ಮಂಗಳೂರು : ರಿಯಲ್ ಎಸ್ಟೇಟ್ ಸಂಸ್ಥೆ ಲ್ಯಾಂಡ್ ಲಿಂಕ್ಸ್ ರೂವಾರಿ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಮುಂದಾಳತ್ವದಲ್ಲಿ ಮೇರಿಹಿಲ್‌ನಲ್ಲಿ ನಿರ್ಮಾಣಗೊಂಡ ಪಾಲೆಮಾರ್ ಕನ್ವೆಷನ್ ಸೆಂಟರ್ ಸಹಿತ ನಾಲ್ಕು ಸಭಾಂಗಣಗಳ ಲೋಕಾರ್ಪಣೆ ಸಮಾರಂಭ ನಡೆದ ವೇಳೆ ಕೃಷ್ಣ ಪಾಲೆಮಾರ್ ಅವರ ನಿಕಟವರ್ತಿ ಜೆ. ಕೊರಗಪ್ಪ ಅವರಿಗೆ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲ, ಜಸ್ಟೀಸ್ ಎಸ್ ಅಬ್ದುಲ್ ನಝೀರ್ ಅವರ ದಿವ್ಯಹಸ್ತದಲ್ಲಿ ಸೇವಾ ತ್ರಿವಿಕ್ರಮ ಬಿರುದು ನೀಡಿ ಗೌರವಾಭಿನಂದನ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ, ಲ್ಯಾಂಡ್ ಲಿಂಕ್ಸ್ ರೂವಾರಿ ಕೃಷ್ಣ ಜೆ ಪಾಲೆಮಾರ್, ರಾಜ್ಯ ಸಚಿವ ವಿ ಸೋಮಣ್ಣ, ವಿಧಾನ ಸಭೆಯ ಸಭಾಧ್ಯಕ್ಷ ಯು ಟಿ ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಭರತ್ ಶೆಟ್ಟಿ, , ಉಮಾನಾಥ ಕೋಟ್ಯಾನ್, ಐವನ್ ಡಿ ಸೋಜಾ, ಟ್ರಸ್ಟಿನ ಉಪಾಧ್ಯಕ್ಷ ಪ್ರದೀಪ್ ಪಾಲೇಮಾರ್ , ಟ್ರಸ್ಟಿ ಪ್ರಸನ್ನ ಪಾಲೇಮಾರ್, ಜೆ ಕೆ ರಾವ್, ಸಂತೋಷ್ ಪಾಲೆಮಾರ್, ಸೂರಜ್ ಕಲ್ಯಾ, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರಾ ಮೊದಲಾದವರಿದ್ದರು.