ಮಂಗಳೂರು: ಎಐಸಿಸಿ ನಾಯಕರುಗಳಾದ ಶ್ರೀ ರಾಹುಲ್ ಗಾಂಧಿ ಹಾಗೂ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿ, ಮಂಗಳೂರು ನಗರ ಪಾಲಿಕೆಯ ಮುಂಭಾಗದಲ್ಲಿ ಇಂದು ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.


ಮಂಗಳೂರು ನಗರ ಪಾಲಿಕೆಯ ಮುಂಭಾಗದಲ್ಲಿ ಜಮಾಯಿಸಿದ ನಾಯಕರು ಮತ್ತು ನೂರಾರು ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ದಮನಕಾರಿ ನಡೆಗೆ ವಿರುದ್ಧವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಜೋರು ಘೋಷಣೆಗಳನ್ನು ಕೂಗಿದರು.

ಅಕ್ರಮ ಬಂಧನಕ್ಕೆ ತೀವ್ರ ಆಕ್ರೋಶ: ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ದೇಶದ ಪ್ರಮುಖ ನಾಯಕರನ್ನು ಬಂಧಿಸಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಜನರ ಪರವಾಗಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳ ಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಶಾಸಕರಾದ ಐವನ್ ಡಿ ಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಮುಖಂಡರುಗಳಾದ ಪದ್ಮರಾಜ್ ಪೂಜಾರಿ, ಮಿಥುನ್ ರೈ, ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಇಬ್ರಾಹಿಂ ನವಾಜ್, ಎಸ್. ಅಪ್ಪಿ, ದಿನೇಶ್ ಮುಳೂರು, ಭಾಸ್ಕರ್ ಕೆ., ಡೇನಿಸ್ ಡಿ ಸಿಲ್ವ, ನವೀನ್ ಡಿ ಸೋಜಾ, ಸೌಹಾನ್ ಆಳ್ವಾ, ವಾಹಬ್ ಕುದ್ರೋಳಿ, ಅಮೃತ್ ಕದ್ರಿ, ನಮಿತಾ ಡಿ. ರಾವ್, ನಿರಾಜ್ ಚಂದ್ರಪಾಲ್, ಸಮರ್ಥ್ ಭಟ್, ಶಾಂತಲಾ ಗಟ್ಟಿ, ಚೇತನ್ ಉರ್ವ, ಪ್ರವೀಣ್ ಆಳ್ವಾ, ಎ. ಸಿ. ವಿನಾಯರಾಜ್, ಅಶ್ರಫ್, ಅನಿಲ್ ಪೂಜಾರಿ, ವಿಕಾಸ್ ಶೆಟ್ಟಿ, ಅಳಿಸ್ಟರ್ ಡಿ ಕುನ್ನಾ, ತೌಸೀಫ್ ಉಪ್ಪಿನಂಗಡಿ, ಸಾರಿಕಾ ಪೂಜಾರಿ, ವೀಣಾ ಸೇರಿದಂತೆ ಹಲವು ಪ್ರಮುಖರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು.


