• Home  
  • *ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ‘ಕಾವ್ಯಾಂ ವ್ಹಾಳೆ-12’ ಕವಿಗೋಷ್ಠಿ ಯಶಸ್ವಿ*
- HOME

*ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ‘ಕಾವ್ಯಾಂ ವ್ಹಾಳೆ-12’ ಕವಿಗೋಷ್ಠಿ ಯಶಸ್ವಿ*

ಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ‘ಕಾವ್ಯಾಂ ವ್ಹಾಳೊ-12’ – ಕೊಂಕಣಿ ಕವಿಗೋಷ್ಠಿ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕಾವ್ಯಾಂ ವ್ಹಾಳೊ’ ಎಂಬ ಕಾರ್ಯಕ್ರಮವು 2025ರ ಮಾರ್ಚ್ 8 ರಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಸತತ ಹನ್ನೊಂದು ಮಾಸಿಕ ಕವಿಗೋಷ್ಠಿಗಳ ನಂತರ, ಕಾವ್ಯಾಂ ವ್ಹಾಳೊ ಇದರ 12ನೇ ಆವೃತ್ತಿಗೆ ತಲುಪಿದೆ ಎಂದು ವ್ಯಕ್ತಪಡಿಸಿದರು. ಮುಖ್ಯ ಅಥಿತಿಗಳಾದ ಕೊಂಕಣಿಯ ಖ್ಯಾತ ಹಿರಿಯ ನಟರಾದ […]

Share News

ಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ‘ಕಾವ್ಯಾಂ ವ್ಹಾಳೊ-12’ – ಕೊಂಕಣಿ ಕವಿಗೋಷ್ಠಿ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕಾವ್ಯಾಂ ವ್ಹಾಳೊ’ ಎಂಬ ಕಾರ್ಯಕ್ರಮವು 2025ರ ಮಾರ್ಚ್ 8 ರಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಸತತ ಹನ್ನೊಂದು ಮಾಸಿಕ

ಕವಿಗೋಷ್ಠಿಗಳ ನಂತರ, ಕಾವ್ಯಾಂ ವ್ಹಾಳೊ ಇದರ 12ನೇ ಆವೃತ್ತಿಗೆ ತಲುಪಿದೆ ಎಂದು ವ್ಯಕ್ತಪಡಿಸಿದರು. ಮುಖ್ಯ ಅಥಿತಿಗಳಾದ ಕೊಂಕಣಿಯ ಖ್ಯಾತ ಹಿರಿಯ ನಟರಾದ ಎಡೊಲ್ಫಸ್ ಕುಟಿನ್ಹಾ(ಡೊಲ್ಲಾ ಮಂಗಳೂರು) , ಕೊಂಕಣಿ ಭಾಷೆಯ ಹಿರಿಯ ಕಾರ್ಯಕರ್ತೆ ಹಾಗೂ ಹೆಸರಾಂತ ನಟಿ, ಕವಯತ್ರಿ ಗೀತಾ ಸಿ ಕಿಣಿ ರನ್ನು ಸನ್ಮಾನಿಲಾಯಿತು.

ಖ್ಯಾತ ಕವಯತ್ರಿ ಸಲೋಮಿ ಡಿಸೋಜ ಕವಿಗೋಷ್ಠಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ವಲೇರಿಯನ್ ಸಿಕ್ವೇರಾ, ಮೆಲ್ವಿನ್ ವಾಸ್ ನೀರ್‌ರ್ಮಾರ್ಗ, ಪ್ಲಾವಿಯಾ ಕ್ಯಾಸ್ತಲಿನೊ, ಆ್ಯಂಟನಿ ಲುವಿಸ್ ಮಣಿಪಾಲ, ರೋಶನ್ ಕ್ಯಾಸ್ತಲಿನೊ, ಶೈಲಾ ಮಂಗ್ಳೂರ್ಕರ್, ಸ್ಟ್ಯಾನಿ ಡಿ ಸೋಜ, ಸತ್ಯವತಿ ಕಾಮತ್, ಸುವರ್ಣ ಗಾಡ ಹೊನ್ನಾವರ ಮತ್ತು ಪೂರ್ಣಿಮಾ ಸುರೇಶ್ ನಾಯಕ್ ತಮ್ಮ ಕವಿತೆಗಳನ್ನು ವಾಚಿಸಿದರು.

ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸದಸ್ಯ ಸಮರ್ಥ್ ಭಟ್, ನವೀನ್ ಲೋಬೊ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.

Share News