• Home  
  • ಮಂಗಳೂರಿನ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಬೆಂಕಿ: ಅಪಾರ ನಷ್ಟ
- DAKSHINA KANNADA - HOME - LATEST NEWS

ಮಂಗಳೂರಿನ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಬೆಂಕಿ: ಅಪಾರ ನಷ್ಟ

ಮಂಗಳೂರು: ನಗರದ ಹೊಯ್ಗೆಬಜಾರ್‌ನಲ್ಲಿರುವ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಮಂಗಳವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೆಂಚುಗಳು ಹಾಗೂ ಇಟ್ಟಿಗೆಗಳು ಹಾನಿಗೊಳಗಾಗಿವೆ. ಕಟ್ಟಡವೂ ಭಾಗಶಃ ಸುಟ್ಟುಹೋಗಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದವು. ಬೆಂಕಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದ್ದರಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಎರಡು, ಕದ್ರಿ ಅಗ್ನಿಶಾಮಕ ಠಾಣೆ ಹಾಗೂ ಎಂಸಿಎಫ್‌ನ ತಲಾ ಒಂದು ಅಗ್ನಿಶಾಮಕ ವಾಹನ ಬಳಸಿ ಬೆಂಕಿಯನ್ನು ನಂದಿಸಲಾಯಿತು. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಗೊತ್ತಾಗಿಲ್ಲ. ಕಾರ್ಖಾನೆಯಲ್ಲಿ ದಾಸ್ತಾನಿದ್ದ ಹೆಂಚುಗಳು ಹಾಗೂ […]

Share News

ಮಂಗಳೂರು: ನಗರದ ಹೊಯ್ಗೆಬಜಾರ್‌ನಲ್ಲಿರುವ ಆಲ್ಬುಕರ್ಕ್‌ ಹೆಂಚಿನ ಕಾರ್ಖಾನೆಗೆ ಮಂಗಳವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೆಂಚುಗಳು ಹಾಗೂ ಇಟ್ಟಿಗೆಗಳು ಹಾನಿಗೊಳಗಾಗಿವೆ. ಕಟ್ಟಡವೂ ಭಾಗಶಃ ಸುಟ್ಟುಹೋಗಿದೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದವು. ಬೆಂಕಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದ್ದರಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಎರಡು, ಕದ್ರಿ ಅಗ್ನಿಶಾಮಕ ಠಾಣೆ ಹಾಗೂ ಎಂಸಿಎಫ್‌ನ ತಲಾ ಒಂದು ಅಗ್ನಿಶಾಮಕ ವಾಹನ ಬಳಸಿ ಬೆಂಕಿಯನ್ನು ನಂದಿಸಲಾಯಿತು.

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಗೊತ್ತಾಗಿಲ್ಲ. ಕಾರ್ಖಾನೆಯಲ್ಲಿ ದಾಸ್ತಾನಿದ್ದ ಹೆಂಚುಗಳು ಹಾಗೂ ಇಟ್ಟಿಗೆ ಭಾರಿ ಪ್ರಮಾಣದಲ್ಲಿ ಹಾನಿಗೊಂಡಿದೆ. ಈ ದುರಂತದಿಂದ ಎಷ್ಟು ನಷ್ಟವಾಗಿದೆ ಎಂದು ಇನ್ನೂ ಅಂದಾಜು ಮಾಡಿಲ್ಲ.

ಕಾರ್ಖಾನೆಯಲ್ಲಿ ಹೆಂಚು ಹಾಗೂ ಇಟ್ಟಿಗೆ ಕಾಯಿಸುವ ಗೂಡಿಗೆ ಬೆಂಕಿ ಉರಿಸಲು ದಾಸ್ತಾನು ಮಾಡಿದ ಕಟ್ಟಿಗೆ, ಗೇರುಬೀಜದ ಸಿಪ್ಪೆ ಮತ್ತಿತರ ಪರಿಕರಗಳೂ ಸುಟ್ಟುಹೋಗಿವೆ. ರಾತ್ರಿ ವೇಳೆ ಕಾರ್ಮಿಕರು ಯಾರೂ ಕಾರ್ಖಾನೆಯಲ್ಲಿ ಇರಲಿಲ್ಲ. ಬೆಂಕಿ ಹೊತ್ತಿಕೊಂಡ ಬಗ್ಗೆ ಅಲ್ಲಿನ ಕಾವಲು ಸಿಬ್ಬಂದಿ ನಮಗೆ ಮಾಹಿತಿ ನೀಡಿದ್ದರು ಎಂದರು.

Share News