ಮಂಗಳೂರು, ಮಾ 05 : ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ಬಸ್ಸು ನಿಲ್ದಾಣದಿಂದ ವಯಾ ಪಿವಿಎಸ್- ಮಲ್ಲಿಕಟ್ಟೆ-ಕುಡುಪು- ವಾಮಂಜೂರು-ಉಳಾಯಿಬೆಟ್ಟು ಮಾರ್ಗವಾಗಿ ಮೂಡುಜಪ್ಪುಗೆ ನೂತನ ಬಸ್ ಗುರುವಾರ ಪ್ರಾರಂಭಗೊಂಡಿತು.
ನಗರದ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಚಾಲನೆ ನೀಡಿದರು.

ಸುರತ್ಕಲ್-ಫರಂಗಿಪೇಟೆ ಮತ್ತು ಆಕಾಶಭವನ- ಪಡೀಲ್ಗೆ ಶೀಘ್ರವೇ ಬಸ್ ಸಂಚಾರವನ್ನು ಆರಂಭಿಸುವಂತೆ ಅವರು ತಿಳಿಸಿದರು.
ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಸಮಿತಿಯ ಸದಸ್ಯರು, ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ವಿಭಾಗೀಯ ಸಂಚಾರ ಅಧಿಕಾರಿ ಕಮಲ್ ಕುಮಾರ್, ವಿಭಾಗೀಯ ಯಾಂತ್ರಿಕ ಅಭಿಯಂತರ ವಿನಯ್ ಹಾಗೂ ವಿಭಾಗದ ಅಧಿಕಾರಿಗಳು/ ಸಿಬ್ಬಂದಿಗಳು ಹಾಜರಿದ್ದರು.
*ಮಂಗಳೂರು-ಮೂಡುಜಪ್ಪು ಮಾರ್ಗದ ನೂತನ ನಗರ ಬಸ್ ಸಮಯ: ಮಂಗಳೂರು ಬಸ್ ನಿಲ್ದಾಣದಿಂದ -ಬೆಳಿಗ್ಗೆ 7:05, 9, 11:15, ಮಧ್ಯಾಹ್ನ 1:30, 3:10, ಸಂಜೆ 5.
ಮೂಡುಜಪ್ಪುವಿನಿಂದ ಮಂಗಳೂರಿಗೆ -ಬೆಳಿಗ್ಗೆ 8, 10, ಮಧ್ಯಾಹ್ನ 12:15, 2:20, ಸಂಜೆ 4, 6 ಹೊರಡಲಿದೆ ಎಂದು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

