ಮಂಗಳೂರು: ಶ್ರೀ ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಶ್ರೀ ಸಂಸ್ಥಾನದ ದಶಮ ಸಂಭ್ರಮದ ಸಂಕಲ್ಪ “ಬಂಟ ಸಂಸ್ಜೃತಿ ಪರಂಪರೆ ಅನಾವರಣ” ದಕ್ಷಿಣ ಕನ್ನಡ ಜಿಲ್ಲಾ ಮಹಾ ಮಂಡಲದ ಪದಗ್ರಹಣ ಸಮಾರಂಭ ಅಕ್ಟೋಬರ್ 19 ರಂದು ಭಾನುವಾರ ಸಂಜೆ 3 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿರುವ ವಿ.ಕೆ. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಂಟ್ಸ್ ಹಾಸ್ಟೇಲ್ ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಬಿಡುಗಡೆ ಗೊಂಡಿತು.
ಶ್ರೀ ಬಾರ್ಕೂರು ಮಹಾಸಂಸ್ಥಾನ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಮಹಾ ಸಂಸ್ಥಾನದ ದಶಮ ಸಂಭ್ರಮವನ್ನು ಯಶಸ್ಸು ಗೊಳಿಸಲು ಎಲ್ಲರ ಸಹಕಾರ ಬೇಕು ಎಂದು ಡಾ ಮೋಹನ್ ಆಳ್ವ ತಿಳಿಸಿದರು.
ಡಾl ಎಂ. ಮೋಹನ್ ಆಳ್ವ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಂಟ ಪ್ರಮುಖರೆಲ್ಲರು ಕಾರ್ಯಕ್ರಮದ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದರು.
ಜಿಲ್ಲಾ ಮಹಾಮಂಡಲ, ತಾಲೂಕು ಮಂಡಲ ಸಹಿತ 8 ಮಂಡಲಗಳ ಪದಗ್ರಹಣ ನಡೆಯಲಿದ್ದು ಜವಾಬ್ದಾರಿಗಳನ್ನು ಹಂಚಿ ಕೊಡಲಾಯಿತು. ಪ್ರತೀ ಘಟಕಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವಂತೆ ವಿವಿಧ ಬಂಟರ ಸಂಘಗಳ ಮುಖಂಡರಿಗೆ ಜವಾಬ್ದಾರಿ ನೀಡಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಮಹಾಮಂಡಲದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದ. ಕ. ಮಹಾ ಮಂಡಲ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್, ಸಂಸ್ಥಾನದ ವಕ್ತಾರ ಕೆ ರಾಜೇಶ್ ಶೆಟ್ಟಿ ಶಬರಿ, ಮಹಾ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಕಂಫಟ್೯, ಪ್ರಧಾನ ಸಂಚಾಲಕ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಕೋಶಾಧಿಕಾರಿ ಆನಂದ ಶೆಟ್ಟಿ ತೊಕ್ಕೊಟ್ಟು, ಮಂಗಳೂರು ಮಂಡಲದ ಗೌರವಾಧ್ಯಕ್ಷ ನಿಟ್ಟೆಗುತ್ತು ರವಿರಾಜ್ ಶೆಟ್ಟಿ ಮಂಡಲದ ಸಂಚಾಲಕರಾದ ಕಿಶೋರ್ ಭಂಡಾರಿ ಬೆಳ್ಳೂರು, ಲೋಕೇಶ್ ಶೆಟ್ಟಿ ಕುಳ ಬಂಟ್ವಾಳ, ಉಮೇಶ್ ರೈ ಪದವು ಮೇಗಿನ ಮನೆ ಉಪಸ್ಥಿತರಿದ್ದರು.
ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿ ಪ್ರಸ್ತಾವನೆಗೈದರು. ಚಂದ್ರಹಾಸ ಶೆಟ್ಟಿ ವಂದಿಸಿದರು. ರವಿ ರೈ ಫಜೀರ್ ಕಾರ್ಯಕ್ರಮ ನಿರ್ವಹಿಸಿದರು.


