• Home  
  • ಮಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಹಾಯವಾಣಿ ಕೇಂದ್ರಕ್ಕೆ ಚಾಲನೆ
- LATEST NEWS

ಮಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಹಾಯವಾಣಿ ಕೇಂದ್ರಕ್ಕೆ ಚಾಲನೆ

ಮಂಗಳೂರು, ಜೂನ್.16: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಶಾಸಕರ ಕಛೇರಿಯಲ್ಲಿ ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಹಾಯವಾಣಿ ಕೇಂದ್ರ (SIR)’ ವನ್ನು ಪ್ರಾರಂಭಿಸಲಾಗಿದೆ. ಜೂನ್ 15, ರಂದು ಈ ಹೊಸ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು, ತಿದ್ದುಪಡಿ ಮಾಡಲು ಮತ್ತು ಸರಿಯಾದ ದಾಖಲೆಗಳನ್ನು ನೀಡಿ ಹೆಸರು ಖಾತ್ರಿಪಡಿಸಿಕೊಳ್ಳಲು ಈ […]

Share News

ಮಂಗಳೂರು, ಜೂನ್.16: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಶಾಸಕರ ಕಛೇರಿಯಲ್ಲಿ ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಹಾಯವಾಣಿ ಕೇಂದ್ರ (SIR)’ ವನ್ನು ಪ್ರಾರಂಭಿಸಲಾಗಿದೆ.

ಜೂನ್ 15, ರಂದು ಈ ಹೊಸ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು, ತಿದ್ದುಪಡಿ ಮಾಡಲು ಮತ್ತು ಸರಿಯಾದ ದಾಖಲೆಗಳನ್ನು ನೀಡಿ ಹೆಸರು ಖಾತ್ರಿಪಡಿಸಿಕೊಳ್ಳಲು ಈ ಕೇಂದ್ರವು ಸಹಾಯ ಮಾಡಲಿದೆ. ಸಾರ್ವಜನಿಕರು ಮಾಹಿತಿಗಾಗಿ 8217865120 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಾಸಕ ಐವನ್ ಡಿ’ಸೋಜಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರು, “ಜನರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಮಾಹಿತಿಯ ಕೊರತೆ ಇರುತ್ತದೆ. ಈ ಸಹಾಯ ಕೇಂದ್ರವು ಜನರ ಗೊಂದಲಗಳನ್ನು ದೂರ ಮಾಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್‌ಗಳಾದ ಭಾಸ್ಕರ್ ಮೊಯಿಲಿ, ನವೀನ್ ಡಿ’ಸೋಜಾ, ಪದ್ಮನಾಭ ಪಣಿಕ್ಕರ್, ಪ್ರಕಾಶ್ ಬಿ. ಸಾಲ್ಯಾನ್, ಸತೀಶ್ ಪೆಂಗಲ್, ಅಬ್ದುಲ್ ಸಲೀಂ, ಚೇತನ್ ಕುಮಾರ್, ಮನಿಷ್ ಬೋಳಾರ್, ಬಶೀರ್ ಅಹಮದ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Share News