ಮಂಗಳೂರು: ನ 15: ಕೆಂಪು ಕಲ್ಲು ಗಣಿಗಾರಿಕೆಯ ಬಗೆಗಿನ ಗೊಂದಲಕ್ಕೆ ಸರಕಾರ ಪರಿಹಾರವನ್ನು ನೀಡಿದೆ, ಈಗ ಎಲ್ಲಾ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಪರವಾನಗಿ ಹೊಮದಿರುವವರು ಈಗಾಗಲೇ ಗಣಿಗಾರಿ ಆರಂಭ ಮಾಡಿದ್ದಾರೆ. ಈಗ ಎಲ್ಲೂ ಕಲ್ಲಿನ ಕೊರತೆ ಇಲ್ಲ ಆದರೆ ಗಣಿಗಾರಿಗೆ ಪರವಾನಿಗೆ ಕೋರಿ ಅರ್ಜಿ ಹಾಕಿದವರಿಗೆ ತಕ್ಷಣ ಪರವಾನಿಗೆ ನೀಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಕೆಡಿಪಿ ಸಭೆಯಲ್ಲಿ ಆಗ್ರಹ ಮಾಡಿದರು.

ಸಭೆಯು ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಲ್ಲು ಗಣಿಗಾರಿಕೆ ವಿಚಾರ ಬಂದಾಗ ಸಭೆಯ ಗಮನ ಸೆಳೆದ ಶಾಸಕರು ಈಗಾಗಲೇ 16 ಅರ್ಜಿಗಳು ಬಾಕಿ ಇದೆ ಎಂಬ ಮಾಹಿತಿ ಇದೆ. ಬಾಕಿ ಇರುವ ಅರ್ಜಿದಾರರಿಗೆ ಕೂಡಲೇ ಲೈಸೆನ್ಸ್ ಮಂಜೂರುಮಾಡಿ ಎಂದು ಆಗ್ರಹಿಸಿದರು. 10 ದಿನದೊಳಗೆ ಲೈಸೆನ್ಸ್ ಮಂಜೂರು ಮಾಡುವಂತೆ ಸಚಿವರು ಸೂಚನೆ ನೀಡಿದರು.