canaratvnews

ವಿಶ್ವದಾದ್ಯಂತ ಇಂದು ಕ್ರೈಸ್ತರಿಗೆ ಗುಡ್‌ ಫ್ರೈಡೇ

ಮಂಗಳೂರು: ಕ್ರೈಸ್ತ ಧರ್ಮದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗುಡ್‌ ಫ್ರೈಡೇ. ಈ ದಿನವನ್ನು ಪ್ರತಿವರ್ಷ ಈಸ್ಟರ್‌ ಭಾನುವಾರದ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಇದು ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ್ದರಿಂದ ಗುಡ್‌ ಫ್ರೈಡೇ ತನ್ನ ಹೆಸರಿನಲ್ಲಿ ಸಾಂಕೇತಿಕವಾಗಿ ಶುಭವನ್ನು ಸೂಚಿಸಿದರೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಇದು ದುಃಖದ ದಿನವಾಗಿದೆ.

ಈ ದಿನ ಪ್ರೀತಿ, ಜ್ಞಾನ ಮತ್ತು ಅಹಿಂಸೆಯ ಸಂದೇಶವನ್ನು ನೀಡಿದ ಹಾಗೂ ಮಾನವ ಕುಲದ ಕಲ್ಯಾಣಕ್ಕಾಗಿ ತನ್ನನ್ನು ತಾನೇ ತ್ಯಾಗ ಮಾಡಿದ ಏಸು ಕ್ರಿಸ್ತರ ತ್ಯಾಗವನ್ನು ಸ್ಮರಿಸಲಾಗುತ್ತದೆ. ಕ್ರೈಸ್ತ ಸಮುದಾಯದವರು ಈ ದಿನ ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆಯನ್ನು ಸಲ್ಲಿಸುತ್ತಾರೆ.

ಮಂಗಳೂರು ಮಿಲಾಗ್ರಿಸ್ ದೇವಾಲಯದಲ್ಲಿ ಶುಭ ಶುಕ್ರವಾರ ದಂದು ಶಿಲುಬೆ ಹಾದಿಯನ್ನು ನಡೆಸಲಾಯಿತು. ಈ ವೇಳೆ ವಂ. ಬೋನವೆಂಚರ್ ನಝರೆತ್, ವಂ. ಉದಯ್ ಫೆರ್ನಾಂಡಿಸ್, ವಂ. ರೋಬಿನ್, ವಂ. ಜೆರಾಲ್ಡ್ ಪಿಂಟೋ, ವಂ.ಮೈಕಲ್ ಸಂತುಮಾಯೆರ್, ಧರ್ಮ ಭಗಿನಿ ಯರು ಭಕ್ತಾಧಿ ಗಳು ಪಾಲ್ಗೊಂಡರು.

Share News
Exit mobile version