• Home  
  • ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್ ಶಾಲೆ ಮತ್ತು ಕಾಲೇಜ್ ಆಫ್ ನರ್ಸಿಂಗ್ ಹಾಗೂ ಫಾದರ್ ಮುಲ್ಲರ್ ಕಾಲೇಜಿನ ಪದವಿ ಪ್ರದಾನ ಸಮಾರಂಭ
- COMMUNITY NEWS - LATEST NEWS

ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್ ಶಾಲೆ ಮತ್ತು ಕಾಲೇಜ್ ಆಫ್ ನರ್ಸಿಂಗ್ ಹಾಗೂ ಫಾದರ್ ಮುಲ್ಲರ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

ಮಂಗಳೂರು: ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕಗಳಾದ ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಫಾದರ್ ಮುಲ್ಲರ್ ಸ್ಪೀಚ್ ಆಂಡ್ ಹಿಯರಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಸಂಸ್ಥೆಯ ಆಡಳಿತ ಮಂಡಳಿ, ಗಣ್ಯ ಅತಿಥಿಗಳು, 226 ಪದವೀಧರರು, ಅಧ್ಯಾಪಕರು, ಪೋಷಕರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪದವೀಧರ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರ ಶೈಕ್ಷಣಿಕ ಮೆರವಣಿಗೆಯೊಂದಿಗೆ […]

Share News

ಮಂಗಳೂರು: ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕಗಳಾದ ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಫಾದರ್ ಮುಲ್ಲರ್ ಸ್ಪೀಚ್ ಆಂಡ್ ಹಿಯರಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.

ಸಂಸ್ಥೆಯ ಆಡಳಿತ ಮಂಡಳಿ, ಗಣ್ಯ ಅತಿಥಿಗಳು, 226 ಪದವೀಧರರು, ಅಧ್ಯಾಪಕರು, ಪೋಷಕರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪದವೀಧರ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರ ಶೈಕ್ಷಣಿಕ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಸಂಸ್ಥೆಯ ಸಂಸ್ಥಾಪಕ ರೆ. ಫಾ. ಆಗಸ್ಟಸ್ ಮುಲ್ಲರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಬೆಂಗಳೂರಿನ ವಿಶ್ರಾಂತ ಆರ್ಚ್‌ಬಿಷಪ್ ಅತಿ ವಂದನೀಯ ಡಾ. ಬರ್ನಾರ್ಡ್ ಮೊರಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ (MAHE)
ಇದರ ಮಾಜಿ ಅಸೋಸಿಯೇಟ್ ಡೀನ್
ಡಾ. ವೆಂಕಟರಾಜ ಐತಾಳ್ ಯು. ಮತ್ತು ಭುವನೇಶ್ವರದ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾ ಪಿ. ಶೆಟ್ಟಿ ಅವರು ಉಪಸ್ಥಿತರಿದ್ದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫೌಸ್ಟಿನ್ ಲೂಕಾಸ್ ಲೋಬೋ, ಆಡಳಿತಾಧಿಕಾರಿಗಳಾದ ವಂದನೀಯ ಡಾ. ಮೈಕೆಲ್ ಎಲ್. ಸಾಂತುಮಾಯೋರ್, ವಂದನೀಯ ಫಾ. ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ ಕುಮಾರ್ ಕೆ, ಪ್ರಾಂಶುಪಾಲರಾದ ವಂದನೀಯ ಸಿಸ್ಟರ್ ಡಾ. ಧನ್ಯ ದೇವಸ್ಯ, ಪ್ರೊ. ಸಿಂಥಿಯಾ ಸಾಂತುಮಾಯೋರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಡಾ. ಆಶಾ ಪಿ. ಶೆಟ್ಟಿ ಅವರು ಮಾತನಾಡಿ ತಮ್ಮ ಹಳೆಯ ಸಂಸ್ಥೆಗೆ ಆಗಮಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನರ್ಸಿಂಗ್ ಕೇವಲ ರೋಗಿಗಳ ಆರೈಕೆಯಲ್ಲದೆ ಆಡಳಿತ ಮತ್ತು ಸಂಶೋಧನಾ ಕ್ಷೇತ್ರಗಳಿಗೂ ವಿಸ್ತರಿಸಿದೆ . ಯಾವುದೇ ತಂತ್ರಜ್ಞಾನವು ನರ್ಸ್‌ಗಳ ಮಾನವೀಯ ಸ್ಪರ್ಶವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಡಾ. ವೆಂಕಟರಾಜ ಐತಾಳ್ ಯು ಅವರು ಫಾದರ್ ಮುಲ್ಲರ್ ಸಂಸ್ಥೆಯೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ಜ್ಞಾನ ಮತ್ತು ಕೌಶಲ್ಯದ ಜೊತೆಗೆ ಸೃಜನಶೀಲತೆ ಮತ್ತು ನಾವೀನ್ಯತೆ (Innovation) ಶೈಕ್ಷಣಿಕ ಯಶಸ್ಸಿನ ಮಂತ್ರಗಳಾಗಿವೆ ಎಂದು ನುಡಿದರು.
ಅತಿ ವಂದನೀಯ ಡಾ. ಬರ್ನಾರ್ಡ್ ಮೊರಾಸ್ ಮಾತನಾಡಿ, ಫಾದರ್ ಮುಲ್ಲರ್ ಸಂಸ್ಥೆಯು ರೋಗಿಗಳ ಮತ್ತು ಸಂಕಷ್ಟದಲ್ಲಿರುವವರ ಸೇವೆಯ ದ್ಯೋತಕವಾಗಿದೆ. ಕೌಶಲ್ಯದ ಜೊತೆಗೆ ಸಹಾನುಭೂತಿ (Empathy) ಅತಿ ಮುಖ್ಯ ಎಂದು ಪದವೀಧರರಿಗೆ ಕಿವಿಮಾತು ಹೇಳಿದರು.

ಪ್ರಶಸ್ತಿ ಮತ್ತು ಪುರಸ್ಕಾರಗಳು:
ಸಮಾರಂಭದಲ್ಲಿ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಕಾಲೇಜ್ ಆಫ್ ನರ್ಸಿಂಗ್ ಹಾಗೂ ಸ್ಪೀಚ್ ಆಂಡ್ ಹಿಯರಿಂಗ್ ವಿಭಾಗದ ಪದವೀಧರರಿಗೆ ಪದವಿ ಪ್ರಮಾಣಪತ್ರ ನೀಡಿ ವೃತ್ತಿಪರ ಪ್ರಮಾಣ ವಚನ ಬೋಧಿಸಲಾಯಿತು.
ನರ್ಸಿಂಗ್ ವಿಭಾಗದಲ್ಲಿ ಪ್ರಿಯಾ ಅಸ್ಮಿ ಡಿ ಸೋಜಾ (ಜಿ.ಎನ್.ಎಂ.), ದೀಪಾ ರಾಬರ್ಟ್ ಕೆ (ಬಿಎಸ್ಸಿ ನರ್ಸಿಂಗ್ ), ದಿವ್ಯ ಜ್ಯೋತಿ ಕ್ರಾಸ್ತಾ (ಪಿ. ಬಿ. ಬಿ. ಎಸ್ಸಿ ) ಮತ್ತು ಮರ್ಲಿನ್ ಪ್ರಿಯಾ ಮೊರಾಸ್ (ಎಂ. ಎಸ್ಸಿ. ನರ್ಸಿಂಗ್ ) ಅವರು ಅತ್ಯುತ್ತಮ ಸಾಧನೆಗಾಗಿ ಪುರಸ್ಕೃತರಾದರು.
ಸ್ಪೀಚ್ ಮತ್ತು ಹಿಯರಿಂಗ್ ವಿಭಾಗದಲ್ಲಿ ಸ್ತುತಿ ಎಸ್. ಕೋಟ್ಯಾನ್, ನೈನಿಕಾ ಥಾಮಸ್, ಹರ್ಲಿನ್ ಮೆರಿಲ್ ಮೆಂಡೋನ್ಸಾ (ಪ್ರಥಮ ಶ್ರೇಣಿ), ರೇಷ್ಮಾ, ಜೆನಿನ್ ಡಿಸೋಜಾ, ಕ್ಯಾರೊಲ್ ಜೆವಿತಾ ಲೋಬೋ (ಪ್ರಥಮ ಶ್ರೇಣಿ), ಹ್ಯಾಡ್ಲಿನ್ ರೇಚಲ್ ನೊರೊನ್ಹಾ ಮತ್ತು ನೇಹಾ ಆರ್. ಪಾಟೀಲ್ ಕುಲಕರ್ಣಿ ಅವರು ವಿವಿಧ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಗರಿಷ್ಠ ಅಂಕ ಗಳಿಸಿ ಗೌರವಿಸಲ್ಪಟ್ಟರು.

*ಸಮಗ್ರ ಶ್ರೇಷ್ಠ ಪ್ರಶಸ್ತಿಗಳು (Overall Excellence):*
ರೇಶಲ್ ಮಸ್ಕರೇನ್ಹಸ್ ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಸಮಗ್ರ ಶ್ರೇಷ್ಠತೆ.
ಮನಹರ್ ಮುಸ್ಲಿಮಾ ಕಾಸಿಂ:: ಜಿಎನ್ಎಂ (GNM) ನಲ್ಲಿ ಸಮಗ್ರ ಶ್ರೇಷ್ಠತೆ.
ಕ್ಯಾರೊಲ್ ಜೆವಿಟಾ ಲೋಬೋ: ಬಿ.ಎಎಸ್ಎಲ್ಪಿ (B.ASLP) ವಿಭಾಗದ 2022-2026ರ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರವನ್ನು ಸ್ವೀಕರಿಸಿದರು.
ಚರಿತಾ ಲೂಯಿಸ್ ಮತ್ತು ಡಾ. ಕ್ಯಾಲಿಡಾ ಫ್ರೀಡಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Share News