canaratvnews

ಕಯ್ಯಾರ್ ಹಳೆ ಚರ್ಚ್ ಕೆಡವಲು ಚರ್ಚ್ ಮಹಾಸಭೆಯಲ್ಲೇ ಒಪ್ಪಿಗೆ: ಆಡಳಿತ ಮಂಡಳಿ ಸ್ಪಷ್ಟನೆ

ಚರ್ಚ್ ಉಳಿಸಲು, ಹಣಕಾಸಿನ ನೆರವಿಗೆ 5 ತಿಂಗಳ ಕಾಲಾವಕಾಶ

ಹೊಸ ಚರ್ಚ್ ಪೂರ್ಣಗೊಳಿಸಲು ಹಳೆ ಚರ್ಚ್ ಪರಿಕರಗಳ ಬಳಕೆ

ಮಂಗಳೂರು: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಹಳೆ ಕಟ್ಟಡ ತೆರವುಗೊಳಿಸುವ ಬಗ್ಗೆ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣ ನೀಡಿದ್ದು, ಈ ಬಗ್ಗೆ ಚರ್ಚ್ ಆಡಳಿತ ಮಂಡಳಿ ಉಪಾಧ್ಯಕ್ಷ ಹಾಗೂ ಕಾರ್‍ಯದರ್ಶಿ ಸೇರಿದಂತೆ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಅದರ ವಿವರ ಇಂತಿದೆ.

ಕಯ್ಯಾರ್ ಕ್ರಿಸ್ತರಾಜ ದೇವಾಲಯ

ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಹಳೆ ಕಟ್ಟಡ ತೆರವುಗೊಳಿಸುವ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಇತರೆ ಮಾಧ್ಯಮದಲ್ಲಿ ವರದಿಯಾದ ಬಗ್ಗೆ ಚರ್ಚ್ ಆರ್ಥಿಕ ಸಮಿತಿ ಮತ್ತು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ರು  ರೋಶನ್ ಡಿಸೋಜ ಹಾಗು ಕಾರ್‍ಯದರ್ಶಿ  ಜೋಸ್ವೀರ್ ಡಿ’ಸೋಜ ಇವರು ನೀಡುವ ಸ್ಪಷ್ಟೀಕರಣ. ಹಳೆ ಚರ್ಚ್ ತೆರವು ಮತ್ತು ಶಿಲುಬೆ ಕೆಳಗೆ ಬೀಳುವುದರ ಬಗ್ಗೆ ವಿಡಿಯೋ ವೈರಲ್ ಆಗಿದ್ದು ಇದರ ಬಗ್ಗೆ ವಿಷಾದಿಸುತ್ತೇವೆ. ನಡೆದ ಘಟನೆ ಬಗ್ಗೆ ನಾವೂ ದುಃಖ ಪಡುತ್ತೇವೆ. ಆದರೆ ಸತ್ಯ ಆಡಗಿರುವಂತೆ, ಈ ವಿವರವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇವೆ.

1. ಸರ್ಕಾರಿ ಆದೇಶ

ಪೈವಳಿಕೆ ಪಂಚಾಯತಿಗೆ ನಾವು ‘ಚರ್ಚಿನ ಹಳೆ ಕಟ್ಟಡವನ್ನು ಪರಿಶೀಲಿಸಿ Fitness Report’ ಕೇಳಿದ್ದೆವು. ಆದರೆ ಚರ್ಚ್ ಕಟ್ಟಡಕ್ಕೆ ಯಾವುದೇ ರೀತಿಯ ಸಕಾರಾತ್ಮಕ ವರದಿಕೊಡಲು ಸಾದ್ಯವಿಲ್ಲವೆಂದು ಮತ್ತು ಚರ್ಚ್ ಕಟ್ಟಡ ಶಿಥಿಲಗೊಂಡಿದ್ದು ತೆರವುಗೊಳಸಲು ಆವರು 21.11.2025 ರಂದು ‘ನಿರಪೇಕ್ಷಣಾ ಪ್ರಮಾಣಪತ್ರ (Order No:5836970/2025) ನಮಗೆ ನೀಡಿರುತ್ತಾರೆ.

2. ಧರ್ಮಾಧ್ಯಕ್ಷರ ಆದೇಶ

ಚರ್ಚ್ ಮಂಗಳೂರು ಧರ್ಮಪ್ರಾಂತ್ಯದ ಆಧೀನವಿರುವುದರಿಂದ ನಮ್ಮ ಧರ್ಮಾಧ್ಯಕ್ಷರು ಧರ್ಮಪ್ರಾಂತ್ಯದ ಹಣಕಾಸು ಸಮಿತಿಯ ಅನುಮತಿಯೊಂದಿಗೆ ಆವರು 12.02.2026 ‘ನಿರಪೇಕ್ಷಣಾ ಪ್ರಮಾಣಪತ್ರ ನಮಗೆ ನೀಡಿರುತ್ತಾರೆ.
3. ಶಿಥಿಲಗೊಂಡ ಚರ್ಚ್ ಕಟ್ಟಡ ತೆರವು ಕಾರ್‍ಯಚರಣೆ: ಇದರಂತೆ 15.02.2026 ರಿಂದ ಚರ್ಚ್ ಹಳೇ ಕಟ್ಟಡ ತೆರವು ಕೆಲಸ ನಾವು ಆರಂಭಿಸಿದೆವು. ಹಳೇ ಚರ್ಚ್ ಕಟ್ಟಡ ಉಳಿಸಲು ಬಯಸಿದ ಕೆಲವರು ಈ ಕೆಲಸದ ಬಗ್ಗೆ ಆಕ್ಷೇಪಣೆವೆತ್ತಿದಾಗ ಆಥವಾ ವಿಡಿಯೋ ಮಾಡುವುದು ಬೇಡವೆಂದಾಗ ಚರ್ಚೆಗೆ ಕಾರಾಣವಾಯ್ತು. ನಮಗೆ ಮತ್ತು ನಮ್ಮ ಧರ್ಮಗುರುಗಳಿಗೆ ಆವಹೇಳನ ಮಾತು ಬಂದು ನಾವು ಕಳ್ಳ ಕೆಲಸ ಮಾಡುತ್ತೇವೆ ಎಂದರು. ಪೋಲಿಸ್ ಮತ್ತು ಕಾನೂನಿನ ವಿಚಾರ ಮಾತಾನಾಡಿದಾಗ ನಾವು ಆವರನ್ನು ಹೆದರಿಸುತ್ತೇವೆ ಎಂದರು. ಇದರಿಂದ ಚರ್ಚ್ ತೆರವು ಕಾರ್‍ಯಚರಣೆಯ ವಿಡಿಯೋ ಮಾಡಲು ನಾವು ಆವರನ್ನು ಆಡ್ಡಿಪಡಿಸಲಿಲ್ಲ.
ಇದೇ ಕಾರಣಕ್ಕೆ ಆವರು ಧರ್ಮಗುರುಗಳನ್ನು ತಪ್ಪಿಸ್ಥರನ್ನಾಗಿ ಬಿಂಬಿಸಲು ಮೂರು ದಿನಾ ಕಾದು ಶಿಲುಬೆ ತೆಗೆಯುವ ವಿಡಿಯೋ ಮಾಡಿ ವೈರಲ್ ಮಾಡಿದರು.
ಶಿಲುಬೆಯನ್ನು ಜೋಪಾನವಾಗಿ ತೆಗೆಯಲು ನಾವು ಸರ್ವ ಪ್ರಯತ್ನವನ್ನು ಮಾಡಿದ್ದೇವೆ. ಕಳೆದ ಹತ್ತು ವರ್ಷಗಳಿಂದ ಯಾವುದೇ ದುರಸ್ತಿಕಾರ್‍ಯಗಳಿಗೆ ಚರ್ಚ್ ಗೋಪುರಕ್ಕೆ ಯಾರು ಹತ್ತಿರಲಿಲ್ಲ ಮತ್ತು ಹತ್ತುವುದು ಭಾರಿ ಆಪಾಯಕರವಾಗಿತ್ತು. ಶಿಥಿಲವಾದ ಚರ್ಚ್ ಗೋಪರ ಕಂಪಿಸುತ್ತಿದ್ದ ಕಾರಣ ಹಾಗೂ ಶಿಲುಬೆಗೆ ಕೆಲ ವರ್ಷದ ಹಿಂದೆ ಸಿಡಿಲು ಬಡಿದು ಬಿರುಕುಬಿಟ್ಟದ್ದ ಕಾರಣ ಶಿಲುಬೆಯನ್ನು ಸ್ಥಳಾಂತರಿಸಲು ನಮಗೆ ಅಸಾಧ್ಯವಾಯಿತು. (ಶಿಲುಬೆಯನ್ನು ಕೆಳಗಿಳಿಸಲು ಪ್ರಯತ್ನಿಸಲು ಉಪಯೋಗಿಸಿದ ಹಗ್ಗವನ್ನು ವಿಡಿಯೊದಲ್ಲಿ ನೀವು ನೋಡಬಹುದು). ಹಳೇ ಚರ್ಚಿನ ಎಲ್ಲಾ ಧಾರ್ಮಿಕವಸ್ತುಗಳನ್ನು ಮತ್ತು ಹೊಸ ಚರ್ಚಿಗೆ ಬೇಕಾಗುವ ಹಂಚು ಮತ್ತು ಇತರೆ ವಸ್ತುಗಳನ್ನು ನಾವು ಜೋಪಾನವಾಗಿ ಇರಿಸಿದ್ದೇವೆ.

4. ಹೊಸ ಚರ್ಚ್ ನಿರ್ಮಾಣ ಕುರಿತು

2023 ಮೇ ತಿಂಗಳಲ್ಲಿ ವಂದನೀಯ ವಿಶಾಲ್ ಮೋನಿಸ್ ರವರು ದರ್ಮಗುರುಗಳಾಗಿ ಬಂದು ಚರ್ಚ್ ಆದೀನ ಇರುವ 220 ಮನೆಬೇಟಿ ಮಾಡಿ 2022 ಅಕ್ಟೋಬರ್ ನಲ್ಲಿ ಮಾಡಿದ ಚರ್ಚ್ ಪುನರ್ ನಿರ್ಮಾಣದ ಬಗ್ಗೆ ನಿರ್ಧಾರದ ಬಗ್ಗೆ ಸಮೀಕ್ಷೆ ನಡೆಸಿದರು. 190 ಕುಟುಂಬಸ್ಥರು ಹೊಸ ಚರ್ಚ್ ನಿರ್ಮಾಣಕ್ಕೆ ಒಲವು ತೋರಿಸಿದರು. ಹೊಸ ಚರ್ಚ್ ನಿರ್ಮಾಣಯೋಜನೆ ಕಯ್ಯಾರ್ ಭಕ್ತಾಧಿಗಳದ್ದೆ ಹೊರತು ಧರ್ಮಗುರುಗಳದ್ದಲ್ಲ.

5. ಹಳೆ ಚರ್ಚ್ ತೆರವುಗೊಳಿಸುವ ಕುರಿತು
a. 2023 ಮೇ ತಿಂಗಳಲ್ಲಿ ನಡೆದ ಸರ್ವೆ ಪ್ರಕಾರ ಕೇವಲ 23 ಕುಟುಂಬಸ್ಥರು ಮಾತ್ರ ಹಳೆ ಚರ್ಚ್ ದುರಸ್ಥಿ ಮಾಡಲು ಇಚ್ಚಿಸಿದರು.
b. 2025 ಅಕ್ಟೋಬರ್ ತಿಂಗಳಲ್ಲಿ ನಡೆದ ಚರ್ಚ್ ಅರ್ಥಿಕ ಸಮಿತಿಯಲ್ಲಿ 100% ಸದಸ್ಯರು ಹಳೆ ಚರ್ಚ್ ತೆರವು ಗೊಳಿಸಲು ಒಪ್ಪಿಗೆ ಸೂಚಿಸಿದರು. ಹೊಸ ಚರ್ಚ್ ಕಟ್ಟಡ ನಿರ್ಮಾಣ ಸಮಿತಿಯ 100% ಸದಸ್ಯರು ಹಳೆ ಚರ್ಚ್ ತೆರವು ಗೊಳಿಸಲು ಒಪ್ಪಿಗೆ ಸೂಚಿಸಿದರು. ಚರ್ಚ್ ಪಾಲನ ಸಮಿತಿಯ ಸಭೆಯಲ್ಲಿ 92% ಸದಸ್ಯರು ಒಪ್ಪಿಗೆ ಸೂಚಿಸಿದರು. ಚರ್ಚಿನ ಮಹಾಸಭೆಯಲ್ಲಿ 88% ಸದಸ್ಯರು ಒಪ್ಪಿಗೆ ಸೂಚಸಿದರು. ಈ ಎಲ್ಲಾ ಸಭೆಗಳಲ್ಲಿ ಸದಸ್ಯರು ನೀಡಿದ ಆಭಿಪ್ರಾಯವನ್ನು ಧರ್ಮಾದ್ಯಕ್ಷರು ಅಂಗೀಕರಿಸಿದ್ದಾರೆ.

6. ಹಳೆ ಚರ್ಚ್ ಸಂರಕ್ಷಿಸಲು ಕೊಟ್ಟ ಆವಕಾಶಗಳು
a. 2025 ಅಕ್ಟೋಬರ್ ತಿಂಗಳಲ್ಲಿ ನಡೆದ ಮಹಾಸಭೆಯಲ್ಲಿ ಲಿಖಿತ ರೂಪದಲ್ಲಿ ಹಳೆ ಚರ್ಚ್ ಉಳಿಸಲು ಮಾಡಬೇಕಾದ ವಿಷಯದ ಬಗ್ಗೆ ಲಿಖಿತ ರೂಪದಲ್ಲಿ ನೀಡಲಾಗಿತ್ತು. ಇದರ ಪ್ರಕಾರ
i. ಚರ್ಚ್ ದುರಸ್ಥಿ ಮಾಡಲು ಬೇಕಾದ 75 ಲಕ್ಷ ಖರ್ಚು ನೀಡುವವರು ಯಾರು?
ii. ಪೂಜೆ ಅಥವಾ ಇತರ ಸಂಧರ್ಬದಲ್ಲಿ ಆನಾಹುತ ಸಂಭವಸಿದ್ದಲ್ಲಿ ಆದರ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು?
iii. ಹಳೆ ಚರ್ಚ್ ಉಳಿಸಿಕೊಳ್ಳಲು ಬೇಕಾದ Fitness ಮತ್ತು Stability Report, Fire and Safety NOC ಪಡೆಯಲು ಬೇಕಾದ ವ್ಯವಸ್ಥೆ ಮಾಡುವವರು ಯಾರು? ಆದರೆ ಯಾರು ಇದರ ಬಗ್ಗೆ ಈವರೆಗೆ ಜವಾಬ್ದಾರಿ ತೆಗೆದುಕೊಳ್ಳಲು ಮಂದೆಬರಲಿಲ್ಲ.
b. ಹಳೆ ಚರ್ಚ್ ಸಂರಕ್ಷಿಸಲು ಧರ್ಮಾಧ್ಯಕ್ಷರನ್ನು ಭೇಟಿಯಾದ ಸಂದರ್ಭದಲ್ಲಿ ಧರ್ಮಾಧ್ಯಕ್ಷರು ಬಂದ ಸದಸ್ಯರಲ್ಲಿ ‘ತಾವು ಎಷ್ಟು ಹಣವನ್ನು ದುರಸ್ತಿ ಕಾರ್‍ಯಕ್ಕೆ ನೀಡುತ್ತೀರಿ’ ಎಂಬುದನ್ನು ಬರವಣಿಗೆ ಮೂಲಕ ನೀಡುವಂತೆ ತಿಳಿಸಿದರು. ಆದರೆ ಆವರು, ಮರದ ಕೆಲಸ ಮಾಡುವ ಮೂರು ಮಂದಿಯ ಹೆಸರು, ಮೇಸ್ತ್ರಿ ಕೆಲಸ ಮಾಡುವ ಮೂರು ಮಂದಿಯ ಹೆಸರು, ಇಲೆಕ್ಟ್ರೀಶಿಯನ್ ಒಬ್ಬರ ಹೆಸರು ನೀಡಿದರು. ಆದರೆ ಧರ್ಮಾಧ್ಯಕ್ಷರಿಗೆ ಹಣದ ವಿಚಾರದ ಬಗ್ಗೆ ಅಥಾವ ಕಟ್ಟಡಕ್ಕೆ ಬೇಕಾಗುವ ಮರಮಟ್ಟು ಮತ್ತು ಸಲಕರಣೆ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
c. ಧರ್ಮಾಧ್ಯಕ್ಷರ ಆದೇಶದ ಪ್ರಕಾರ ಜನವರಿ 2026 ರಿಂದ ಮೂರು ಆದಿತ್ಯವಾರ ’ಹಳೆ ಚರ್ಚ್ ದುರಸ್ತಿಗೆ ಬೇಕಾಗುವ ಹಣದ ವಿಷಯದಲ್ಲಿ ವಿವರ ಲಿಖಿತ ರೂಪದಲ್ಲಿ ನೀಡಲು ಕೋರಲಾಗಿತ್ತು. ಆದರೆ ಯಾರೊಬ್ಬರೂ ಈ ಬಗ್ಗೆ ಜವಾಬ್ದಾರಿ ತಗೆದುಕೊಂಡು ಲಿಖಿತ ರೂಪದಲ್ಲಿ ನೀಡಲಿಲ್ಲ.
7. ಹೊಸ ಚರ್ಚ್ ಕಟ್ಟಡಕ್ಕೆ ಕಟ್ಟಡ ಸಂಖ್ಯೆ ಸಿಗಲು ಹಳೆಯ ಚರ್ಚ್ ತೆರವುಗೊಳಿಸುವುದು ಅನಿವಾರ್ಯ
ಹೊಸ ಚರ್ಚ್ ಕಟ್ಟಡದ ಪರವಾನಿಗೆ ಮತ್ತು ಶಾಲೆಯ ಕಟ್ಟಡ ಸಂಖ್ಯೆ ಪಡೆಯಲು ಕೆಲಸಮಾಡಿದ ಶ್ರೀ ಶ್ರೀನಿವಾಸ ಪೈ ಉಪ್ಪಳ ಆವರ ಪ್ರಕಾರ Town Planning Director, Kasaragod ಹೊಸ ಚರ್ಚ್ completion report, ಕಟ್ಟಡ ಸಂಖ್ಯೆ ಪಡೆಯಬೇಕಾದರೆ ಹಳೆ ಚರ್ಚ್ ತೆರವುಗೊಳಿಸುವಂತೆ ನಮಗೆ ತಿಳಿಸಿರುತ್ತಾರೆ.
8. ಹಳೆ ಚರ್ಚ್ ಬೇಗನೆ ತೆರವುಗೊಳಿಸಿದ ಬಗ್ಗೆ: ಕೆಲವರು ಹಳೆ ಚರ್ಚ್ ಕಟ್ಟಡವನ್ನು ಯಾವುದೇ ಮಾಹಿತಿ ನೀಡದೆ ತೆರವುಗೊಳಿಸಿದ್ದೇವೆ ಎಂದು ದೂರಿರುತ್ತಾರೆ. ಇದರ ಬಗ್ಗೆ
a. 26 ಅಕ್ಟೋಬರ್ 2025, ಉಪಾದ್ಯಕ್ಷರಾದ ನಾನು, ಕಾಸರಗೋಡು ವಲಯ ಪ್ರಧಾನ ಧರ್ಮಗುರುಗಳ ಸಮಕ್ಷಮದಲ್ಲಿ ಚರ್ಚ್ ಆರ್ಥಿಕ ಸಮಿತಿ, ಚರ್ಚ್ ಕಟ್ಟಡ ಸಮಿತಿ ಮತ್ತು ವಾರ್ಡ್ ಗುರಿಕಾರರ ಸಭೆಯಲ್ಲಿ ‘ಸರ್ಕಾರಿ ಆದೇಶ ಹಾಗೂ ಧರ್ಮಾಧ್ಯಕ್ಷರ ಆದೇಶ ಪಾಲಿಸಲು ಎಲ್ಲರು ಬದ್ದರು ಎಂದು ತೀರ್ಮಾನ ತೆಗೆದುಗೊಂಡ ಬಗ್ಗೆ ಭಕ್ತಾಧಿಗಳಿಗೆ ಮಾಹಿತಿ ನೀಡಿದ್ದರು.

b. 09 ಫೆಬ್ರವರಿ 2026 ರಂದು ಆರ್ಥಿಕ ಸಮಿತಿ, ಚರ್ಚ್ ಕಟ್ಟಡ ಸಮಿತಿ ಮತ್ತು ವಾರ್ಡ್ ಗುರಿಕಾರರ ಸಭೆಯಲ್ಲಿ ‘ಚರ್ಚ್ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಇದರಂತೆ ಧರ್ಮಾಧ್ಯಕ್ಷರ ಆದೇಶ ಬಂದ ಕೂಡಲೇ ಪೂಜೆ ಮತ್ತು ಇತರೇ ವಿಧಿವಿಧಾನಗಳನ್ನು ಕ್ರಿಸ್ತ ರಾಜ ಮಿನಿ ಹಾಲ್ ನಲ್ಲಿ ನಡೆಸುವಂತೆ ಹಳೆ ಚರ್ಚಿನ ಎಲ್ಲಾ ವಸ್ತುಗಳನ್ನು ತೆರವುಗೊಳಿಸುವಂತೆ ನಿರ್ಧರಿಸಲಾಯಿತು.

9. NITK ರಿಪೋರ್ಟ್ ಕೊಟ್ಟ ಬಗ್ಗೆ
NITKಯವರು Fitness ಕೊಟ್ಟಿದ್ದಾರೆ ಎಂದು ಕೆಲವರು ಹೇಳುವಂತೆ ಈ ರಿಪೋರ್ಟ್ ಕೇವಲ ಕಟ್ಟಡ ಪರಿಶೀಲನೆಯ ವರದಿ ಮಾತ್ರವಾಗಿದ್ದು, ಆದು Fitness Report ಆಗಿರುವುದಿಲ್ಲ. Fitness Report ಕೊಡುವ ಆಧಿಕಾರ ಕೇರಳದಲ್ಲಿ ಸ್ಥಳೀಯ ಆಡಳಿತಕ್ಕೆ ಮಾತ್ರ ಇರುವುದು. NITK ರಿಪೋರ್ಟ್ ಚರ್ಚಿನ ಧರ್ಮಗುರುಗಳ ಮತ್ತು ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಅನಧೀಕೃತವಾಗಿ ಮಾಡಿರುತ್ತಾರೆ. ಈ ವರದಿಯು ಶ್ರೀಮತಿ ಕ್ಯಾರೊಲಿನ್ ಅವರ ಹೆಸರಿನಲ್ಲಿ ಸಲ್ಲಿಕೆ ಮಾಡಿದ್ದು ಧರ್ಮಗುರುಗಳ ಆಥಾವಾ ಧರ್ಮಧ್ಯಕ್ಷರ ಹೆಸರಿನಲ್ಲಿ ಸಲ್ಲಿಕೆಯಾಗಿಲ್ಲ.

10. ಹೊಸ ಚರ್ಚ್ ನಿರ್ಮಾಣ ಜೊತೆಗೆ ಬಡವರಿಗಾಗಿ 5 ಮನೆ ನಿರ್ಮಾಣ
ನಮ್ಮ ಧರ್ಮಗುರುಗಳ ನೇತೃತ್ವದಲ್ಲಿ ಕಯ್ಯಾರ್ ನಲ್ಲಿ ಹೊಸ ಚರ್ಚ್ ನಿರ್ಮಾಣದ ಜೊತೆಗೆ ಬಡವರಿಗಾಗಿ ಈಗಾಗಲೇ 24 ಲಕ್ಷ ರುಪೈ ಖರ್ಚಿನಲ್ಲಿ ಮೂರು ಹೊಸ ಮನೆಗಳನ್ನು ಕಟ್ಟಿ ಹಸ್ತಾಂತರ ಮಾಡಲಾಗಿದೆ. Konkani Cultural Organization, ಆಭುಧಾಬಿ ಇವರ ಸಹಕಾರದೊಂದಿಗೆ, 16 ಲಕ್ಷ ರುಪೈ ವೆಚ್ಚದ ಇನ್ನೂ ಎರಡು ಹೊಸ ಮನೆಗಳು ನಿರ್ಮಾಣ ಹಂತದಲ್ಲಿದ್ದು, ಎರಡು ತಿಂಗಳಲ್ಲಿ ಹಸ್ತಾಂತರಗೊಳ್ಳಲಿವೆ.

11. ಹೊಸ ಚರ್ಚ್ ನಿರ್ಮಾಣ ಕೆಲಸ

ಕಯ್ಯಾರ್ ನಲ್ಲಿ ಗುತ್ತಿಗೆದಾರರಿಲ್ಲದೆ ಚರ್ಚ್ ಭಕ್ತಾದಿಗಳ ಸಹಕಾರ, ದಾನ ಮತ್ತು ಕೆಲಸದಿಂದ ಈಗಾಗಲೇ ಧರ್ಮಗುರುಗಳ ನಿವಾಸ, ಚರ್ಚ್ ಕಛೇರಿ ಮತ್ತು ಸುಮಾರು 500 ಮಂದಿಯ ಸಾಮರ್ಥ್ಯವಿರುವ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿದ್ದು ಪೂಜೆ ಮತ್ತು ಇತರೇ ವಿಧಿವಿಧಾನಗಳನ್ನು ಇಲ್ಲಿ ನಡೆಸುತ್ತಿದ್ದೇವೆ. ಹೊಸ ಚರ್ಚಿನ ಕಾಮಾಗಾರಿ ಸುಮಾರು 40% ಮುಕ್ತಾಯಗೊಂಡಿದ್ದು ಆಧಿಕ ಸಂಖ್ಯೆಯಲ್ಲಿ ಚರ್ಚಿನ ಭಕ್ತಾಧಿಗಳು ತನು ಮನ ಧನಗಳಿಂದ ಸಹಕರಿಸುತ್ತಾ ಇದ್ದಾರೆ.

12. ಹಳೆಚರ್ಚ್ ತೆರವುಗೊಳಿಸುವಲ್ಲಿ ಧರ್ಮಗುರುಗಳ ಪಾತ್ರ
ಹೊಸ ಚರ್ಚ್ ಕಟ್ಟುವುದು ಮತ್ತು ಹಳೆ ಚರ್ಚ್ ತೆರವುಗೊಳಿಸುವ ನಿರ್ಧಾರ ಸಂಪೂರ್ಣವಾಗಿ ಚರ್ಚಿನ ಭಕ್ತಾಧಿಗಳ ತೀರ್ಮಾನವಾಗಿದ್ದು ಆ ನಿರ್ಧಾರದಲ್ಲಿ ಧರ್ಮಗುರುಗಳ ಪಾತ್ರವಿಲ್ಲ. ಚರ್ಚಿನ ಎಲ್ಲಾ ಆಡಳಿತ ಸಭೆಗಳಲ್ಲಿ ಮಂಡಿಸಿ ಬಹುಮತದಿಂದ ಮಂಜೂರಾದ ತೀರ್ಮಾನವನ್ನು ಚರ್ಚ್ ಆರ್ಥಿಕ ಪರಿಶದ್ ಕಾರ್‍ಯಗತಗೊಳಿಸಿದೆ. ಇಲ್ಲಿ ಬೆರಳೆಣಿಕೆಯ ಸದಸ್ಯರು ಹಳೆ ಚರ್ಚ್ ಸಂರಕ್ಷಿಸಲು ಕೊಟ್ಟ ಮನವಿಯನ್ನು ಚರ್ಚ್ ಆಡಳಿತ ಮಂಡಳಿ ತಿರಸ್ಕರಿಸಿರುವುದರಿಂದ ಕುಪಿತರಾಗಿ ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹರಿಯಬಿಟ್ಟಿರುತ್ತಾರೆ.

13. ಮುಂದಿನ ಯೋಜನೆಗಳು
ಹಳೆ ಚರ್ಚ್ ಕಟ್ಟಡ ಶಾಲಾ ಮೈದಾನದ ನಡು ಭಾಗದಲ್ಲಿದ್ದು ತೆರವುಗೊಳಿಸಿರುವುದರಿಂದ ಶಾಲೆಗೆ ಬೇಕಾದ ವಿಶಾಲವಾದ ಮೈದಾನ ನಿರ್ಮಾಣ, 400 ಮೀಟರ್ ಟ್ರ್ಯಾಕ್, ಫುಟ್ ಬಾಲ್ ಮೈದಾನ, ಹೈಸ್ಕೂಲ್ ಕಟ್ಟಡ ನಿರ್ಮಾಣ ಮುಂದಿನ ಯೋಜನೆಯಾಗಿರುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Share News
Exit mobile version