canaratvnews

ಅಲ್ಲಿಪಾದೆ ಚರ್ಚ್‌ನಲ್ಲಿ ಭಕ್ತಿಪೂರ್ವಕ ‘ಶುಭ ಶುಕ್ರವಾರ’ ಆಚರಣೆ

ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ‘ಶುಭ ಶುಕ್ರವಾರ’ವನ್ನು (Good Friday) ಅತ್ಯಂತ ಭಕ್ತಿ ಮತ್ತು ಶ್ರದ್ಧಾ ಪೂರಕವಾಗಿ ಆಚರಿಸಲಾಯಿತು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಶಿಲುಬೆ ಮರಣವನ್ನು ಸ್ಮರಿಸಿದರು.

     

ಧರ್ಮಕೇಂದ್ರದ ಪಾಲನಾ ಗುರುಗಳಾದ ವಂದನೀಯ ಫಾದರ್ ರಾಬರ್ಟ್ ಡಿಸೋಜಾ ಅವರ ನೇತೃತ್ವದಲ್ಲಿ ಈ ಪವಿತ್ರ ವಿಧಿವಿಧಾನಗಳು ನಡೆದವು. ವಂದನೀಯ ಫಾದರ್ ಅನುಷ್ ಡಿಕುನ್ಹಾ SJ ಮತ್ತು ವಂದನೀಯ ಫಾದರ್ ಲೆಸ್ಟನ್ ಲೋಬೋ SJ ಅವರು ಪ್ರಾರ್ಥನೆ ಹಾಗೂ ಪ್ರವಚನಗಳ ಮೂಲಕ ಭಕ್ತರಿಗೆ ಕ್ರಿಸ್ತನ ತ್ಯಾಗದ ಮಹತ್ವವನ್ನು ವಿವರಿಸಿದರು.

ದಿನವಿಡೀ ಮೌನ, ಪ್ರಾರ್ಥನೆ ಮತ್ತು ಉಪವಾಸದೊಂದಿಗೆ ಕಳೆದ ಭಕ್ತಾದಿಗಳು, ಯೇಸುವಿನ ಮರಣದ ಸ್ಮರಣೆಯೊಂದಿಗೆ ಪ್ರೀತಿ, ಕ್ಷಮೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು. ಶಿಲುಬೆಯ ಆರಾಧನೆ ಮತ್ತು ವಾಚನಗಳ ಮೂಲಕ ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

Share News
Exit mobile version