ಮಂಗಳೂರಿ ನಲ್ಲಿ ಸೈನ್ಯಕ್ಕೆ ಸೇರುವವರಿಗೆ ಹಾಗೂ ದೇಶಪ್ರೇಮಿಗಳಿಗೆ ಸ್ಫೂರ್ತಿಯಾಗುವುದ ಕ್ಕಾಗಿ ಶರಲಾಗಿರುವ ಯುದ್ಧಬ್ಯಾಂಕ್ ಕೊನೆಗೂ ಸೂಕ್ತ ಗೌರವ ಲಭ್ಯವಾ ಗುವ ಲಕ್ಷಣ ಗೋಚರಿಸಿದೆ. ಈಗಿರುವ ಕದ್ರಿ ಯುದ್ಧ ಸ್ಮಾರಕದ ಪಕ್ಕದಲ್ಲೇ ಪುಟ್ ವಾತ್‌ನಲ್ಲಿ ಸೂಕ್ತ ಬದಲಾವಣೆ ನಿರ್ಮಿಸಿ, ಅದರ ಮೇಲೆ ಟ್ಯಾಂಕ್ ಇರಿಸಿ ನಾಗರಿಕರ ಗಮನ ಸೆಳೆಯುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.
ಮಂಗಳೂರು ಮಹಾನಗರಪಾಲಿಕೆ ಈ ಟ್ಯಾಂಕ್ ನಿರ್ವಹಣೆಯ ಹೊಣೆ ಹೊತ್ತಿದ್ದು ವೇದಿಕೆ ನಿರ್ಮಾಣದ ಗುತ್ತಿಗೆ ಯನ್ನು ಮುಗೋಡಿ ಕನ್ ಸ್ಟ್ರಕ್ಷನ್ಸ್ ವಹಿಸಿಕೊಂಡಿದೆ.
ಉಚಿತವಾಗಿ ಪಾಲಿಕೆಗೆ ಸಿಕ್ಕಿದ ಈ ಬ್ಯಾಂಕ್ ಅನ್ನು ಪ್ರಸ್ತುತ ಸರ್ಕೀಟ್ ಹೌಸ್ ಮೂಲೆಯಲ್ಲಿ ಇರಿಸಲಾಗಿದೆ.
ಭಾರತ – ಪಾಕಿಸ್ಥಾನದ 1965, 1971ರ ಯುದ್ಧಗಳಲ್ಲಿ ಪಾಲ್ಗೊಂಡ ಹಳೆಯ ಸಮರ ಬ್ಯಾಂಕ್ ಟಿ-55ನ್ನು ಆಗಸ್ಟ್ ಮೊದಲ ವಾರವೇ ಮಂಗಳೂರಿಗೆ ತರಲಾಗಿತ್ತು. ಪುಣೆಯಲ್ಲಿದ್ದ ಈ ಟ್ಯಾಂಕ್ ಅನ್ನು ವಿಶೇಷ ಟ್ರೈಲರ್ಟ್ರಕ್ ಮೂಲಕ ಮಂಗಳೂರು ಮಹಾನಗರ ಪಾಲಿಕೆ ತಮ್ಮ ವೆಚ್ಚದಲ್ಲಿ ಮಂಗಳೂರಿಗೆ ತಂದಿತ್ತು. ಸಾಮಾನ್ಯವಾಗಿ ಯುದ್ಧಗಳಲ್ಲಿ ಭಾಗಿ ಯಾದ ಈ ರೀತಿಯ ಹಳೆ ಟ್ಯಾಂಕ್ ಗಳನ್ನು ವಿವಿಧ ನಗರಗಳಿಗೆ ವಿದ್ಯಾಸಂಸ್ಥೆಗಳಿಗೆ ತಂದು ಅಲ್ಲಿ ಪ್ರಮುಖ ಜಾಗಗಳಲ್ಲಿ ವಾರ್ ಟ್ರೋಫಿ (ಯುದ್ಧ ಸ್ಮರಣಿಕೆ) ರೀತಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಆದೇ ರೀತಿ ಮಂಗಳೂರಿಗೆ ಟ್ಯಾಂಕ್ ಅನ್ನು ನೀಡುವಂತೆ ರಕ್ಷಣ ಸಚಿವಾಲಯಕ್ಕೆ ದ.ಕನ್ನಡ ಸಂಸದ ಕ್ಯಾ। ಬ್ರಿಜೇಶ್ ಚೌಟ ಮನವಿ ಸಲ್ಲಿಸಿದ್ದರು. ಅದಕ್ಕೆ ಅನುಮೋದನೆ ಸಿಕ್ಕಿತ್ತು.



