ಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ‘ಕಾವ್ಯಾಂ ವ್ಹಾಳೊ-12’ – ಕೊಂಕಣಿ ಕವಿಗೋಷ್ಠಿ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕಾವ್ಯಾಂ ವ್ಹಾಳೊ’ ಎಂಬ ಕಾರ್ಯಕ್ರಮವು 2025ರ ಮಾರ್ಚ್ 8 ರಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಸತತ ಹನ್ನೊಂದು ಮಾಸಿಕ
ಕವಿಗೋಷ್ಠಿಗಳ ನಂತರ, ಕಾವ್ಯಾಂ ವ್ಹಾಳೊ ಇದರ 12ನೇ ಆವೃತ್ತಿಗೆ ತಲುಪಿದೆ ಎಂದು ವ್ಯಕ್ತಪಡಿಸಿದರು. ಮುಖ್ಯ ಅಥಿತಿಗಳಾದ ಕೊಂಕಣಿಯ ಖ್ಯಾತ ಹಿರಿಯ ನಟರಾದ ಎಡೊಲ್ಫಸ್ ಕುಟಿನ್ಹಾ(ಡೊಲ್ಲಾ ಮಂಗಳೂರು) , ಕೊಂಕಣಿ ಭಾಷೆಯ ಹಿರಿಯ ಕಾರ್ಯಕರ್ತೆ ಹಾಗೂ ಹೆಸರಾಂತ ನಟಿ, ಕವಯತ್ರಿ ಗೀತಾ ಸಿ ಕಿಣಿ ರನ್ನು ಸನ್ಮಾನಿಲಾಯಿತು.

ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸದಸ್ಯ ಸಮರ್ಥ್ ಭಟ್, ನವೀನ್ ಲೋಬೊ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.