canaratvnews

ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.

ಮಂಗಳೂರು: ಕರ್ನಾಟಕ ನಾಯರ್‌ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆಯು ಮಂಗಳೂರಿನ ಕೆ.ಪಿ.ಟಿ ಬಳಿಯಿರುವ ಎಸ್‌. ಕ್ಯೂಬ್‌ ಸೆಂಟರ್‌ ಸಭಾಂಗಣದಲ್ಲಿ ಜರುಗಿತು, ಸಾಮಾನ್ಯ ಸಭೆಯ ನಂತರ ಜರುಗಿದ ಮುಂದಿನ 2026-28 ನೇ ಅವಧಿಗೆ

ಅಧ್ಯಕ್ಷರಾಗಿ ಶ್ರೀ ಮುರಳಿ ಹೊಸಮಜಲು, ಕಾರ್ಯದರ್ಶಿಯಾಗಿ ವಿ.ಎಮ್.ಸತೀಶನ್‌ ಪುನರಾಯ್ಕೆಗೊಂಡರು. ಖಜಾಂಚಿಯಾಗಿ ಶ್ರೀ ಅಜಯಕುಮಾರ್‌ , ಉಪಾಧ್ಯಕ್ಷರಾಗಿ ಶ್ರೀಮತಿ ವಾಸಂತಿ ನಾಯರ್‌, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಂಜು ಅಜಿತ್, ಜತೆ ಖಜಾಂಚಿಯಾಗಿ ರವೀಂದ್ರನಾಥ್‌, ಬೋರ್ಡ್ ಮೆಂಬರುಗಳಾಗಿ ಶ್ರೀ ವಿಜಯಕುಮಾರ್‌, ಎಮ್.ವಿ. ರಾಜನ್‌, ಎ.ಎಸ್.ಮೋಹನ್‌ ರವರು, ಸಮಿತಿಯ ಸದಸ್ಯರಾಗಿ ಶ್ರೀ ಜೋತಿಷ್‌ ಕುಮಾರ್‌, ಶ್ರೀಮತಿ ಜಯಲಕ್ಷ್ಮೀ ಚಂದ್ರಮೋಹನ್‌ , ಶ್ರೀ ಮಣಿಕಂಠನ್‌, ಶ್ರೀ ವಿನೋದ್‌ವಿನೋದ್‌ರಾಜ್‌, ಹರೀಶ್‌ ಗೋವಿಂದ್‌, ದೇವರಾಜ್‌ , ವಿನಯನ್‌ ನಾಯರ್‌, ಆಯ್ಕೆಗೊಂಡರು.


ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶ್ರೀಮತಿ ಸುಜಾತಾ ನಾಯರ್‌, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೀಜಾ ನಂಬಿಯಾರ್‌, ಹಾಗೂ ಖಜಾಂಚಿಯಾಗಿ ಶ್ರೀ ಗೋಪಿಕಾ ರಾಣಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್‌, ಜತೆಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್‌ ಆಯ್ಕೆಯಾಗಿದ್ದಾರೆ.


ಚುನಾವಣಾ ಅಧಿಕಾರಿಯಾಗಿ ಉಡುಪಿ ಘಟಕ ಸಜಿ ಪಿಳ್ಳೈ ಹಾಗೂ ವೀಕ್ಷಕರಾಗಿ ಮೋಹನ್ ದಾಸ್‌, ಉಡುಪಿ ಅವರು ಭಾಗವಹಿಸಿದ್ದರು.

Share News
Exit mobile version