canaratvnews

ನಿವೃತ್ತ ಧರ್ಮಗುರು ವಂ.ಫಾ. ಜೆರಾಲ್ಡ್‌ ಪಿಂಟೊ ನಿಧನ

ಮಂಗಳೂರು: ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ನಿವೃತ್ತ ಗುರುಗಳಾದ ವಂ.ಫಾ. ಜೆರಾಲ್ಡ್‌ ಪಿಂಟೊ (72) ಇಂದು (ಮಾ. 26) ಜೆಪ್ಪುವಿನ ಸಂತ ಜುಜೆ ವಾಜ್‌ ನಿವೃತ್ತ ನಿವಾಸದಲ್ಲಿ ಕೊನೆಯುಸಿರೆಳೆದರು.

ಮಂಗಳೂರು ನಗರದ ಬೊಂದೇಲ್‌ ನಿವಾಸಿಯಾದ ಅವರು ಅ. 2, 1953 ರಂದು ದಿ. ಸಿಲ್ವೆಸ್ಟರ್ ಆರ್ ಪಿಂಟೊ ಮತ್ತು ದಿ. ಬೆನ್ನಿ ಪಿಂಟೊ ದಂಪತಿಗೆ ಜನಿಸಿದರು. ಮೇ 4, 1982 ರಂದು ಧರ್ಮಪ್ರಾಂತ್ಯದ ಪಾದ್ರಿಯಾಗಿ ದೀಕ್ಷೆ ಪಡೆದು ತಮ್ಮ ಜೀವನದ ನಾಲ್ಕು ದಶಕಗಳನ್ನು ಪಾದ್ರಿಯ ಸೇವೆಗೆ ಮುಡಿಪಾಗಿಟ್ಟರು.

ಹಲವು ಚರ್ಚ್‌ಗಳಲ್ಲಿ ಸೇವೆ

ಫಾದರ್ ಜೆರಾಲ್ಡ್ ಪಿಂಟೊ ಅವರು ಕಾಸ್ಸಿಯಾ, ದೇರೆಬೈಲ್‌, ಮೂಡುಬೆಳ್ಳೆ, ವಿಟ್ಲ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. ನಂತರ ಪಾವೂರ್‌, ಬೆಳ್ವೆ, ಬಸೂರ್‌, ಪಾನೀರ್‌, ಕೂಳೂರು, ಶಂಬೂರು, ಮರಿಯಾಶ್ರಮ್‌ನಲ್ಲಿ ಸೇವೆ ಸಲ್ಲಿಸಿದರು.

ಮಾ. 28ರಂದು  ಅಂತ್ಯಕ್ರಿಯೆ  

ಫಾದರ್ ಜೆರಾಲ್ಡ್ ಪಿಂಟೊ ಅವರ ಅಂತ್ಯಕ್ರಿಯೆಯು ಮಾರ್ಚ್ 28, ಶುಕ್ರವಾರ ಬೆಳಿಗ್ಗೆ 9:30 ಕ್ಕೆ ವೆಲೆನ್ಸಿಯಾದಲ್ಲಿರುವ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿದೆ.

 

 

Share News
Exit mobile version