ಮಂಗಳೂರು, ಜೂನ್ 19: ಮಂಗಳೂರು ನಗರದ ಕೆಲವು ಕಡೆಗಳಲ್ಲಿ ಕಲುಷಿತ ನೀರು ಪೂರೈಕೆಯಾಗಿ ಸಾರ್ವಜನಿಕರ ಆರೋಗ್ಯ ಹದಗೆಟ್ಟಿದೆ ಎಂಬ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರ ಆರೋಪ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ವಿಧಾನಪರಿಷತ್ ಶಾಸಕ ಐವನ್ ಡಿ’ಸೋಜಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಕುಡಿಯುವ ನೀರಿನಂತಹ ಸೂಕ್ಷ್ಮ ವಿಚಾರದಲ್ಲಿ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ಅವರು ಎಚ್ಚರಿಸಿದ್ದಾರೆ.

ನಗರದ ಜನರಿಗೆ ಶುದ್ಧ ಕುಡಿಯುವ ನೀರು ಕೊಡುವುದು ಮತ್ತು ನೀರಿನಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವುದು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾತ್ಮಕ ಜವಾಬ್ದಾರಿಯಾಗಿದೆ. ನೀರಿನ ವ್ಯವಸ್ಥೆಗಾಗಿ ನಮ್ಮ ರಾಜ್ಯ ಸರ್ಕಾರದಿಂದ ಈಗಾಗಲೇ ಕೋಟ್ಯಾಂತರ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಶಾಸಕರು ಇದರಲ್ಲಿ ರಾಜಕೀಯವನ್ನು ಬೆಸೆಯುತ್ತಿರುವುದು ಸರಿಯಾದ ಕ್ರಮ ಅಲ್ಲ ಎಂದು ಐವನ್ ಡಿ’ಸೋಜಾ ಹೇಳಿದ್ದಾರೆ.

ಶಾಸಕ ವೇದವ್ಯಾಸ್ ಕಾಮತ್ ಅವರ ದೂರಿನ ಬೆನ್ನಲ್ಲೇ, ವಿಧಾನಪರಿಷತ್ ಶಾಸಕ ಐವನ್ ಡಿ’ಸೋಜಾ ಅವರು ಇಂದು ಮಂಗಳೂರು ನಗರದ ಬೆಂದೂರಿನಲ್ಲಿರುವ ಮುಖ್ಯ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ (ನೀರು ಶುದ್ಧೀಕರಣ ಘಟಕ) ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ.


ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮಾತನಾಡಿ ಈ ಬಗ್ಗೆ ಕೂಡಲೇ ಒಂದು ಕಮಿಟಿಯನ್ನು ಮಾಡಿ ಅಂತಹವುದು ಎಲ್ಲಿ ಆಯ್ತು ಯಾಕಾಯ್ತು, ಯಾವ ಬಾವಿಯ ನೀರು ಕುಡಿದು ಅಯ್ತು, ಬಾವಿ ನೀರು ಕುಡದ್ರೂ ಅಥವಾ ನಗರ ಪಾಲಿಕೆ ಸರಬರಾಜು ಮಾಡುವ ನೀರನ್ನು ಕಡಿದು ಆಯ್ಯೋ ? ಇದರ ಬಗ್ಗೆ ತನಿಖೆ ಮಾಬೇಕು ಒಂದು ತನಿಖೆಯ ಸಮಿತಿಯನ್ನು ರಚನೆ ಮಾಡಬೇಕು ಮತ್ತು ಅದರ Reportನ್ನು ಜನರ ಮುಂದೆ ಇಡಬೇಕು ಮತ್ತು ಶಾಸಕರಾದ ವೇದವ್ಯಾಸ ಕಾಮತ್ ರವರು ಎನು ಹೇಳಿಕೆ ಕೊಟ್ಟಿದ್ದಾರೆ? ಅದನ್ನು Clarify ಮಾಡೋಕು ಜನರ ಸಮಸ್ಯೆಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ .ವಿ ಯವರಿಗೆ ಮಾತನಾಡಿ ಹೇಳಿದ್ದೇನೆ ಮಹಾನಗರ ಪಾಲಿಕೆ ಕಮಿಷನರ್‌ಗೂ ಹೇಳಿದ್ದೇನೆ. ಅಧಿಕಾರಿಗಳಾದ ನರೇಶ್ ಶೆಣೈಯವರಲ್ಲಿಯೂ ಮಾತನಾಡಿದ್ದೇನೆ. ಈ ಒಂದು ಸಂದರ್ಭದಲ್ಲಿ ಕುಡಿಯುವ ನೀರಿನ ಬಗ್ಗೆ ಜಾಗರೂಕತೆಯಾಗಿ ಮಳೆಗಾಲದ ಸಂದರ್ಭದಲ್ಲಿ ರೋಗ ರುಜಿನಗಳು ಬರುವಂತಹ ಸಂದರ್ಭ ಇರುತ್ತದೆ. ನಗರ ಪಾಲಿಕೆಯ ನೀರು ಕುಡಿದು ರೋಗಬಂತು ಎಂದು ಹೇಳುವ ಪರಿಸ್ಥಿತಿ ಯಾವುದೇ ಕಾರಣಕ್ಕೂ ಅಗಬಾರದು ಎಂದು ಸಲಹೆಯನ್ನು ಕೊಟ್ಟಿರುತ್ತೇನೆ.
ನಗರಾಭಿವೃದ್ಧಿ ಸಚಿವರಾದ ನ್ಯ ಯತೀಂದ್ರ ಸಿದ್ದರಾಮಯ್ಯರವರಲ್ಲಿಯೂ ಮಾಹಿತಿ ನೀಡಿ ಇಂತಹ ಒಂದು ಘಟನೆಗಳು ಯಾರಿಂದ ಇಂತಹ ಸುದ್ದಿ ಹರಡುತ್ತಿದೆ ಎಂದು ತನಿಖೆ ಮಾಡಬೇಕೆಂದು ಕೋರಿದ್ದೇನೆ. ಅದೇ ರೀತಿ ಇತ್ತೀಚೆಗೆ 1250/ ಕೋಟಿ ರೂಪಾಯಿ ವೆಚ್ಚದಲ್ಲಿ ನಗರಪಾಲಿಕೆಗೆ ವ್ಯಾಪ್ತಿಯಲ್ಲಿ ಡೈನೇಜ್ ವ್ಯವಸ್ತೆಯನ್ನು ಯುಜಿಡಿಯನ್ನು ಸರಿಪಡಿಸುವ ಯೋಜನೆಯ ಬಗ್ಗೆ ನಗರಾಭಿವೃದ್ಧಿ ಸಚಿವರ ಜೊತೆ ಮಾತನಾಡಿದ್ದೇನೆ. ಎಂದು ಐವನ್ ಡಿ’ಸೋಜಾರವರು ತಿಳಿಸಿದ್ದಾರೆ.

ಸದ್ರಿ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನೀಯೋಗದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಕಾರ್ಪೊರೇಟರ್ ಹಾಗೂ ಮಾಜಿ ಉಪಮೇಯರ್ ಲ್ಯಾನ್ಸಿ ಲೋಟ್ ಪಿಂಟೋ, ಮಾಜಿ ಕಾರ್ಪೊರೇಟರ್ ನವೀನ್ ಡಿ’ಸೋಜಾ, ಮುಖಂಡರಾದ ಹಬೀಬುಲ್ಲ ಕಣ್ಣೂರು, , ಪ್ರದೇಶದ ಪ್ರಮುಖರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್ ಮಿಥುನ್ ಅವರು ಉಪಸ್ಥಿತರಿದ್ದರು.

