• Home  
  • ಮಂಗಳೂರು ಧರ್ಮಕ್ಷೇತ್ರ ಚರ್ಚ್‌ಗಳಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣ ವರ್ಷ ಉದ್ಘಾಟನೆ
- COMMUNITY NEWS

ಮಂಗಳೂರು ಧರ್ಮಕ್ಷೇತ್ರ ಚರ್ಚ್‌ಗಳಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣ ವರ್ಷ ಉದ್ಘಾಟನೆ

ಮಂಗಳೂರು, ಜೂನ್ 07 : ಮಂಗಳೂರು ಧರ್ಮಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲಾ ಚರ್ಚ್ ಹಮ್ಮಿಕೊಳ್ಳಲಾಗಿರುವ 2026-27ನೇ ಸಾಲಿನ ‘ಕ್ರೈಸ್ತ ಧಾರ್ಮಿಕ ಶಿಕ್ಷಣ’ (Catechism) ವರ್ಷಕ್ಕೆ ಭಾನುವಾರ ಚಾಲನೆ ನೀಡಲಾಯಿತು ನಗರದ ಪ್ರಸಿದ್ಧ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆದ ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ್ಹ ಅವರು ದೀಪ ಬೆಳಗಿಸಿ ಈ ಹೊಸ ಸಾಲಿನ ಧಾರ್ಮಿಕ ಶಿಕ್ಷಣವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಷಪ್ ಅವರು ಧಾರ್ಮಿಕ ಶಿಕ್ಷಣದ ಮಹತ್ವದ […]

Share News

ಮಂಗಳೂರು, ಜೂನ್ 07 : ಮಂಗಳೂರು ಧರ್ಮಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲಾ ಚರ್ಚ್ ಹಮ್ಮಿಕೊಳ್ಳಲಾಗಿರುವ 2026-27ನೇ ಸಾಲಿನ ‘ಕ್ರೈಸ್ತ ಧಾರ್ಮಿಕ ಶಿಕ್ಷಣ’ (Catechism) ವರ್ಷಕ್ಕೆ ಭಾನುವಾರ ಚಾಲನೆ ನೀಡಲಾಯಿತು

ನಗರದ ಪ್ರಸಿದ್ಧ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆದ ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ್ಹ ಅವರು ದೀಪ ಬೆಳಗಿಸಿ ಈ ಹೊಸ ಸಾಲಿನ ಧಾರ್ಮಿಕ ಶಿಕ್ಷಣವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿಷಪ್ ಅವರು ಧಾರ್ಮಿಕ ಶಿಕ್ಷಣದ ಮಹತ್ವದ ಕುರಿತು ಮಾತನಾಡಿ, ಮಕ್ಕಳು ಮತ್ತು ಯುವಜನರಲ್ಲಿ ಸನ್ಮಾರ್ಗದ ಮೌಲ್ಯಗಳನ್ನು ಬೆಳೆಸಲು ಇದು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಂದನೀಯ ಧರ್ಮಗುರುಗಳಾದ ವಲೇರಿಯನ್ ಡಿಸೋಜಾ, ವಂದನೀಯ ಧರ್ಮಗುರು ವಲೇರಿಯನ್ ಫೆರ್ನಾಂಡಿಸ್, ವಂದನೀಯ ಧರ್ಮಗುರು ಪ್ರದೀಪ್ ಮತ್ತು ವಂದನೀಯ ಧರ್ಮಗುರು ಐವನ್ ಡಿಸೋಜಾ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳ ಕ್ರೈಸ್ತ ಧಾರ್ಮಿಕ ಶಿಕ್ಷಕರು, ಶಿಕ್ಷಕಿಯರು ಹಾಗೂ ನೂರಾರು ವಿದ್ಯಾರ್ಥಿಗಳು ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share News