• Home  
  • * ಫೆಬ್ರವರಿ 01 ಮತ್ತು 02 ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ *
- DAKSHINA KANNADA - HOME

* ಫೆಬ್ರವರಿ 01 ಮತ್ತು 02 ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ *

ಮಂಗಳೂರು: ಸರಕಾರವು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅವುಗಳ ಫಲಾನುಭವಿಗಳನ್ನಾಗಿಸುವಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ಮಹತ್ತರ ಪಾತ್ರ ವಹಿಸಿದೆ. ನಾಲ್ಕು ದಶಕಗಳ ಸಾಧಕ ಕಾರ್ಯಕ್ರಮಗಳ ಮೂಲಕ ಯಶಸ್ಸಿನ ಪಥದತ್ತ ಸಾಗುತ್ತಿರುವ ಮಹಿಳಾ ಒಕ್ಕೂಟವು ಇದೀಗ ಮುಂದಿನ ಹೆಜ್ಜೆಯಾಗಿ ಮಹಿಳಾ ಸಶಕ್ತಿಕರಣಕ್ಕಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿ ಫೆಬ್ರವರಿ 01 ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಒಕ್ಕೂಟದ ಅಧ್ಯಕ್ಷೆ […]

Share News

ಮಂಗಳೂರು: ಸರಕಾರವು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅವುಗಳ ಫಲಾನುಭವಿಗಳನ್ನಾಗಿಸುವಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ಮಹತ್ತರ ಪಾತ್ರ ವಹಿಸಿದೆ. ನಾಲ್ಕು ದಶಕಗಳ ಸಾಧಕ ಕಾರ್ಯಕ್ರಮಗಳ ಮೂಲಕ ಯಶಸ್ಸಿನ ಪಥದತ್ತ ಸಾಗುತ್ತಿರುವ ಮಹಿಳಾ ಒಕ್ಕೂಟವು ಇದೀಗ ಮುಂದಿನ ಹೆಜ್ಜೆಯಾಗಿ ಮಹಿಳಾ ಸಶಕ್ತಿಕರಣಕ್ಕಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿ ಫೆಬ್ರವರಿ 01 ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ಸುಮಾರು 40 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು 125 ಮಹಿಳಾ ಮಂಡಲಗಳನ್ನು ಒಳಗೊಂಡಿದೆ. ಸಮಾನತೆಗಾಗಿ, ಸ್ವಂತಿಕೆಗಾಗಿ, ಅಸ್ಥಿತೆಗಾಗಿ, ಸ್ತ್ರೀ ವಿಮೋಚನೆಗಾಗಿ ನಿರಂತರ ಶ್ರಮಿಸುತ್ತಿದೆ. ಮಹಿಳೆಯರ ಎಲ್ಲ ಸಮಸ್ಯೆಗಳಿಗೆ ಮಹಿಳಾ ಸಬಲೀಕರಣವೇ ಪರಿಹಾರ ಎಂಬ ಉದ್ದೇಶವನ್ನಿಟ್ಟುಕೊಂಡು ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಎಲ್ಲ ವರ್ಗದ ಮಹಿಳೆಯರನ್ನು ಒಗ್ಗೂಡಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸರ್ವಾಂಗೀಣ ಬೆಳವಣಿಗೆಯನ್ನು ಅರಳಿಸುವುದರಲ್ಲಿ ಒಕ್ಕೂಟವು ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಮಹಿಳಾ ಸಶಕ್ತಿಕರಣಕ್ಕಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿ ಫೆಬ್ರವರಿ ಒಂದರಂದು ಬೆಳಿಗ್ಗೆ 8.30ಕ್ಕೆ ಬಲ್ಮಠದ ಯು.ಬಿ.ಎಮ್.ಸಿ ಮೈದಾನ (ಶಾಂತಿ ನಿಲಯ)ದಿಂದ ನೆಹರೂ ಮೈದಾನದ ತನಕ ವೈವಿಧ್ಯಮಯ ವೇಷ ಭೂಷಣಗಳಿಂದ ಅಲಂಕೃತರಾದ ಮಹಿಳಾ ಜಾಥಾ ಹೊರಡಲಿರುವುದು. ಆ ಬಳಿಕ ನೆಹರೂ ಮೈದಾನದಲ್ಲಿ ಜಾನಪದ ಕ್ರೀಡೋತ್ಸವದ ಅಂಗವಾಗಿ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆ ಮತ್ತು ಇತರ ಆಟೋಟ ಸ್ಪರ್ಧೆಗಳು ಹಾಗೂ ಕಾರ್ಯಕ್ರಮದ ಉದ್ಘಾಟನಾ ಸಮಾರಂಭನಡೆಯಲಿರುವುದು. ಆ ಬಳಿಕ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನ – 2026ರ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆ, ವಿಚಾರಗೋಷ್ಠಿ, ಮಹಿಳೆಯರ ಉತ್ಪನ್ನಗಳ ಪ್ರದರ್ಶನ, ಮಾರಾಟ, ಆಹಾರ ಮೇಳ, ಮಹಿಳೆಯರ ಆರೋಗ್ಯ ತಪಾಸಣೆ ಹಾಗೂ ಅಂಗಾಂಗ ದಾನದ ನೋಂದಣಿ. ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.

ರಾಜ್ಯದ ಮಹಿಳೆಯರ ಸಶಕ್ತಿಕರಣಕ್ಕಾಗಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಅವಶ್ಯಕತೆಯನ್ನು ಅರಿತುಕೊಂಡು ಸಮ್ಮೇಳನದ ಮೂಲಕ ಮಹಿಳೆಯರ ಸೃಜನಶೀಲತೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ಸನ್ಮಾನ್ಯ ಸಭಾಪತಿಗಳು, ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಹಾಗೂ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಮಹತ್ವದ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಹಕ್ಕೊತ್ತಾಯಗಳನ್ನು ಸಲ್ಲಿಸಲು ನಿರ್ಧರಿಸಲಾಗಿದೆ.

ರಾಜ್ಯದ ಆಯಾಯ ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಜೇತ ತಂಡಗಳಿಗೆ ರೂ. 1,00,000/-, ರೂ. 75,000/- ಮತ್ತು ರೂ. 50,000/- ನಗದು ಮತ್ತು ಭಾಗವಹಿಸಿದ ತಂಡಗಳಿಗೆ ರೂ. 10,000/- ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಸಮಾಜಕ್ಕೆ ಅಮೋಘ ಕೊಡುಗೆ ನೀಡಿದ ಮಹಿಳಾ ಸಶಕ್ತಿಕರಣದ ಸಾಧಕಿಯರನ್ನು ಗೌರವಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಮಹಿಳಾ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 1,00,000/-ನಗದು, ಫಲಕ ಮತ್ತು ಗೌರವಾರ್ಪಣೆಗಳನ್ನು ಒಳಗೊಂಡಿರುತ್ತದೆ. ಯುವ ಸಾಹಿತಿಗಳ ಬರವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 35 ವಯಸ್ಸಿನೊಳಗಿನ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಿ ಸಮ್ಮೇಳನದಲ್ಲಿ ಗೌರವಿಸಲಾಗುವುದು.

ಮಹಿಳೆಯರ ಉನ್ನತೀಕರಣಕ್ಕೆ ಕರ್ನಾಟಕ ಸರಕಾರ ಕೂಡಾ ಅನೇಕ ಯೋಜನೆಗಳನ್ನು ಜ್ಯಾರಿಗೆ ತಂದಿದ್ದು ಮಹಿಳೆಯರ ಘನತೆಯನ್ನು ಹೆಚ್ಚಿಸಿದೆ. ಇದರಿಂದ ಸ್ಪೂರ್ತಿಗೊಂಡ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ರಾಜ್ಯ ಮಟ್ಟದ ಮಹಿಳಾ ಸಮ್ಮೇಳನವನ್ನು ಆಯೋಜಿಸಿದ್ದು ಮಾಧ್ಯಮ ಬಂಧುಗಳಾದ ತಾವುಗಳು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಚಾರ ನೀಡಿ ರಾಜ್ಯದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಮಹಿಳಾ ಸಮ್ಮೇಳನವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.

Share News