LATEST NEWS

ಸಮುದ್ರದ ನೀರನ್ನು ಶುದ್ಧೀಕರಿಸಿ, ತುಂಬೆ ಡ್ಯಾಮ್ ಎತ್ತರ ಹೆಚ್ಚಿಸಿ:- ಶಾಸಕ ಕಾಮತ್

ಮಂಗಳೂರು: ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನಲ್ಲಿ ಈಗಿನಿಂದಲೇ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ವಿಧಾನಸಭೆ ಅಧಿವೇಶನದಲ್ಲಿ ಕಳಕಳಿಯ ಆಗ್ರಹ ಮಾಡಿದ್ದಾರೆ.

ವಿಧಾನಸಭೆಯಲ್ಲಿ ನಡೆದ ಬರ ವಿಷಯವಾಗಿ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ನಮ್ಮ ಮಂಗಳೂರು ನಗರಕ್ಕೆ ತುಂಬೆ ಡ್ಯಾಮ್ ಆಸರೆಯಾಗಿದೆ. ಸದ್ಯ ಅದರ ಎತ್ತರ ಆರು ಮೀಟರ್ ಇದ್ದು, ಅದರಲ್ಲಿ 2-3 ಮೀಟರ್ ಹೂಳೇ ತುಂಬಿರುವ ಸಾಧ್ಯತೆಯಿದೆ. ಹಾಗಾಗಿ ಡ್ಯಾಮ್ ನ ಎತ್ತರ ಹೆಚ್ಚಿಸ ಬೇಕು. ಇದರಿಂದ ನಗರ ಭಾಗಕ್ಕೆ ಉಪಯೋಗ ವಾಗುತ್ತದೆ. ಎತ್ತರ ಹೆಚ್ಚಿಸಿದಾಗ ಸುತ್ತಮುತ್ತಲಿನ ಕೆಲವು ಪ್ರದೇಶಗಳು ಮುಳುಗಡೆಯಾಗುವ ಸಂಭವವಿದ್ದು ಅವರಿಗೆ ಅಗತ್ಯ ಪರಿಹಾರ ನೀಡಬೇಕು. ಮುಂದುವರಿದು, ತುಸು ಖರ್ಚು ವೆಚ್ಚ ಹೆಚ್ಚಾದರೂ ಸಮುದ್ರದ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೆ ನೀಡುವ ಯೋಜನೆ ಪ್ರಾರಂಭಿಸಬಹುದು. ಈಗಾಗಲೇ ಎಂ ಆರ್ ಪಿ ಎಲ್ ಕಂಪೆನಿಯವರು ಪ್ರತಿ ನಿತ್ಯ 20 ಎಂ ಎಲ್ ಡಿ ನೀರನ್ನು ಇದೇ ಮಾದರಿಯಲ್ಲಿ ಉಪಯೋಗಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ನಗರ ಭಾಗದಲ್ಲಿ ಎರಡು ಪ್ಲಾಂಟ್ ಮಾಡಿದಲ್ಲಿ ಬಹಳ ಉಪಯೋಗವಾಗುತ್ತದೆ ಎಂದರು.

Share News