ಮಂಗಳೂರು: ಆನ್ ಲೈನ್ ಶೇರು ಮಾರುಕಟ್ಟೆಯ ಬಗ್ಗೆ ವಾಟ್ಸಾಪ್ ಮೇಸೆಜ್ ಗಳನ್ನು ನಂಬಿ ವ್ಯಕ್ತಿಯೋರ್ವರು ರೂ 1,38,20,060/- ಹಣ ಕಳೆದುಕೊಂಡ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ
ಮಂಗಳೂರಿನ ವ್ಯಕ್ತಿಯೋರ್ವರ ಮೊಬೈಲಿಗೆ ರಿಶಿತಾ ಎಂಬ ಅಪರಿಚಿತ ವ್ಯಕ್ತಿ 9205298139 ನೇ ವಾಟ್ಸಾಫ್ ನಂಬ್ರದಿಂದ ಮಂಗಳೂರ ವ್ಯಕ್ತಿಯ ಕಂಪನಿಯ Carpets & Home decorative items ಬೇಕೆಂದು ವಾಟ್ಸಪ್ ಮೇಸೆಜ್ ಮಾಡಿದ್ದಾರೆ. ಅದರಂತೆ ಈ ವ್ಯಕ್ತಿ ತನ್ನ ಕಂಪನಿಯ Carpets & Home decorative items ನ ಫೋಟೊವನ್ನು ವಾಟ್ಸಾಪ್ ಮಾಡಿದ್ದಾರೆ.
2 ದಿನಗಳ ನಂತರ ಅದೇ ಅಪರಿಚಿತ ವ್ಯಕ್ತಿ ಆನ್ ಲೈನ್ ಶೇರು ಮಾರುಕಟ್ಟೆಯ ಬಗ್ಗೆ ವಾಟ್ಸಾಪ್ ಮೇಸೆಜ್ ಗಳನ್ನು ಕಳುಹಿಸಿ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ವಾಟ್ಸಾಪ್ ಮೇಸೆಜ್ ಗಳನ್ನು ಕಳುಹಿಸುತ್ತಿದ್ದರು. ಇದನ್ನು ನಂಬಿದ ಮಂಗಳೂರಿನ ವ್ಯಕ್ತಿ ಶೇರು ಮಾರುಕಟ್ಟೆಗೆ ಹಣ ಹೂಡಿಕೆ ಮಾಡಲು ಒಪ್ಪಿದ್ದಾರೆ.
ನಂತರ ಅಪರಿಚಿತ ವ್ಯಕ್ತಿ ಕಳುಹಿಸಿದ https://m.omnifxpro.top/ ಲಿಂಕ್ ನ್ನು ಒತ್ತಿ ತನ್ನ ಹೆಸರು ವಿಳಾಸ ನಮೂದು ಮಾಡಿಕೊಂಡು, ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ನಿರಂತರ ಒಂದು ತಿಂಗಳ ಅವಧಿಯಲ್ಲಿ ರೂ 1,38,20,060/- ಹಣವನ್ನು RTGS & NEFT ಮುಖೇನಾ ಹಣ ವರ್ಗಾವಣೆ ಮಾಡಿದ್ದಾರೆ.
ಜ. 15ರಂದು ಮಂಗಳೂರಿನ ವ್ಯಕ್ತಿ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶ ಪಡೆದ ಹಣವನ್ನು ವಿತ್ ಡ್ರಾ ಮಾಡಲು ಸದ್ರಿ ಅಪರಿಚಿತ ವ್ಯಕ್ತಿಯನ್ನು ಕೇಳಿದಾಗ, ಸದ್ರಿ ಅಪರಿಚಿತ ವ್ಯಕ್ತಿಗಳು ವಿತ್ ಡ್ರಾ ಮಾಡಲು ಸರ್ವೀಸ್ ಟ್ಯಾಕ್ಸ್ ಪಾವತಿಸುವಂತೆ ಒತ್ತಾಯಿಸಿದ್ದಾರೆ. ನಂತರ ತನ್ನ ಸ್ನೇಹಿತರಲ್ಲಿ ಈ ಬಗ್ಗೆ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ತಿಳಿದಿದೆ.
ಸದ್ಯ ಈ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

