• Home  
  • ಗೋವಾ: ಪಾರ್ಲಿಮೆಂಟರಿ ಅಸೋಸಿಯೇಶನ್ ಸಮ್ಮೇಳನದಲ್ಲಿ ಸ್ಪೀಕರ್  ಯು.ಟಿ ಖಾದರ್ ಭಾಗಿ
- HOME - LATEST NEWS

ಗೋವಾ: ಪಾರ್ಲಿಮೆಂಟರಿ ಅಸೋಸಿಯೇಶನ್ ಸಮ್ಮೇಳನದಲ್ಲಿ ಸ್ಪೀಕರ್  ಯು.ಟಿ ಖಾದರ್ ಭಾಗಿ

ಮಂಗಳೂರು.ಎ.13:ಗೋವಾದ ಪಣಜಿಯಲ್ಲಿ ನಡೆದ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA)ಭಾರತ ವಲಯ-lX ಪ್ರಥಮ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಮಾತನಾಡಿದರು. ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, “ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಯುವ- ನಾಯಕತ್ವ ಎಂಬ ಪದ ಹೆಚ್ಚು ಬಳಸಲಾಗುತ್ತದೆ. ಆದರೆ ಯುವ ಶಾಸಕರನ್ನು ಕೇವಲ ವಯಸ್ಸಿನ ಆಧಾರದ ಮೇಲೆ ವ್ಯಾಖ್ಯಾನಿಸುವುದು ಸರಿಯಲ್ಲ. ಅವರನ್ನು ಮನಸ್ಥಿತಿಯಿಂದ ವ್ಯಾಖ್ಯಾನಿಸಲಾಗುತ್ತದೆ. ಹಳೆಯ ಮನೋಭಾವ, ದೃಷ್ಟಿಕೋನ, ನಾವಿನ್ಯತೆಗೆ ಒಗ್ಗಿಕೊಳ್ಳಲಾರದ ಮನಸ್ಥಿತಿಯನ್ನು ಹೊಂದಿರುವವರು ಯುವಕರಲ್ಲ, ಬದಲಾಗಿ ಹೊಸ ಆಲೋಚನೆಗಳು, ನವೀನ ದೃಷ್ಟಿಕೋನ […]

Share News

ಮಂಗಳೂರು.ಎ.13:ಗೋವಾದ ಪಣಜಿಯಲ್ಲಿ ನಡೆದ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA)ಭಾರತ ವಲಯ-lX ಪ್ರಥಮ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಮಾತನಾಡಿದರು.

ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, “ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಯುವ- ನಾಯಕತ್ವ ಎಂಬ ಪದ ಹೆಚ್ಚು ಬಳಸಲಾಗುತ್ತದೆ. ಆದರೆ ಯುವ ಶಾಸಕರನ್ನು ಕೇವಲ ವಯಸ್ಸಿನ ಆಧಾರದ ಮೇಲೆ ವ್ಯಾಖ್ಯಾನಿಸುವುದು ಸರಿಯಲ್ಲ. ಅವರನ್ನು ಮನಸ್ಥಿತಿಯಿಂದ ವ್ಯಾಖ್ಯಾನಿಸಲಾಗುತ್ತದೆ. ಹಳೆಯ ಮನೋಭಾವ, ದೃಷ್ಟಿಕೋನ, ನಾವಿನ್ಯತೆಗೆ ಒಗ್ಗಿಕೊಳ್ಳಲಾರದ ಮನಸ್ಥಿತಿಯನ್ನು ಹೊಂದಿರುವವರು ಯುವಕರಲ್ಲ, ಬದಲಾಗಿ ಹೊಸ ಆಲೋಚನೆಗಳು, ನವೀನ ದೃಷ್ಟಿಕೋನ ಹೊಂದಿರುವವರು ನಿಜವಾಗಿ ಯೂ ಯುವಕರು ಎಂದರು.

ರಾಜಕೀಯದಲ್ಲಿ ಯುವಕರನ್ನು ಎರಡು ಆಯಾಮ ಗಳಲ್ಲಿ ನೋಡಬಹುದು, ವಯೋವೃದ್ಧರು ಮತ್ತು ಜ್ಞಾನವೃದ್ದರು. ಭಾರತದಲ್ಲಿ ಸುಮಾರು15-20ಶೇಕಡಾ ಶಾಸಕರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಆದರೆ ನಿಜವಾದ ಪ್ರಶ್ನೆ, ಎಷ್ಟು ಜನರು ನಾವೀನ್ಯತೆ, ಧೈರ್ಯ ಮತ್ತು ಜವಾಬ್ದಾರಿಯೊಂದಿಗೆ ಯೋಚಿಸು ತ್ತಾರೆ ಎಂಬುವುದಾಗಿದೆ”,ಎಂದರು ಮುಂದುವರೆದು ಅವರು”ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ವರು, ಅವರ ವಯಸ್ಸೇನಾಗಿರಲಿ, ಹೊಸ ಚಿಂತನೆ, ಕಡಿಮೆ ಪೂರ್ವಾಗ್ರಹ ಮತ್ತು ಹೆಚ್ಚಿನ ಪ್ರಯೋಗಶೀಲ ಮನೋಭಾವವನ್ನು ಹೊಂದಿರುತ್ತಾರೆ. ಸರಿಯಾದ ಮಾರ್ಗದರ್ಶನ ಮತ್ತು ವ್ಯವಸ್ಥಿತ ತರಬೇತಿ ದೊರೆತರೆ, ಇವರು ಸಮಾಜ ಪರಿವರ್ತನೆಯ ಶಕ್ತಿಶಾಲಿ ಚಾಲಕ ರಾಗಬಹುದು. ಈ ನಿಟ್ಟಿನಲ್ಲಿ ಬೆಂಗಳೂರಿನ ಕ್ಷೇಮವನ ದಲ್ಲಿ ಮೊದಲ ಬಾರಿಗೆ ನಡೆದ ಶಾಸಕರ ಬೂಟ್‍ಕ್ಯಾಂಪ್ ಹೊಸ ಶಾಸಕರಿಗೆ ಮಾರ್ಗದರ್ಶನ ನೀಡಿ ಹೊಸ ಆಯಾಮವನ್ನು ಪರಿಚಯಿಸಿದ ಅತ್ಯಂತ ಪ್ರಭಾವಶಾಲಿ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಅವರಿಗೆ ಕಾನೂನು ರಚನೆ, ತಂತ್ರಜ್ಞಾನ ಬಳಕೆ, ಕ್ಷೇತ್ರ ನಿರ್ವಹಣೆ ಮತ್ತು ನೈತಿಕ ಆಡಳಿತದ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ರಾಜ್ಯಗಳಲ್ಲೂ ಹೆಚ್ಚು ಹೆಚ್ಚು ನಡೆಸುವ ಅವಶ್ಯಕತೆಯಿದೆ”, ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದಿನ ಆಡಳಿತ ವ್ಯವಸ್ಥೆ ಅತ್ಯಂತ ಸಂಕೀರ್ಣವಾ ಗಿದೆ. ಆದ್ದರಿಂದ ಪ್ರತಿಯೊಂದು ವಿಧಾನಸಭೆಯೂ ನಿರಂತರ ಕಲಿಕೆಯ ಸಂಸ್ಕೃತಿಯನ್ನು ಅಳವಡಿಸಿ ಕೊಳ್ಳಬೇಕು. ಕೇವಲ ಅನುಭವಕ್ಕೆ ಸೀಮಿತವಾಗಿರದೆ, ಕಾಪೆರ್ ರೇಟ್ ನಾಯಕರು ತರಬೇತಿ ಪಡೆಯುವಂ ತೆಯೇ, ಶಾಸಕರು ಕೃತಕ ಬುದ್ಧಿಮತ್ತೆ , ಸೈಬರ್ ಭದ್ರತೆ, ಡೇಟಾ ಆಡಳಿತ ಮತ್ತು ಆರ್ಥಿಕ ನೀತಿ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆಯುವುದು ಅವಶ್ಯಕ. ಇಂದಿನ ಕಾಲದಲ್ಲಿ ಕೃತಕ ಬುದ್ಧಿಮತ್ತೆಯನ್ನು ಕೇವಲ ತಂತ್ರಜ್ಞಾನವಾಗಿ ನೋಡದೇ, ಮೂಲಸೌಕರ್ಯವಾಗಿ ಅರ್ಥಮಾಡಿಕೊಳ್ಳಬೇಕು. ಭವಿಷ್ಯಸೂಚಕ ಪೋಲಿಸ್ ವ್ಯವಸ್ಥೆ, ಬೆಳೆ ಮುನ್ಸೂಚನೆ, ಸಂಚಾರ ನಿರ್ವಹಣೆ ಮತ್ತು ಆರೋಗ್ಯ ಸೇವೆಗಳಂತಹ ಸಾರ್ವಜನಿಕ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿ ಯುತವಾಗಿ ಬಳಸುವ ನೀತಿಗಳನ್ನು ರೂಪಿಸುವುದು ಶಾಸಕರ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಯು.ಟಿ ಖಾದರ್ ಹೇಳಿದರು.

ಭಾರತದ ಬೆಳವಣಿಗೆಗೆ ಈಗ ಪ್ರತಿಕ್ರಿಯಾತ್ಮಕ ಆಡಳಿತ ದಿಂದ ಭವಿಷ್ಯಸೂಚಕ ಆಡಳಿತದತ್ತ ಸಾಗುವ ಅಗತ್ಯ ವಿದೆ. ಡೇಟಾ ಆಧಾರಿತ ನಿರ್ಧಾರಗಳು, ನೈಜ- ಸಮಯದ ವಿಶ್ಲೇಷಣೆ ಮತ್ತು ತಂತ್ರಜ್ಞಾನ ಬಳಕೆ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಬಜೆಟ್ ಹಂಚಿಕೆಗಳು ಊಹೆಗಳ ಮೇಲೆ ಅಲ್ಲ,ನಿಖರ ಡೇಟಾದ ಮೇಲೆ ಆಧಾರಿತವಾಗಿರಬೇಕು. ಇದೇ ಸಮಯದಲ್ಲಿ ರೂಪಾಯಿಯ ಬಲವರ್ಧನೆಗಾಗಿ ದೀರ್ಘಾವಧಿಯ ದೃಷ್ಟಿಕೋನ ಅಗತ್ಯ. ರಫ್ತು ಸಾಮಥ್ರ್ಯ ವನ್ನು ಹೆಚ್ಚಿಸುವುದು, ದೇಶೀಯ ಉತ್ಪಾದ ನೆಯನ್ನು ಉತ್ತೇಜಿಸುವುದು ಮತ್ತು ರೂಪಾಯಿ ಆಧಾರಿತ ವ್ಯವಹಾರಗಳನ್ನು ಪ್ರೋತ್ಸಾಹಿಸುವುದು ಆರ್ಥಿಕ ಸ್ವಾವಲಂಬನೆಗೆ ದಾರಿಯಾಗುತ್ತದೆ ಎಂದರು.

ಭಾರತದ ಮಾನವ ಸಂಪತ್ತು ಭವಿಷ್ಯಕ್ಕೆ ಸಿದ್ಧವಾಗಿ ರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಸಾಕ್ಷರತೆ, ಆರ್ಥಿಕ ಅರಿವು ಮತ್ತು ವಿಮರ್ಶಾತ್ಮಕ ಚಿಂತನೆಗೆ ಆದ್ಯತೆ ನೀಡಬೇಕು. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಜಾಗತಿಕ ಬೇಡಿಕೆಗಳಿಗೆ ಹೊಂದಿ ಕೊಳ್ಳಬೇಕು. ಆಡಳಿತದಲ್ಲಿಯೂ ಸ್ಟಾರ್ಟ್ ಅಪ್ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಪೈಲಟ್ ಯೋಜನೆಗಳು, ತ್ವರಿತ ಪ್ರತಿಕ್ರಿಯೆ ಮತ್ತು ವಿಸ್ತರಣೆ ಸಾಮಥ್ರ್ಯವು ಸಾಮಾನ್ಯವಾಗಬೇಕು ಎಂದು ಹೇಳಿದರು.
“ನಮ್ಮ ಗುರಿ ಕೇವಲ ಅಭಿವೃದ್ಧಿಯಲ್ಲ, ನಾಯಕತ್ವ. 2047 ರೊಳಗೆ ಭಾರತವು ಜಗತ್ತಿನ ಮಾದರಿಗಳನ್ನು ಅನುಸರಿಸುವ ದೇಶವಲ್ಲ, ಹೊಸ ಮಾದರಿಗಳನ್ನು ಸೃಷ್ಟಿಸುವ ರಾಷ್ಟ್ರವಾಗಬೇಕು. ಇದಕ್ಕಾಗಿ ವಯಸ್ಸಿನಲ್ಲಿ ಯುವಕರಾಗಿರಲಿ ಅಥವಾ ಚಿಂತನೆಗಳಲ್ಲಿ ಯುವಕ ರಾಗಿರಲಿ, ಶಾಸಕರು ಧೈರ್ಯ, ಸಾಮಥ್ರ್ಯ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಮುಂದಾಳತ್ವ ವಹಿಸಬೇಕು” ಎಂದು ಸ್ಪೀಕರ್ ಹೇಳಿದರು.
ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಛತ್ತೀಸ್‍ಗಢ, ಹರಿಯಾಣ, ಕರ್ನಾಟಕ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಅಧ್ಯಕ್ಷರು, ಗೋವಾದ ಕೇಂದ್ರ ಸಚಿವರು, ಸಂಸದರು ಹಾಗೂ ವಿವಿಧ ರಾಜ್ಯಗಳ ಶಾಸಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಎರಡು ದಿನಗಳ ಈ ಸಮ್ಮೇಳನ ದಲ್ಲಿ “2047ರೊಳಗೆ ಅಭಿವೃದ್ಧಿಶೀಲ ಭಾರತ ನಿರ್ಮಾಣದಲ್ಲಿ ಯುವ ಶಾಸಕರ ಪಾತ್ರ” ಮತ್ತು “ವಲಯ-1X ರಾಜ್ಯಗಳ ವ್ಯಾಪಾರ, ಪ್ರವಾಸೋದ್ಯಮ, ನಗರೀಕರಣ,ಪರಿಸರ ಹಾಗೂ ಕರಾವಳಿ ಸಂಪರ್ಕತೆ” ಎಂಬ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.
ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೋವಾ ರಾಜ್ಯಪಾಲ ಪುಸಪಾಟಿ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮುಂತಾದ ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Share News