ಮಂಗಳೂರು:ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ನಡೆಯುವ 79ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಚರಣೆಯು ದಿನಾಂಕ 14.09.2026ನೇ ಸೋಮವಾರದಿಂದ 18.09.2026ನೇ ಶುಕ್ರವಾರದವರೆಗೆ ಮಂಗಳೂರಿನ ಪ್ರತಾಪನಗರದ ಸಂಘನಿಕೇತನದಲ್ಲಿ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಶ್ರೀ ಜಿ. ಸುರೇಶ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಉತ್ಸವದ ಉದ್ಘಾಟನೆಯನ್ನು ದಿನಾಂಕ 14.09.2026ನೇ ಸೋಮವಾರದಂದು ಬೆಳಿಗ್ಗೆ 10:00 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರ ಪ್ರಚಾರಕರಾದ ಶ್ರೀ ಭರತ್ ಕುಮಾರ್ ನೆರವೇರಿಸಲಿರುವರು. ನಂತರ ಗಣಹೋಮ ನೆರವೇರಲಿದೆ. ಆದೇ ದಿನ ಸಂಜೆ 6.45 ಗಂಟೆಗೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್(ರಿ.) ಅಧ್ಯಕ್ಷರಾದ ಶ್ರೀ ಅರ್ಜುನ್ ಭಂಡಾರ್ಕರ್‌ರ ಅಧ್ಯಕ್ಷತೆಯಲ್ಲಿ ಸಮಿತಿಯ ವತಿಯಿಂದ ಆಯೋಜಿಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7:45ರಿಂದ ಮೂಡಗಣಪತಿ ಸೇವೆ ಹಾಗೂ ರಂಗಪೂಜೆ ನಡೆಯಲಿದೆ.ದಿನಾಂಕ 15.09.2026ನೇ ಮಂಗಳವಾರ ಪೂರ್ವಾಹ್ನ 10:00ರಿಂದ “ಯುವಸಮಾವೇಶ” ಸಂಜೆ 6:00 ಗಂಟೆಯಿಂದ ಶ್ರೀ ಪಾಂಚಜನ್ಯ ಪ್ರತಿಷ್ಠಾನ ಇವರಿಂದ “ಸಪ್ತಕ್ಷೇತ್ರ ಮಹಾತ್ಮ” ನೃತ್ಯರೂಪಕದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ (ದ. ಕ. ಜಿಲ್ಲೆ) ಇದರ ಅಧ್ಯಕ್ಷರಾದ ಶ್ರೀ CA ಶಾಂತಾರಾಮ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ದಿನಾಂಕ 16.09.2026ನೇ ಬುಧವಾರ ಮುಂಜಾನೆ 5:00 ಗಂಟೆಗೆ “ಉಷಕಾಲ ಪೂಜೆ” ಮಧ್ಯಾಹ್ನ 1:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6:00 ಗಂಟೆಯಿಂದ ವಿದುಷಿ ವೈಷ್ಣವಿ ಪ್ರಭು ಹಾಗೂ ಗಂಜಿಮಠದ ನಟನಂ ನೃತ್ಯ ವಿದ್ಯಾಲಯದ ಅವರ ಶಿಷ್ಯವೃಂದದವರಿಂದ “ಶ್ರೀ ಗಣೇಶಾಮೃತ” ಭರತನಾಟ್ಯ ನೃತ್ಯರೂಪಕದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಕೆನರಾಬ್ಯಾಂಕ್ ವೃತ್ತಕಛೇರಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮಂಜುನಾಥ್ ಬಿ. ಸಿಂಗೈ ಇವರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ದಿನಾಂಕ 17.09.2026ನೇ ಗುರುವಾರ ಮಧ್ಯಾಹ್ನ 2:30ರಿಂದ “ಮಹಿಳಾ ಸಮಾವೇಶ”, ಸಂಜೆ 6:00 ಗಂಟೆಯಿಂದ ಧಾರವಾಡದ ಪ್ರಸಿದ್ಧ ಗಾಯಕರಾದ ಡಾ| ವಿಜಯಕುಮಾರ ಪಾಟೀಲ್ ಇವರಿಂದ “ಭಜನ್ ಸಂಧ್ಯಾ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ನಿಧಿ ಲ್ಯಾಂಡ್ ಇನ್ಸಾಸ್ಟಕ್ಟರ್ ಡೆವೆಲಪರ್ಸ್ ಇಂಡಿಯಾ ಪ್ರೈವೇಟ್ ಲಿ. ಇದರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಶಾಂತ್ ಕೆ. ಸನಿಲ್ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ದಿನಾಂಕ 18.09.2026ನೇ ಶುಕ್ರವಾರ ಮಧ್ಯಾಹ್ನ 1:15ಕ್ಕೆ ವಿಸರ್ಜನಾಪೂಜೆ, ಸಂಜೆ 5:30ಕ್ಕೆ ಸಂಕಲ್ಪ ಕಾರ್ಯಕ್ರಮ, ಸಂಜೆ 6:15ಕ್ಕೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯು ಸಂಘನಿಕೇತನದಿಂದ ಹೊರಟು ಮಣ್ಣಗುಡ್ಡ, ನ್ಯೂ ಚಿತ್ರಾ ಜಂಕ್ಷನ್, ರಥಬೀದಿಯಾಗಿ ಶ್ರೀ ಮಹಾಮಾಯಾ ದೇವಸ್ಥಾನದ ಕೆರೆಯಲ್ಲಿ ಸಮಾಪನಗೊಳ್ಳಲಿರುವುದು. ಶ್ರೀ ಬಬ್ಬುಸ್ವಾಮಿ ಸೇವಾಸಮಿತಿ, ಕಾನ-ಕಲ ಇದರ ಪ್ರಧಾನ ಅರ್ಚಕರಾದ ಶ್ರೀ ಎಸ್. ಸುಂದರ್ ಇವರಿಂದ ಶೋಭಾಯಾತ್ರೆಗೆ ಚಾಲನೆ ನೆರವೇರಲಿದೆ.ಪ್ರತಿದಿನ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿವಿಧ ಭಜನಾತಂಡಗಳಿಂದ ಭಜನಾ ಸೇವೆ ಜರಗಲಿದೆ. ಮೊದಲ ದಿನ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಮಧ್ಯಾಹ್ನ ಪೂಜೆ ಮಧ್ಯಾಹ್ನ 1:15ಕ್ಕೆ, ರಾತ್ರಿಪೂಜೆ ರಾತ್ರಿ 8:30ಕ್ಕೆ ನೆರವೇರಲಿದೆ.ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ, ಎಂದು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
