ಮಂಗಳೂರು: ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಹಾಗೂ ಅದನ್ನು ತಡೆದು ನಿಲ್ಲಿಸಿದ ಪ್ರಕರಣದ ಬಗ್ಗೆ ಜೊತೆಗೆ ಇದೇ ಹಿನ್ನೆಲೆ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಘಟನೆ ವಿವರ
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.27 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತನು ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದರು. ಈ ವೇಳೆ ಅಪ್ಪ ಮಗಳೂ ಇಬ್ಬರನ್ನೂ ಸುಮೀತ್ ಮತ್ತು ಎಮ್ ರಜತ್ ನಾಯಕ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಪೋಸ್ಟ್: FIR
ಮೇಲಿನ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ INSTAGRAM ನಲ್ಲಿ muslim__leader ಎಂಬ ಇನಸ್ಟಾಗ್ರಾಮ ಪೇಜ್ ನಲ್ಲಿ ಇಬ್ಬರು ಯುವಕರ ಪೋಟೋವನ್ನು ಹಾಕಿ “ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸ ಇದಕ್ಕೆ ಕಡಿವಾಣ ಇಲ್ಲವಾಯಿತೆ?, ಸಂಘಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದೆ, ಅವರಿಗೆ ಕಾನೂನಿನ ಭಯವಿಲ್ಲ ಕಾನೂನು ಅವರನ್ನು ಏನು ಮಾಡುವುದಿಲ್ಲ ಅವರನ್ನು ಕೇಳುವವರು ಇಲ್ಲ ಹೇಳುವವರಿಲ್ಲ ಎಂಬ ಧೈರ್ಯ ಅವರಿಗಿದೆ ನಾವು ಆಡಿದ್ದೇ ಆಟ ಎಂಬಾತಾಗಿದೆ ಎಂಬಿತ್ಯಾದಿ ಕೋಮುದ್ವೇಷದ ಪೋಸ್ಟ್ ಹಂಚಿರುತ್ತಾರೆ. ಇದೇ ಪೋಸ್ಟ್ಗೆ instg4ama ಎಂಬ ಇನಸ್ಟಾಗ್ರಾಮ ID ಯಿಂದ “ ಇವರಿಗೆ ಸುಹಾಸ್ ಶಟ್ಟಿ ಟ್ರೀಟ್ ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂದು ಕಾಮೆಂಟ್ ಮಾಡಿರುತ್ತಾರೆ.
ಈ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ಮೊ.ನಂ 07/2026 ಕಲಂ 351(2), 351( 3), 352, 353(2),192 BNS-2023 ರಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


