canaratvnews

“ಉಳ್ಳಾಲ ಮಸೀದಿ ಹತ್ತಿರ ಬಾಂಬ್‌ ಬ್ಲಾಸ್ಟ್‌ ಮಾಡ್ತೀನಿ” ಎಂದವನ ಹೆಡೆಮುರಿ ಕಟ್ಟಿದ ಪೊಲೀಸರು

ಮಂಗಳೂರು: ಉಳ್ಳಾಲ ಮಸೀದಿ ಹತ್ತಿರ ಬಾಂಬ್‌ ಬ್ಲಾಸ್ಟ್‌ ಮಾಡ್ತೀನಿ ಎಂದು ಪ್ರಚೋದನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ ಮಾಡಿದ್ದವನನ್ನು ಮಂಗಳೂರು ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಯನ್ನು ಶಂಕರ್ ಮಸ್ತಪ್ಪ ಮೊಗೆರ್ (35) ಎಂದು ಗುರುತಿಸಲಾಗಿದೆ. ಈತ ಉತ್ತರ ಕನ್ನಡ ಮೂಲದ ಭಟ್ಕಳದವ ಎಂದು ಮಾಹಿತಿ ದೊರೆತಿದೆ.

ಇನ್‌ಸ್ಟಾಗ್ರಾಂನ ಪೋಸ್ಟ್‌ಗೆ “Support madi bro Ullal masjid hathira bomb blast madthini” ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್‌ ಮಾಡಿದ್ದ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಅಲರ್ಟ್‌ ಆದ ಮಂಗಳೂರು ನಗರ ಪೊಲೀಸರು ಉಳ್ಳಾಲ ಠಾಣೆಯಲ್ಲಿ ಅಕ್ರ 41/2026 ಕಲಂ 196(2), 197(2), 299, 353(2) ಬಿ.ಎನ್.ಎಸ್ 2023 ಪ್ರಕರಣ ದಾಖಲಿಸಿದ್ದಾರೆ.

ನಂತರ ಈ ಬಗ್ಗೆ ತನಿಖೆ ನಡೆಸಿದಾಗ ಈತನ  ಮೂಲ ಪತ್ತೆಯಾಗಿದ್ದು, ಸದ್ಯ ಆತನನ್ನು ಬಂಧಿಸಿ ಮಂಗಳೂರು ನಗರದ ಮಾನ್ಯ 7 ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಮೆಂಟ್‌ ಮಾಡಿದ ಮೊಬೈಲ್ ಫೋನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Share News
Exit mobile version