• Home  
  • ವಿಟ್ಲ,ಕಥೊಲಿಕ್ ಸಭಾ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ
- COMMUNITY NEWS

ವಿಟ್ಲ,ಕಥೊಲಿಕ್ ಸಭಾ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

ವಿಟ್ಲ: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ವಿಟ್ಲ ವಲಯ ಇದರ ಪ್ರಸ್ತುತ ಅವಧಿಯ ವಲಯ ಹಾಗೂ ವಿವಿಧ ಘಟಕಗಳ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಿಗಾಗಿ ಕೇಂದ್ರೀಯ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರವು ಜು. 26 ರಂದು ವಿಟ್ಲ ಚರ್ಚ್‌ನ ಸಮುದಾಯ ಭವನದ ಮಿನಿ ಸಭಾಂಗಣದಲ್ಲಿ ನಡೆಯಿತು..ತರಬೇತುದಾರರಾಗಿ ಆಗಮಿಸಿದ್ದ ಕೇಂದ್ರೀಯ ಸಮಿತಿ ಮಾಜಿ ಅಧ್ಯಕ್ಷ ಹಾಗೂ ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಂತರ ಮಾತನಾಡಿದ ಅವರು, ನಮ್ಮ ಸಂಘಟನೆಯು ‘ಸೇವೆ, ತ್ಯಾಗ ಮತ್ತು […]

Share News

ವಿಟ್ಲ: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ವಿಟ್ಲ ವಲಯ ಇದರ ಪ್ರಸ್ತುತ ಅವಧಿಯ ವಲಯ ಹಾಗೂ ವಿವಿಧ ಘಟಕಗಳ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಿಗಾಗಿ ಕೇಂದ್ರೀಯ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರವು ಜು. 26 ರಂದು ವಿಟ್ಲ ಚರ್ಚ್‌ನ ಸಮುದಾಯ ಭವನದ ಮಿನಿ ಸಭಾಂಗಣದಲ್ಲಿ ನಡೆಯಿತು..ತರಬೇತುದಾರರಾಗಿ ಆಗಮಿಸಿದ್ದ ಕೇಂದ್ರೀಯ ಸಮಿತಿ ಮಾಜಿ ಅಧ್ಯಕ್ಷ ಹಾಗೂ ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಂತರ ಮಾತನಾಡಿದ ಅವರು, ನಮ್ಮ ಸಂಘಟನೆಯು ‘ಸೇವೆ, ತ್ಯಾಗ ಮತ್ತು ಐಕ್ಯತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ತತ್ವಗಳನ್ನು ಮೈಗೂಡಿಸಿಕೊಂಡು, ನಾವು ಸಮಾಜದಲ್ಲಿ ಸಂಕಷ್ಟದಲ್ಲಿರುವ ಹಾಗೂ ಅಗತ್ಯವಿರುವ ಜನರಿಗಾಗಿ ಸದಾ ಧ್ವನಿಯಾಗಬೇಕು” ಎಂದು ಪದಾಧಿಕಾರಿಗಳಿಗೆ ಕರೆ ನೀಡಿದರು.ವೇದಿಕೆಯಲ್ಲಿ ಕೇಂದ್ರೀಯ ಸಮಿತಿ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ವಾಲೆನ್ಸಿಯ ಹಾಗೂ ವಿಟ್ಲ ಚರ್ಚ್ ಪಾಲನಾ ಪರಿಷತ್‌ ಉಪಾಧ್ಯಕ್ಷ ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಲೂವಿಸ್ ಮಸ್ಕರೇನಸ್ ಸ್ವಾಗತಿಸಿದರು. ಕಾರ್ಯದರ್ಶಿ ತೋಮಸ್ ಮಸ್ಕರೇನಸ್ ಧನ್ಯವಾದ ಸಮರ್ಪಿಸಿದರು. ಖಜಾಂಚಿ ರಾಲ್ಫ್‌ ಡಿಸೋಜ ಸಹಕರಿಸಿದರು. ಮನೋಹರ್ ಲ್ಯಾನ್ಸಿ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಾಗಾರದಲ್ಲಿ ವಲಯ ಪದಾಧಿಕಾರಿಗಳು ಹಾಗೂ ವಿಟ್ಲ, ಮೊಗರ್ನಾಡ್, ಶಂಭೂರ್, ಸಾಲೆತ್ತೂರ್, ಪೆರುವಾಯಿ, ಮಣೆಲಾ ಮತ್ತು ದೇಲಂತಬೆಟ್ಟು ಚರ್ಚ್‌ಗಳ ಘಟಕಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ತರಬೇತಿಯ ಸದುಪಯೋಗ ಪಡೆದುಕೊಂಡರು.

Share News