• Home  
  • ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆ..!
- HOME - INETRNATIONAL - LATEST NEWS

ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆ..!

ಇಟೆಲಿ: ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆಯಾಗಿದೆ ಎಂದು ಇಟಲಿಯ ವಿಜ್ಞಾನಿಗಳು ಈಗ ಜಗತ್ತಿನ ಮುಂದೆ ಇಟ್ಟಿದ್ದಾರೆ. ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆ ಎನ್ನಲಾದ ‘ಶ್ರೌಡ್ ಆಫ್ ಟುರಿನ್’ ಕುರಿತು ಈಗ ಮತ್ತೊಂದು ಅತ್ಯಂತ ರೋಚಕ ಸಂಗತಿ ಹೊರಬಿದ್ದಿದೆ. ಹೌದು, ಈ ಪವಿತ್ರ ವಸ್ತ್ರಕ್ಕೂ ಮತ್ತು ಭಾರತಕ್ಕೂ ನೇರ ನಂಟಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ. ಕ್ರೈಸ್ತ ಧರ್ಮೀಯರು ಅತ್ಯಂತ ಪವಿತ್ರವೆಂದು ಭಾವಿಸುವ ೪.೪ ಮೀಟರ್ ಉದ್ದ ಮತ್ತು ೧.೧ ಮೀಟರ್ ಅಗಲವಿರುವ ಈ ಲಿನಿನ್ […]

Share News

ಇಟೆಲಿ: ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆಯಾಗಿದೆ ಎಂದು ಇಟಲಿಯ ವಿಜ್ಞಾನಿಗಳು ಈಗ ಜಗತ್ತಿನ ಮುಂದೆ ಇಟ್ಟಿದ್ದಾರೆ.

ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆ ಎನ್ನಲಾದ ‘ಶ್ರೌಡ್ ಆಫ್ ಟುರಿನ್’ ಕುರಿತು ಈಗ ಮತ್ತೊಂದು ಅತ್ಯಂತ ರೋಚಕ ಸಂಗತಿ ಹೊರಬಿದ್ದಿದೆ. ಹೌದು, ಈ ಪವಿತ್ರ ವಸ್ತ್ರಕ್ಕೂ ಮತ್ತು ಭಾರತಕ್ಕೂ ನೇರ ನಂಟಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ.

ಕ್ರೈಸ್ತ ಧರ್ಮೀಯರು ಅತ್ಯಂತ ಪವಿತ್ರವೆಂದು ಭಾವಿಸುವ ೪.೪ ಮೀಟರ್ ಉದ್ದ ಮತ್ತು ೧.೧ ಮೀಟರ್ ಅಗಲವಿರುವ ಈ ಲಿನಿನ್ ಬಟ್ಟೆಯನ್ನು ಇಟಲಿಯ ಟುರಿನ್ ನಗರದ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಕೆಥೆಡ್ರಲ್‌ನಲ್ಲಿ ಇರಿಸಲಾಗಿದೆ. ಇದರ ಮೇಲೆ ಶಿಲುಬೆಗೇರಿಸಲ್ಪಟ್ಟ ವ್ಯಕ್ತಿಯ ಅಸ್ಪಷ್ಟ ಚಿತ್ರವಿದೆ.

ಇಟಲಿಯ ಪಡುವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅತ್ಯಾಧುನಿಕ ಡಿಎನ್‌ಎ (DNA) ವಿಶ್ಲೇಷಣೆಯನ್ನು ನಡೆಸಿದ್ದು, ಈ ಬಟ್ಟೆಯ ಮೇಲೆ ಸಂಗ್ರಹವಾಗಿದ್ದ ಧೂಳು ಮತ್ತು ಪರಾಗ ಕಣಗಳನ್ನು ಜೀನ್ ಸೀಕ್ವೆನ್ಸಿಂಗ್ ತಂತ್ರಜ್ಞಾನದ ಮೂಲಕ ಪರೀಕ್ಷಿಸಿದ್ದಾರೆ. ಈ ವೇಳೆ ವಿಜ್ಞಾನಿಗಳಿಗೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಬಟ್ಟೆಯ ಮೇಲಿರುವ ಒಟ್ಟು ಮಾನವ ಡಿಎನ್‌ಎಗಳಲ್ಲಿ ಶೇಕಡಾ ೪೦ ರಷ್ಟು ಡಿಎನ್‌ಎ ಭಾರತೀಯ ವಂಶಾವಳಿಗೆ ಸೇರಿದ್ದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಗಿಯಾನಿ ಬಾರ್ಕಾಸಿಯಾ ಅವರ ಪ್ರಕಾರ, ಈ ಬಟ್ಟೆಯನ್ನು ತಯಾರಿಸಲು ಬಳಸಲಾದ ನೂಲು ಭಾರತದ ಸಿಂಧೂ ಕಣಿವೆ ಪ್ರದೇಶದಲ್ಲಿ ತಯಾರಾಗಿರಬಹುದು. ಪ್ರಾಚೀನ ಕಾಲದಲ್ಲಿ ರೋಮನ್ನರು ಭಾರತದಿಂದ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಭಾರತದಲ್ಲಿ ನೇಯ್ದ ಬಟ್ಟೆ ಸಿಲ್ಕ್ ರೂಟ್ ಅಥವಾ ಸಮುದ್ರ ಮಾರ್ಗದ ಮೂಲಕ ಮಧ್ಯಪ್ರಾಚ್ಯಕ್ಕೆ ರವಾನೆಯಾಗಿರಬಹುದು ಅಥವಾ ಶತಮಾನಗಳ ಕಾಲ ಇದನ್ನು ಸ್ಪರ್ಶಿಸಿದವರಲ್ಲಿ ಭಾರತೀಯ ಮೂಲದವರು ಇದ್ದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಕೇವಲ ಮನುಷ್ಯರಷ್ಟೇ ಅಲ್ಲ, ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ‘ಅಲಸಂದೆ’ (Cowpea) ನಂತಹ ಸಸ್ಯಗಳ ಪರಾಗಸ್ಪರ್ಶದ ಕುರುಹುಗಳು ಈ ಬಟ್ಟೆಯ ಮೇಲೆ ಪತ್ತೆಯಾಗಿವೆ.

ಜೊತೆಗೆ ಇದು ಏಸುಕ್ರಿಸ್ತರ ಅಂತ್ಯಸಂಸ್ಕಾರದ ಸಮಯದಲ್ಲಿ ಬಳಸಲಾದ ವಸ್ತ್ರವೇ ಎಂಬ ಬಗ್ಗೆ ವಿಜ್ಞಾನ ಮತ್ತು ನಂಬಿಕೆಯ ನಡುವೆ ಸಂಘರ್ಷ ಮುಂದುವರಿಯುತ್ತಲೇ ಇದೆ.

Share News