಮಾಡಿದರು.
ಮಾಣಿಲ ಗ್ರಾಮದ ತಾರಿದಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ರಸ್ತೆ ಅಭಿವೃದ್ದಿಗೆ 10 ಲಕ್ಷ ಅನುದಾನದಲ್ಲಿ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
10 ಲಕ್ಷ ಅನುದಾನದಲ್ಲಿ ಮಾಣಿಲ ಗ್ರಾಮದ ತಳೆಕ್ಕಿಮಾರ್ ಕೆಳಗಿನ ಮನೆ ರಸ್ತೆ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.
10 ಲಕ್ಷ ಅನುದಾನದಲ್ಲಿ ಮಾಣಿಲ ಗ್ರಾಮದ ದಂಡೆಪ್ಪಾಡಿ- ಬೊಳ್ಳೂರು ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.
10 ಲಕ್ಷ ಅನುದಾನದಲ್ಲಿ ಮಾಣಿಲ ಗ್ರಾಮದ ದಂಡೆಪ್ಪಾಡಿ- ಬೊಳ್ಳೂರು ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು.
15 ಲಕ್ಷ ಅನುದಾನದಲ್ಲಿ ಮಾಣಿಲ ಗ್ರಾಮದ ಶ್ರೀ ದುರ್ಗಾ ಮಹಾಲಕ್ಷ್ಮೀ ದೇವಸ್ಥಾನ ಶ್ರೀಧಾಮ ಇದರ ಅಭಿವೃದ್ದಿ ಕಾರ್ಯಗಳಿಗೆ ಶಾಸಕ ಅಶೋಕ್ ರೈ ಹಾಗೂ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಶ್ರೀ ಕೃಷ್ಣ ಗುರೂಜಿಯವರು ಶಾಸಕ ಅಶೋಕ್ ರೈ ಅವರಿಗೆ ಶಾಲೂ ಹೊದಿಸಿ ಆಶೀರ್ವದಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅವರು ಕಾಮಗಾರಿಗಳ ಸಮಗ್ರ ಮಾಹಿತಿ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್, ಮಾಣಿಲ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ವಲಯ ಅಧ್ಯಕ್ಷ ವಿಷ್ಣುಭಟ್, ಜಯರಾಮ್ ಬಲ್ಲಾಲ್, ಇಬ್ರಾಹಿಂ ಕರೀಂ ಮುಸ್ತಫ ನಾಯರ ಮೂಲೆ ಸಮೀರ್ ಪೆರುವಾಯಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಣಿಲ ಗ್ರಾಮದ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.