• Home  
  • ಫೇಸ್‌ಬುಕ್‌ನಲ್ಲಿ ಕೋಮುದ್ವೇಷ & ಸುಳ್ಳು ಸುದ್ದಿ ಪ್ರಸಾರ: SDPI ಅಧ್ಯಕ್ಷನ ಮೇಲೆ FIR
- DAKSHINA KANNADA - HOME - LATEST NEWS

ಫೇಸ್‌ಬುಕ್‌ನಲ್ಲಿ ಕೋಮುದ್ವೇಷ & ಸುಳ್ಳು ಸುದ್ದಿ ಪ್ರಸಾರ: SDPI ಅಧ್ಯಕ್ಷನ ಮೇಲೆ FIR

ಮಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೋಮುದ್ವೇಷ ಹಾಗೂ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಪಕ್ಷದ ಅಧ್ಯಕ್ಷನ ಮೇಲೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ವಿವರ

ಜು. 14 ರಂದು ಪುತ್ತೂರು ಕಸಬಾ ಗ್ರಾಮದ ಬೊಳುವಾರು ಎಂಬಲ್ಲಿ ವ್ಯಕ್ತಿಯೋರ್ವ ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ, “ನಾವು ಭಾರತೀಯ ಸೇನೆ” ಎಂಬ ಪೇಸ್ ಬುಕ್ ಪೇಜಿನಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಪಕ್ಷದ ಅಧ್ಯಕ್ಷ ಆಶ್ರಪ್ ಬಾವು ಎಂಬಾತ ಘಟನೆಯ ಬಗ್ಗೆ, ನೈಜತೆಯನ್ನು ಪರಿಶೀಲಿಸದೇ ಸಮಾಜದಲ್ಲಿ ಧರ್ಮಧರ್ಮಗಳ ನಡುವೆ ವೈಮನಸ್ಸು ಹಾಗೂ ದ್ವೇಷ ಉಂಟಾಗುವ ರೀತಿಯಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಈ ಹಿನ್ನೆಲೆ  ಆ. 5 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ: 68/2025 ಕಲಂ: 240 ,353(2)BNS 2023. ರಂತೆ ಪ್ರಕರಣ ದಾಖಲಾಗಿದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678