ಮಂಗಳೂರು: ದೇವರ ಸೇವೆ ಮಾಡುವ ಅವಕಾಶ ಪಡೆದಿರುವ ಟ್ರಸ್ಟಿಗಳು ಸಮಾಜದ ಎಲ್ಲಾ ವರ್ಗಗಳ ಸೇವೆಗಳಿಗೆ ಬದ್ದರಾಗಿದ್ದು, ಸಾಮಾಜಿಕ ಸೇವೆ ಬದ್ಧತೆಯಿಂದ ಮಾಡುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಶಕ್ತಿ ಬರಲಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಅವರು ತಮ್ಮ ಮಹಾನಗರ ಪಾಲಿಕೆ ಕಛೇರಿಯಲ್ಲಿ ಕದ್ರಿ ಮಂಜುನಾಥೇಶ್ವರ ದೇವರ ಆಡಳಿತ ಮಂಡಳಿಗೆ ನೂತನವಾಗಿ ನೇಮಕಗೊಂಡ ಸದಸ್ಯರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದೇವರಾಜ್ ಕೆ. ದೇವರ ಕೆಲಸ ಮತ್ತು ಸಮಾಜದ ಕೆಲಸವನ್ನು ತಾರತಮ್ಯ ಮಾಡದೇ ಎಲ್ಲಾ ವರ್ಗ ಗಳ ಜನರನ್ನು ಸಮಾಜಕ್ಕೆ ಒಳಿತಾಗುವುದು ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮಂಜುನಾಥೇಶ್ವರ ದೇವಸ್ಥಾನದ ಟ್ರಸ್ಟಿಗಳಾದ ಕಿರಣ್ ಜೆ.. ಶ್ರೀಮತಿ ಪ್ರೀತಾ ನಂದನ್, ಶ್ರೀಮತಿ ಉಷಾ ಪ್ರಭಾಕರ್, ರಾಜೇಂದ್ರ, ನಾರಾಯಣ್ ಕೋಟ್ಯಾನ್, ದಿಲ್ ರಾಜ್ ಆಳ್ವ ಉಪಸ್ಥಿತರಿದ್ದು ಎಲ್ಲರಿಗೂ ಶಾಸಕರು ಸನ್ಮಾನಿಸಿದರು.
ಈ ಸಂದರ್ಭ ಮಾಜಿ ಕಾರ್ಪೋರೇಟರಾದ ಡಿ.ಕೆ. ಅಶೋಕ್ ಕುಮಾರ್, ಜೆ. ನಾಗೇಂದ್ರ ಕುಮಾರ್. ಅಮೃತ್ ವಿ ಕದ್ರಿ, ಭಾಸ್ಕರ್ ರಾವ್, ಪದ್ಮನಾಭ ಅಮೀನ್, ಗಿರೀಶ್ ಆಳ್ವ, ವಿಕಾಸ್ ಶೆಟ್ಟಿ, ಬಾಜಿಲ್ ಕುಲಶೇಖರ್ ಮುಂತಾದವರು ಉಪಸ್ಥಿತರಿದ್ದರು.