ಮಂಗಳೂರು: ಶ್ರೀ ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತ ಧರ್ಮದ ಪಾದ್ರಿಗಳು, ಪಾಸ್ಟರ್ಗಳು, ಸನ್ಯಾಸಿನಿಯರು (ಸಿಸ್ಟರ್ಗಳು) ಹಾಗೂ ನಮ್ಮ ಕರ್ತನಾದ ಯೇಸು ಕ್ರಿಸ್ತರ ವಿರುದ್ಧ ಅತ್ಯಂತ ಅವಮಾನಕಾರಿ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿರುವುದು ಇತ್ತೀಚೆಗೆ ಒಂದು ವೀಡಿಯೋವನ್ನು ನೋಡಿದೆ, ಇಂತಹ ದ್ವೇಷಪೂರಿತ ಮಾತುಗಳನ್ನು ಒಂದು ಧಾರ್ಮಿಕ ಸಮುದಾಯ ಹಾಗೂ ಅದರ ನಂಬಿಕೆಗೆ ವಿರುದ್ಧವಾಗಿ ಬಳಸಿರುವುದು ತುಂಬಾ ನೋವುಂಟು ಮಾಡಿದೆ. ಎಂದುಮಂಗಳೂರು ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜಾ ಪತ್ರಿಕ ಹೇಳಿಕೆಯಲ್ಲಿ ತಿಳಿಸಿದರು

ಹಿಂದೆ ಅವರು ಶಾಲೆಗಳ ಕ್ರಿಸ್ಮಸ್ ರಜೆಯ ಕುರಿತು ಮಾತನಾಡಿದ ಸಂದರ್ಭದಲ್ಲಿ, ಪ್ರತಿಯೊಂದು ಅಸಮಂಜಸ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂಬ ಭಾವನೆಯಿಂದ ನಾನು ಅದನ್ನು ಖಂಡಿಸಲಿಲ್ಲ. ಆದರೆ ಈ ಬಾರಿ ಅವರು ಎಲ್ಲ ಮಿತಿಗಳನ್ನು ಮೀರಿ ಹೋಗಿದ್ದಾರೆ. ಧಾರ್ಮಿಕ ಗುರುಗಳನ್ನು ನಿಂದಿಸುವುದು ಮತ್ತು ಯೇಸು ಕ್ರಿಸ್ತರನ್ನು ಅವಮಾನಿಸುವುದು ಕೇವಲ ಅಪಮಾನಕರವೇ ಅಲ್ಲ, ಅದು ನಮ್ಮ ಸಂವಿಧಾನದ ಮೌಲ್ಯಗಳು ಹಾಗೂ ಸಾಮಾಜಿಕ ಸೌಹಾರ್ದತೆಗೆ ಗಂಭೀರ ಧಕ್ಕೆ ನೀಡುವ ಕೃತ್ಯವಾಗಿದೆ.
ಇಂತಹ ಹೇಳಿಕೆಗಳು ಮಾನಸಿಕ ಅಸಮತೋಲನ ಮತ್ತು ಅಸಹಿಷ್ಣುತೆಯ ಮನೋಭಾವವನ್ನು ತೋರಿಸುತ್ತವೆ ಹಾಗೂ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಬಲವಾಗಿ ಆಗ್ರಹಿಸುತ್ತೇನೆ.
ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ, ಕ್ರೈಸ್ತ ಸಮುದಾಯವು ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನಬದ್ಧ ಮಾರ್ಗಗಳಲ್ಲಿ ಪ್ರತಿಭಟನೆ ನಡೆಸಲು ಬಾಧ್ಯವಾಗುತ್ತದೆ. ಎಲ್ಲಾ ಸಮುದಾಯಗಳ ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ್ದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ.
ನಾವು ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ನಂಬುತ್ತೇವೆ. ಆದರೆ ನಮ್ಮ ಧರ್ಮ ಮತ್ತು ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದಾಗ ನಾವು ಮೌನವಾಗಿರುವುದಿಲ್ಲ.ಎಂದು ಸಂತೋಷ್ ಡಿಸೋಜಾ
ಅದ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

