ಮಂಗಳೂರು.: ಕೆಂಪು ಕಲ್ಲು ಕೋರೆ ಯನ್ನು ನಡೆಸಲು ಅಧಿಕಾರಿ ಗಳು ಅವಕಾಶ ನೀಡದೆ ಸ್ಥಗಿತ ಗೊಳಿಸಿರುವುದರಿಂದ ಅನೇಕ ಬಡ ಕಾರ್ಮಿಕರಿಗೆ ಕೆಲಸ ವಿಲ್ಲದೆ ತೊಂದರೆ ಆಗಿದ್ದು.ಕಷ್ಟ ದಲ್ಲಿ ಜೀವನ ನಡೆಸುತಿದ್ದಾರೆ.ಅಲ್ಲದೆ ಲಾರಿ ಗಳನ್ನು ಬ್ಯಾಂಕ್ ಸಾಲ, ಫೈನಾನ್ಸ್ ಸಾಲ, ಸ್ವಸಹಾಯ ಸಂಘದಿಂದ ಸಾಲ ಮಾಡಿ ಕಂತು ಪಾವತಿಸದೆ ಬಾಕಿ ಇರುವುದರಿಂದ ಲಾರಿ ಸೀಜ್ ಅಧಿಕಾರಿಗಳು ಮುಂದಾಗಿದ್ದು.
ಈ ನಿಟ್ಟಿನಲ್ಲಿ ನಮ್ಮ ನಿಯೋಗ ಕೆಂಪು ಕಲ್ಲು ಕೋರೆ ನಡೆಸಲು ಪರಿಶಿಷ್ಟ ಜಾತಿ ಯವರಿಗೆ 75 ಶೇಕಡ ಕಡಿಮೆ ದರದಲ್ಲಿ ಲೀಸ್ ಪರವಾನಿಗೆ ಮೀಸಲಾತಿಯಲ್ಲಿ ನೀಡಲು ಸರಕಾರ ಮಂಜೂರು ಗೊಳಿಸಲು ಕರ್ನಾಟಕ ಸರಕಾರದ ಮಾನ್ಯ ಗ್ರಹ ಸಚಿವರಾದ ಡಾ ಜಿ ಪರಮೇಶ್ವರ್ ರವರನ್ನು,ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ,ದ.ಕ.ಜಿಲ್ಲಾ ಶಾಖೆ ವತಿಯಿಂದ ಮಂಗಳೂರು ನಗರದ ಸರ್ಕಿಟ್ ಹೌಸ್ ನಲ್ಲಿ ಬೇಟಿ ಮಾಡಿ ಮನವಿ ನೀಡಲಾಯಿತು
ನಿಯೋಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಜಗದೀಶ್ ಪಾಂಡೇಶ್ವರ, ಮಂಗಳೂರು ತಾಲೂಕು ಸಂಚಾಕರಾದ ಸುನಿಲ್ ಕುಮಾರ್ ಅದ್ಯಾಪಾಡಿ ಬಜ್ಪೆ, ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ನಾಮ ನಿರ್ದೇಶನ ಸದಸ್ಯರಾದ ಪ್ರೇಮಾನಾಥ್ ಬಲ್ಲಾಳ್ ಬಾಗ್, ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಸದಸ್ಯೆಯಾದ ಅಪ್ಪಿ, ಅಧ್ಯಕ್ಷರು,ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ದಿನೇಶ್ ಮುಳೂರು, ದಲಿತ ಮುಖಂಡರಾದ ಕಮಲಾಕ್ಷ ಬಜಾಲ್, ಮುಂತಾದ ಮುಖಂಡರು ನಿಯೋಗದಲ್ಲಿ ಉಪಸ್ಥಿತರಿದ್ದರು.