canaratvnews

ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ಘೋಷಣೆ

ಪುತ್ತೂರು: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಮತ್ತು ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕಡಿಕೆ ಚಾವಡಿಯಲ್ಲಿ ನಡೆಯಲಿರುವ ಜೀರ್ಣೋದ್ದಾರ ಕಾರ್ಯಗಳಿಗಾಗಿ ರಚಿಸಲಾಗಿರುವ ನೂತನ ಜೀರ್ಣೋದ್ದಾರ ಸಮಿತಿಯ ಘೋಷಣೆ ಹಾಗೂ ಸಾಮೂಹಿಕ ಹಾಲು ಪಾಯಸ ಸೇವೆ ಮತ್ತು ಸಾರ್ವಜನಿಕ ರಂಗಪೂಜೆ ಸೇವೆಗಳು ಎ.18ರಂದು ನಡೆಯಿತು.

ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಶಾಸಕ ಅಶೋಕ್ ಕುಮಾ‌ರ್ ರೈಯವರು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಜೀರ್ಣೋದ್ದಾರಕ್ಕೆ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ 1.50 ಕೋಟಿ ಅಧಿಕ ವಾಗ್ದಾನ ನಡೆಯಿತು

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಶುಭಕರ ಬಾಲ್ಯೊಟ್ಟುಗುತ್ತು, ಸಂಚಾಲಕ ರಾಧಾಕೃಷ್ಣ ರೈ ಬಾಲ್ಯೊಟ್ಟುಗುತ್ತು ಹಾಗೂ ಕಾರ್ಯದರ್ಶಿ ವತ್ಸಲಾ ಆರ್ ಭಟ್ ವೇದಿಯಲ್ಲಿ ಉಪಸ್ಥಿತರಿದ್ದರು.

Share News
Exit mobile version