COMMUNITY NEWSLATEST NEWS

ಕ್ರೈಸ್ತ ಧರ್ಮಗುರುಗಳ ಶಟಲ್ ಬ್ಯಾಡ್ಮಿಂಟನ್; ಬೋಂದೆಲ್ ತಂಡ ಚಾಂಪಿಯನ್

ಮಂಗಳೂರು: ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳ ಸೌಹಾರ್ದತೆ, ಕ್ರೀಡಾ ಮನೋಭಾವ ಮತ್ತು ಭ್ರಾತೃತ್ವವನ್ನು ಬಿಂಬಿಸುವ ‘ಡಯಾಸಿಸನ್ ಪ್ರೀಸ್ಟ್ಸ್ ಲೀಗ್’ (DPL 2026) ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು. ತೀವ್ರ ಪೈಪೋಟಿಯಿಂದ ಕೂಡಿದ ಅಂತಿಮ ಪಂದ್ಯದಲ್ಲಿ ಬೋಂದೆಲ್‌ನ ಸೇಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ ಮಾಲೀಕತ್ವದ ‘ಲಾರೆನ್ಸಿಯನ್ಸ್’ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿ, ಪ್ರತಿಷ್ಠಿತ ‘ವಿಯಾನಿ ಕಪ್’ ಅನ್ನು ಮುಡಿಗೇರಿಸಿಕೊಂಡಿತು.

ಬೋಂದೆಲ್‌ನ ಸೇಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ ಮಾಲೀಕತ್ವದ ‘ಲಾರೆನ್ಸಿಯನ್ಸ್’ ತಂಡವು ಅತ್ಯಂತ ರೋಮಾಂಚನಕಾರಿ ಹಾಗೂ ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಜಯಗಳಿಸಿ, ಪ್ರತಿಷ್ಠಿತ ‘ವಿಯಾನಿ ಕಪ್’ ಅನ್ನು ತನ್ನದಾಗಿಸಿಕೊಂಡಿತು. ಬಿಜೈಯ ಲೂರ್ಡ್ಸ್ ಸೆಂಟ್ರಲ್ ಶಾಲೆ ಮಾಲೀಕತ್ವದ ‘ಲೂರ್ಡ್ಸ್ ಜೈಂಟ್ಸ್’ ರನ್ನರ್ಸ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟರೆ, ರೆ. ಡಾ. ಮೈಕೇಲ್ ಸಾಂತುಮಯೋರ್ ಮಾಲೀಕತ್ವದ ‘ಮೈಕೇಲ್ ವಾರಿಯರ್ಸ್’ ತೃತೀಯ ಸ್ಥಾನ ಹಾಗೂ ಕೊಡಿಯಾಲ್‌ಬೈಲ್ ಪ್ರೆಸ್ ಮಾಲೀಕತ್ವದ ‘ಕೋ-ಸ್ಮ್ಯಾಷರ್ಸ್’ ನಾಲ್ಕನೇ ಸ್ಥಾನವನ್ನು ಪಡೆದುಕೊಂಡವು.

ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮಾಲೀಕತ್ವದ ಲೂರ್ಡ್ಸ್ ಜೈಂಟ್ಸ್’ ತಂಡವು ರನ್ನರ್ಸ್-ಅಪ್ ಸ್ಥಾನವನ್ನು ಪಡೆದುಕೊಂಡರೆ, ರೆ| ಡಾ| ಮೈಕೆಲ್ ಸಾಂತುಮಾಯೋರ್ ಮಾಲೀಕತ್ವದ ಮೈಕೆಲ್ ವಾರಿಯರ್ಸ್’ ತೃತೀಯ ಸ್ಥಾನ ಹಾಗೂ ಕೊಡಿಯಾಲ್ಬೈಲ್ ಪ್ರೆಸ್ ಮಾಲೀಕತ್ವದ ‘ಕೋ-ಸ್ಮ್ಯಾಷರ್ಸ್’ ನಾಲ್ಕನೇ ಸ್ಥಾನವನ್ನು ಗಳಿಸಿದವು.

ಇದಕ್ಕೂ ಮುನ್ನ ಪಂದ್ಯಾವಳಿಯನ್ನು ಮಂಗಳೂರು ಧರ್ಮ ಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ| ಪೀಟರ್ ಪಾಲ್ ಸಲ್ಡಾನ್ಹಾ ಅವರು ಅಧಿಕೃತವಾಗಿ ಉದ್ಘಾಟಿಸಿ, ವಿಯಾನಿ ಕಪ್ ಅನ್ನು ಅನಾವರಣ ಗೊಳಿಸಿದರು. ಬಳಿಕ ಆಟಗಾರರನ್ನು ಆಶೀರ್ವದಿಸಿ ಮಾತನಾಡಿದ ಬಿಷಪ್, “ಒಲಿಂಪಿಕ್ ಧೀಮಂತ ವಾಕ್ಯಕ್ಕೆ ಇತ್ತೀಚೆಗೆ ‘ಕಮ್ಯುನಿಟರ್’ (ಅಂದರೆ ‘ಒಟ್ಟಿಗೆ’) ಎಂಬ ಪದವನ್ನು ಸೇರಿಸಲಾಗಿದೆ. ಕ್ರೀಡೆಗಳು ನಮ್ಮನ್ನು ಒಟ್ಟುಗೂಡಿಸುತ್ತವೆ. ಒಟ್ಟಿಗೆ ಆಟವಾಡುವ ಕುಟುಂಬವು ಯಾವಾಗಲೂ ಒಗ್ಗಟ್ಟಾಗಿ ಇರುತ್ತದೆ. ಈ ಕ್ರೀಡಾ ಅನುಭವವು ನಮ್ಮನ್ನು ಇನ್ನಷ್ಟು ಬಲಿಷ್ಠವಾಗಿ, ಆರೋಗ್ಯಕರವಾಗಿ ಮತ್ತು ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸಲಿ” ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಬಿಷಪ್ ಅವರೊಂದಿಗೆ ಬಿಜೈಯ ಚರ್ಚ್ ಧರ್ಮಗುರು ಹಾಗೂ ಲೂರ್ಡ್ಸ್ ಜೈಂಟ್ಸ್ ಮಾಲೀಕರಾದ ವಂದನೀಯ ಫಾದರ್ ಸ್ಟ್ಯಾನಿ ಪಿರೇರಾ, ಪಂದ್ಯಾವಳಿಯ ಸಂಯೋಜಕ ವಂದನೀಯ ಫಾದರ್ ಅನಿಲ್ ಅವಿಲ್ಡ್ ಲೋಬೋ , ವಂದನೀಯ ಡಾ. ಮೈಕೆಲ್ ಸಾಂತುಮಯೋರ್, ಕೋ-ಸ್ಮ್ಯಾಷರ್ಸ್ ಪರವಾಗಿ ವಂದನೀಯ ಫಾದರ್ ಇವಾನ್ ಕೊರ್ಡೇರೊ ಮತ್ತು ಲಾರೆನ್ಸಿಯನ್ಸ್ ಪರವಾಗಿ ವಂದನೀಯ ಫಾದರ್ ಪೀಟರ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲರಾದ ರೆ| ಫಾ| ಜಾನ್ಸನ್ ಸಿಕ್ವೇರಾ ಅವರು ಸ್ವಾಗತಿಸಿದರು. ವಂದನೀಯ ಫಾದರ್ ಕ್ಲಿಫರ್ಡ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

ಸಂತ ಜಾನ್ ಮೇರಿ ವಿಯಾನಿ ಅವರ ನೆನಪಿನಲ್ಲಿ ಆಗಸ್ಟ್ 4 ರಂದು ಆಚರಿಸಲಾಗುವ ‘ಯಾಜಕರ ದಿನ’ದ ಅಂಗವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕ್ರೀಡಾಸಕ್ತ ಧರ್ಮಗುರುಗಳ ಆಶಯದಂತೆ ಆರಂಭವಾದ ಈ ಸೌಹಾರ್ದ ಕೂಟವು ಈಗ ವಾರ್ಷಿಕ ಸಂಪ್ರದಾಯವಾಗಿ ಬೆಳೆದಿದ್ದು, ಉಭಯ ಧರ್ಮಪ್ರಾಂತ್ಯಗಳ 50ಕ್ಕೂ ಹೆಚ್ಚು ಧರ್ಮಗುರುಗಳು ದಿನನಿತ್ಯದ ಧಾರ್ಮಿಕ ಮತ್ತು ಸಾಮಾಜಿಕ ಕರ್ತವ್ಯಗಳಿಂದ ಹೊರತಾಗಿ, ದೈಹಿಕ ಫಿಟ್ನೆಸ್ ಮತ್ತು ಪರಸ್ಪರ ಬಾಂಧವ್ಯವನ್ನು ವೃದ್ಧಿಸಿಕೊಳ್ಳಲು ಈ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

Share News