ಮಂಗಳೂರು.ಎ.13:ಗೋವಾದ ಪಣಜಿಯಲ್ಲಿ ನಡೆದ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA)ಭಾರತ ವಲಯ-lX ಪ್ರಥಮ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಮಾತನಾಡಿದರು.

ಇಂದಿನ ಆಡಳಿತ ವ್ಯವಸ್ಥೆ ಅತ್ಯಂತ ಸಂಕೀರ್ಣವಾ ಗಿದೆ. ಆದ್ದರಿಂದ ಪ್ರತಿಯೊಂದು ವಿಧಾನಸಭೆಯೂ ನಿರಂತರ ಕಲಿಕೆಯ ಸಂಸ್ಕೃತಿಯನ್ನು ಅಳವಡಿಸಿ ಕೊಳ್ಳಬೇಕು. ಕೇವಲ ಅನುಭವಕ್ಕೆ ಸೀಮಿತವಾಗಿರದೆ, ಕಾಪೆರ್ ರೇಟ್ ನಾಯಕರು ತರಬೇತಿ ಪಡೆಯುವಂ ತೆಯೇ, ಶಾಸಕರು ಕೃತಕ ಬುದ್ಧಿಮತ್ತೆ , ಸೈಬರ್ ಭದ್ರತೆ, ಡೇಟಾ ಆಡಳಿತ ಮತ್ತು ಆರ್ಥಿಕ ನೀತಿ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆಯುವುದು ಅವಶ್ಯಕ. ಇಂದಿನ ಕಾಲದಲ್ಲಿ ಕೃತಕ ಬುದ್ಧಿಮತ್ತೆಯನ್ನು ಕೇವಲ ತಂತ್ರಜ್ಞಾನವಾಗಿ ನೋಡದೇ, ಮೂಲಸೌಕರ್ಯವಾಗಿ ಅರ್ಥಮಾಡಿಕೊಳ್ಳಬೇಕು. ಭವಿಷ್ಯಸೂಚಕ ಪೋಲಿಸ್ ವ್ಯವಸ್ಥೆ, ಬೆಳೆ ಮುನ್ಸೂಚನೆ, ಸಂಚಾರ ನಿರ್ವಹಣೆ ಮತ್ತು ಆರೋಗ್ಯ ಸೇವೆಗಳಂತಹ ಸಾರ್ವಜನಿಕ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿ ಯುತವಾಗಿ ಬಳಸುವ ನೀತಿಗಳನ್ನು ರೂಪಿಸುವುದು ಶಾಸಕರ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಯು.ಟಿ ಖಾದರ್ ಹೇಳಿದರು.
ಭಾರತದ ಮಾನವ ಸಂಪತ್ತು ಭವಿಷ್ಯಕ್ಕೆ ಸಿದ್ಧವಾಗಿ ರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಸಾಕ್ಷರತೆ, ಆರ್ಥಿಕ ಅರಿವು ಮತ್ತು ವಿಮರ್ಶಾತ್ಮಕ ಚಿಂತನೆಗೆ ಆದ್ಯತೆ ನೀಡಬೇಕು. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಜಾಗತಿಕ ಬೇಡಿಕೆಗಳಿಗೆ ಹೊಂದಿ ಕೊಳ್ಳಬೇಕು. ಆಡಳಿತದಲ್ಲಿಯೂ ಸ್ಟಾರ್ಟ್ ಅಪ್ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಪೈಲಟ್ ಯೋಜನೆಗಳು, ತ್ವರಿತ ಪ್ರತಿಕ್ರಿಯೆ ಮತ್ತು ವಿಸ್ತರಣೆ ಸಾಮಥ್ರ್ಯವು ಸಾಮಾನ್ಯವಾಗಬೇಕು ಎಂದು ಹೇಳಿದರು.
“ನಮ್ಮ ಗುರಿ ಕೇವಲ ಅಭಿವೃದ್ಧಿಯಲ್ಲ, ನಾಯಕತ್ವ. 2047 ರೊಳಗೆ ಭಾರತವು ಜಗತ್ತಿನ ಮಾದರಿಗಳನ್ನು ಅನುಸರಿಸುವ ದೇಶವಲ್ಲ, ಹೊಸ ಮಾದರಿಗಳನ್ನು ಸೃಷ್ಟಿಸುವ ರಾಷ್ಟ್ರವಾಗಬೇಕು. ಇದಕ್ಕಾಗಿ ವಯಸ್ಸಿನಲ್ಲಿ ಯುವಕರಾಗಿರಲಿ ಅಥವಾ ಚಿಂತನೆಗಳಲ್ಲಿ ಯುವಕ ರಾಗಿರಲಿ, ಶಾಸಕರು ಧೈರ್ಯ, ಸಾಮಥ್ರ್ಯ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಮುಂದಾಳತ್ವ ವಹಿಸಬೇಕು” ಎಂದು ಸ್ಪೀಕರ್ ಹೇಳಿದರು.
ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಛತ್ತೀಸ್‍ಗಢ, ಹರಿಯಾಣ, ಕರ್ನಾಟಕ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಅಧ್ಯಕ್ಷರು, ಗೋವಾದ ಕೇಂದ್ರ ಸಚಿವರು, ಸಂಸದರು ಹಾಗೂ ವಿವಿಧ ರಾಜ್ಯಗಳ ಶಾಸಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಎರಡು ದಿನಗಳ ಈ ಸಮ್ಮೇಳನ ದಲ್ಲಿ “2047ರೊಳಗೆ ಅಭಿವೃದ್ಧಿಶೀಲ ಭಾರತ ನಿರ್ಮಾಣದಲ್ಲಿ ಯುವ ಶಾಸಕರ ಪಾತ್ರ” ಮತ್ತು “ವಲಯ-1X ರಾಜ್ಯಗಳ ವ್ಯಾಪಾರ, ಪ್ರವಾಸೋದ್ಯಮ, ನಗರೀಕರಣ,ಪರಿಸರ ಹಾಗೂ ಕರಾವಳಿ ಸಂಪರ್ಕತೆ” ಎಂಬ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.
ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೋವಾ ರಾಜ್ಯಪಾಲ ಪುಸಪಾಟಿ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮುಂತಾದ ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.