ಪೆರುವಾಯಿ, ಫಾತಿಮಾ ಮಾತೆಯ ದೇವಾಲಯ ಪೆರುವಾಯಿ, ಭಾರತೀಯ ಕಥೋಲಿಕ್ ಯುವ ಸಂಚಾಲನ ( ICYM ) ಪೆರುವಾಯಿ ಘಟಕ ಇದರ ವತಿಯಿಂದ ‘ಉದ್ಕಾ ಖೆಳ್ ʼ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಬೆಳಗ್ಗೆ ಬಲಿಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಚರ್ಚ್ ನ ಸಹಾಯಕ ಧರ್ಮಗುರು ವಂ. ಮರ್ವಿನ್ ಪ್ರವೀಣ್ ಲೋಬೊ ಭಾಗವಹಿಸಿ ಮಾತನಾಡಿ, ಸಮುದಾಯ ಸಮೃದ್ಧವಾಗಲು ಯುವ ಸಮುದಾಯ ಸರಿದಾರಿಯಲ್ಲಿ ಮುನ್ನಡೆಯಬೇಕು. ಸಂಘಟನೆಯಾಗಿ ಬಾಳುವುದರಿಂದ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಕ್ರೀಡಾಕೂಟಗಳು ಸಮುದಾಯವನ್ನು ಒಟ್ಟಾಗಿ ಒಂದಾಗಿ ಮುನ್ನಡೆಯಲು ಸಾಧ್ಯ ಎಂದರು. ಚರ್ಚ್ ನ ಧರ್ಮಗುರು ವಂ. ಸೈಮನ್ ಡಿಸೋಜಾ ಅವರು ಮಾತನಾಡಿ, ಯುವಕರು ಒಂದಾದರೆ ಯಾವುದೇ ಕೆಲಸ ಸಾಧಿಸಲು ಸಾಧ್ಯ ಎಂದರು.
ಪಾಲನ ಸಮಿತಿ ಉಪಾಧ್ಯಕ್ಷ ಡೆನೀಸ್ ಮೊಂತೇರೊ, ಐಸಿವೈಎಂ ಅಧ್ಯಕ್ಷ ಸ್ಟ್ಯಾನಿ ಡಿಸೋಜಾ, ಸಂಯೋಜಕಿ ಜ್ಯೋತಿ ಡಿಸೋಜಾ, ಖಜಾಂಚಿ ನಿಶ್ಮಿತಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಅನುಪ ವಂದಿಸಿದರು. ಲ್ಯಾನ್ವಿನ್ ಡಿಸೋಜಾ, ಅಶ್ವಿನ್ ಫೆರಾವೊ ಸಂಯೋಜಿಸಿದರು.
ಬಳಿಕ ನಡೆದ ಕ್ರೀಡಾಕೂಟದಲ್ಲಿ ವಿವಿಧ ನೀರಿನ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿಜಯ್ ಮೊಂತೆರೊ ಅವರ ತಂಡ ಪ್ರಥಮ ವಿಕ್ಟರ್ ಡಿಸೋಜ ಹಾಗೂ ಬಳಗ ದ್ವಿತೀಯ ಸ್ಥಾನ ಪಡೆಯಿತು.


































